ಉಡುಪಿ: ರಾಜ್ಯ ಕ್ರೀಡಾ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ದೋಷಾರೋಪಣಾ ಪಟ್ಟಿ ಬಿಡುಗಡೆಗೊಳಿಸಿದೆ.
ಐದು ವರ್ಷದ ಆಡಳಿತದ ವೈಫಲ್ಯ ಉಲ್ಲೇಖಿಸಿ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್, ಉಡುಪಿಯಲ್ಲಿ ಗಣನೀಯ ಅಭಿವೃದ್ಧಿ ಆಗಿಲ್ಲ. 2000 ಕೋಟಿ ರುಪಾಯಿ ತಂದಿರುವುದಾಗಿ ಬೊಗಳೆ ಬಿಟ್ಟಿದ್ದಾರೆ. 500 ಕೋಟಿ ರೂಪಾಯಿ ಜಿಲ್ಲಾಸ್ಪತ್ರೆ ಹಗಲು ಕನಸಾಗಿದೆ ಎಂದು ಆರೋಪಿಸಿದರು.
ಮಹಿಳಾ ಮಕ್ಕಳ ಆಸ್ಪತ್ರೆ ಖಾಸಗಿಯವರಿಗೆ ಕೊಡಲಾಗಿದೆ. ರಸ್ತೆಗಳ ಸಮಗ್ರ ಅಭಿವೃದ್ಧಿಯಲ್ಲಿ ಸಚಿವರು ವಿಫಲರಾಗಿದ್ದಾರೆ. ಪಿ.ಜಿ ಸೆಂಟರ್ ಕ್ಷೇತ್ರದಿಂದ ಕೈತಪ್ಪಿದೆ. ಸಚಿವರು ಬ್ರಹ್ಮಾವರ ಪುರಸಭೆ ಮಾಡಿಲ್ಲ. ಬಹುಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿದೆ. ಮಧ್ವರಾಜ್ ರಿಂದ ಮರಳು ಮಾಫಿಯಾ ಸೃಷ್ಟಿಯಾಗಿದೆ. ಮೋನೊ ರೈಲು, ಗ್ಯಾಸ್ ಪೈಪ್ ಲೈನ್ ಇನ್ನೂ ಜಾರಿಯಾಗಿಲ್ಲ ಎಂದು ಆರೋಪಿಸಿದರು.
ಕ್ರೀಡಾ ಕಿಟ್ ವಿತರಣೆಯಲ್ಲಿ ಅವ್ಯವಹಾರ ಆಗಿದೆ. 15 ಸಾವಿರದ ಕಿಟ್ ಅನ್ನು 40 ಸಾವಿರ ರೂಪಾಯಿಗೆ ಖರೀದಿಲಾಗಿದೆ. ಕ್ರೀಡಾ ಸಚಿವರಾಗಿ ಮಧ್ವರಾಜ್ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಉಡುಪಿಗೆ ಸಚಿವನಾಗಿ ಏನೂ ಉಪಯೋಗವಾಗಿಲ್ಲ. 7 ಜನ ಜಿಲ್ಲಾಧಿಕಾರಿ ವರ್ಗಾವಣೆಯಾದರು. 6 ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆ ಆಯ್ತು. ಉಡುಪಿಯಲ್ಲಿ ಫ್ಲೆಕ್ಸ್ ಅಂಗಡಿಗಳು ಅಭಿವೃದ್ಧಿಯಾಗಿದೆ ಬಿಟ್ಟರೆ ಉಡುಪಿ ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ವಾಗ್ದಾಳಿ ನಡೆಸಿದರು.
ಸಚಿವ ಮಧ್ವರಾಜ್ ಗೆ ಬಿಜೆಪಿ ಬಹಳ ಕಿರುಕುಳ ಕೊಡುತ್ತಿದೆ!- ಮಾಧ್ಯಮದ ಮುಂದೆ ದೂರು ನೀಡಿದ ಸಿದ್ದರಾಮಯ್ಯ