ಮಂಗಳೂರು; ಮತೀಯ ದ್ವೇಷ ಬಿತ್ತುವ ಮತ್ತು ಮಹಿಳೆಯ ಘನತೆಗೆ ಕುಂದು ತರುವಂತಹ ಸಂದೇಶಗಳನ್ನು ವಾಟ್ಸ್ ಆ್ಯಪ್ ಗುಂಪಿನಲ್ಲಿ ರವಾನೆ ಮಾಡಿದ ಆರೋಪದ ಮೇಲೆ ವಾಟ್ಸ್ ಆ್ಯಪ್ ಗುಂಪೊಂದರ ಅಡ್ಮಿನ್ ಸೇರಿದಂತೆ ಇಬ್ಬರನ್ನನು ಬಂಟ್ವಾಳ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೆ ಎಸ್ ಆರ್ ಟಿ ಸಿ ಡ್ರೈವರ್ ಬಾಲಕೃಷ್ಣ ಪೂಜಾರಿ ಹಾಗೂ ಬಂಟ್ವಾಳ ಇರಾದ ಸತೀಶ್ ಶೆಟ್ಟಿ ಬಂಧಿತರು. ಇವರಿಬ್ಬರು ಪಣೋಲಿಬೈಲ್ ಮತ್ತು ಮೌರಿ ಎನ್ನುವ ವಾಟ್ಸಪ್ ಗ್ರೂಪ್ ಅಡ್ಮಿನ್ ಆಗಿದ್ದು ಈ ಗ್ರೂಪ್ ನಲ್ಲಿ ಕೋಮುದ್ವೇಷ ಮೂಡಿಸುವಂತಹ ಸಂದೇಶಗಳನ್ನು ಹಾಕಿದ್ದರು.
ಆರೋಪಿಗಳು ಧರ್ಮದ ನೆಲೆಯಲ್ಲಿ ದ್ವೇಷ ಹುಟ್ಟಿಸುವ ಮತ್ತು ಮಹಿಳೆಯೊಬ್ಬರ ಚಾರಿತ್ರ್ಯಹನನ ಮಾಡುವಂತಹ ಸಂದೇಶಗಳನ್ನು ರವಾನಿಸಿದ್ದರು. ಅವರ ವಿರುದ್ಧ ಮತೀಯ ದ್ವೇಷ ಸೃಷ್ಟಿಸಲು ಯತ್ನ, ಸಮಾಜದಲ್ಲಿ ಶಾಂತಿ ಕದಡಲು ಯತ್ನ ಮತ್ತು ಮಹಿಳೆಯ ಘನತೆಗೆ ಧಕ್ಕೆ ತರಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.