ಮಂಡ್ಯ: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಟಿಕೆಟ್ ಆಕಾಂಕ್ಷಿ ಗಣಿಗ ರವಿಕುಮಾರ್ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂರಾರು ಚೇರ್ಗಳನ್ನು ಧ್ವಂಸ ಮಾಡಿದ್ದಾರೆ. ಪಕ್ಷದ ಬ್ಯಾನರ್ ಹರಿದು ದಾಂಧಲೆ ನಡೆಸಿದ್ದಾರೆ.
ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮುಂದೆಯೇ ದಾಂಧಲೆ ಮಾಡಿದ್ದಾರೆ. ಅಂಬರೀಶ್ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಲ್ಲದೆ, ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ರವಿಕುಮಾರ್ಗೆ ಘೋಷಿಸುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿಯಾಗಿದ್ದ ಗಣಿಗ ರವಿಕುಮಾರ್ ಬಂಡಾಯವೆದಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಅಂಬಿ ನನಗೆ ಮೋಸ ಮಾಡಿದ್ದಾರೆ, ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಅರ್ಜಿಹಾಕದೆ ಇರುವವರಿಗೂ ಟಿಕೆಟ್ ನೀಡ್ತಾರೆ ಅನ್ನೋದಕ್ಕೆ ಇದು ನಿದರ್ಶನವಾಗಿದೆ ಅಂತ ತಮ್ಮ ಅಸಮಾಧಾನವನ್ನು ಹೇಳಿದ್ದಾರೆ.
ಇದೇ ವೇಳೆ ಅವರು ನಾವೆಲ್ಲಾ ಸರದಿಯಲ್ಲಿ ನಿಂತು ಅರ್ಜಿಹಾಕಿದ್ರೆ, ಅಂಬರೀಶ್ ಸರದಿಯಲ್ಲೆ ನಿಲ್ಲದೆ ಟಿಕೆಟ್ ಪಡೆದಿದ್ದಾರೆ. ಅಂಬರೀಶ್ ಕಳೆದ ಬಾರಿ ನನ್ನ ಕೊನೆ ಚುಣಾವಣೆ ಎಂದು ಹೇಳಿ ನನ್ನ ಸಹಾಯ ಪಡೆದಿದ್ರು, ಕಳೆದ ಚುಣಾವಣೆಯಲ್ಲಿ ಅಂಬರೀಶ್ ಕ್ಷೇತ್ರಕ್ಕೆ ಬರದಿದ್ದರೂ ನಾನು ಅವರ ಪರವಾಗಿ ಕೆಲ್ಸ ಮಾಡಿ ಅಂಬರೀಶ್ ಗೆಲ್ಲಿಸಿದ್ದೆ. ಆದರೆ ಈ ಬಾರಿ ಚುನಾವಣೆಯಲ್ಲಿ ಅಂಬರೀಶ್ ಗೆಲ್ಲಲ್ಲ , ನಾನು ಸೋಲಲ್ಲ ಅಂತ ಅಂಬರೀಶ್ ಗೆ ರವಿಕುಮಾರ್ ಗಣಿಗ ಅವರು ಸವಾಲು ಹಾಕಿದ್ದಾರೆ.
ಇದೇ ವೇಳೆ ಅವರು ಮಂಗಳವಾರ ಬೆಂಬಲಿಗರ ಸಭೆ ನಡೆಸಿ ಅಂಬರೀಶ್ ಗೆ ನಾನೆಂಬುದು ತೋರಿಸ್ತೀನಿ.ಶ್ರೀರಂಗಪಟ್ಟಣ ದಲ್ಲಿ ಅಂಬಿ ಸೋತ ಹಾಗೆ ಮಂಡ್ಯ ದಲ್ಲೂ ಸೋಲ್ತಾರೆ. ಪ್ರಚಾರಕ್ಕೆ ಬಂದಾಗ ಮಂಡ್ಯದ ವಾತಾವರಣ ಅಂಬಿಗೆ ಅರ್ಥವಾಗಲಿದೆ. ನಾನು ನೂರಕ್ಕೆ ನೂರರಷ್ಟು ನಾನು ಈ ಬಾರಿ ಸ್ಪರ್ಧೆ ಮಾಡ್ತೀನಿ. ಫೀಲ್ಡ್ ರೇಡಿಯಾಗಿದೆ ಅಖಾಡದಲ್ಲಿ ನಾನೇ ಗೆಲ್ಲೋದು ನಾನು. ನ್ಯಾಮಿನೇಷನ್ ಹಾಕುವ ದಿನ ಅಂಬರೀಶ್ ಕಣ್ಣಾರೆ ಇಲ್ಲಾ ಟಿವಿಯಲ್ಲಿ ನೋಡಲಿ ಎಷ್ಟು ಜನ ಇರ್ತಾರೆ ಅನ್ನೋದನ್ನ ಅಂಬರೀಶ್ ವಿರುದ್ದ ಕಿಡಿಕಾರಿದ್ದಾರೆ.