ಗಂಗೊಳ್ಳಿಯಲ್ಲಿ ಮತ್ತೆ ಬೈಕಿಗೆ ಬೆಂಕಿ: ನಸುಕಿನ ಜಾವ ಬೆಂಕಿ ಹಾಕಿದ ಕಿಡಿಗೇಡಿಗಳು

ಗಂಗೊಳ್ಳಿಯಲ್ಲಿ ಮತ್ತೆ ಬೈಕಿಗೆ ಬೆಂಕಿ ಹಿಡಿದು ಕರಟಿಹೋದ ಘಟನೆ ವರದಿಯಾಗಿದೆ. ಗೋಪಾಲ ಶೇರಿಗಾರ್ ಅವರ ಬಾಡಿಗೆ ಮನೆಯ ಎದುರು ನಿಲ್ಲಿಸಿದ್ದ ಬೈಕ್ ಗೆ ನಸುಕಿನ ಜಾವ ಬೆಂಕಿ ಹಾಕಿದ ಕಿಡಿಗೇಡಿಗಳು. ಈ ಬೈಕ್ ಬದ್ರುದ್ದೀನ್ ಎನ್ನುವವರದ್ದಾಗಿದ್ದು ಸೂಕ್ತ ತನಿಖೆಗೆ ಮುಸ್ಲೀಂ ಮುಖಂಡರು ಒತ್ತಾಯ ಮಾಡಿದ್ದಾರೆ. ಕಳೆದ ವಾರದಿಂದಲೂ ನಡೆಯುತ್ತಿರುವ ಘಟನೆಗಳಿಂದ ವಿಚಲಿತರಾದ ಮುಸ್ಲೀಂ ಸಮುದಾಯದವರು ಅಂಗಡಿಗಳನ್ನು ಬಂದ್ ಮಾಡಿ ಹರತಾಳ ನಡೆಸುತ್ತಿದ್ದಾರೆ. ಹಾಗೂ ಎಸ್ಪಿ ಸ್ಥಳಕ್ಕೆ ಬರುವಂತೆ ಒತ್ತಾಯ ಮಾಡುತಿದ್ದಾರೆ. ಈಗ ಸ್ಥಳದಲ್ಲಿ ಗೊಂದಲದ ವಾತಾವರಣ ಕವಿದಿದ್ದು ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದೆ. ಡಿವೈಎಸ್ಪಿ ಪ್ರವೀಣ ನಾಯ್ಕ್ ಸ್ಥಳದಲ್ಲಿ ಮೊಕ್ಕಾಂ … Continue reading ಗಂಗೊಳ್ಳಿಯಲ್ಲಿ ಮತ್ತೆ ಬೈಕಿಗೆ ಬೆಂಕಿ: ನಸುಕಿನ ಜಾವ ಬೆಂಕಿ ಹಾಕಿದ ಕಿಡಿಗೇಡಿಗಳು