ಮಂಗಳೂರು; ಮಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ರೈಲು 16630 ರಲ್ಲಿ ನಿಷೇಧಿತ ತಂಬಾಕನ್ನು ಸಾಗಿಸುತ್ತಿದ್ದ ಓರ್ವನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ದಿನೇಶ್ ಚೌಹಾನ್ ಎಂಬಾತ ರೈಲಿನ ಎಸ್ 9 ಬೋಗಿಯಲ್ಲಿ ನಾಲ್ಕು ಬ್ಯಾಗ್ ಗಳೊಂದಿಗೆ ಪ್ರಯಾಣಿಸುತ್ತಿದ್ದನು.
ಆತನ ಬ್ಯಾಗ್ ತಪಾಸಣೆ ಮಾಡುವ. ಸಂದರ್ಭದಲ್ಲಿ ಬ್ಯಾಗ್ ನಲ್ಲಿ 60 ಸಾವಿರ ಮೌಲ್ಯದ 60 ಕೆ ಜಿ ತಂಬಾಕು ಪತ್ತೆಯಾಗಿದೆ. ತಂಬಾಕನ್ನು ವಶಪಡಿಸಿಕೊಂಡ ರೈಲ್ವೆ ಪೊಲೀಸರು ದಿನೇಶ್ ಚೌಹಾನ್ ನನ್ನು ಬಂಧಿಸಿದ್ದಾರೆ