ಉಡುಪಿ, ಏಪ್ರಿಲ್ 26: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಮಂತ ಅಭ್ಯರ್ಥಿ ಪ್ರಮೋದ್ ಮಧ್ವರಾಜ್. ಉಡುಪಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು 86.13ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಕ್ರೀಡಾ ಮತ್ತು ಯುವಜನಸೇವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ತಮ್ಮ ಬಳಿಯಲ್ಲಿ ಯಾವುದೇ ವಾಹನಗಳು ಇಲ್ಲ ಎಂದು ಹೇಳಿರುವುದು ವಿಶೇಷ.
ಪ್ರಮೋದ್ ಮಧ್ವರಾಜ್ ಕುಟುಂಬದ ಒಟ್ಟು ಆಸ್ತಿ – 86.11ಕೋಟಿ ರೂ. : ಪ್ರಮೋದ್ ಮಧ್ವರಾಜ್ ಆಸ್ತಿ – 78.46 ಕೋಟಿ ರೂ., ಪತ್ನಿ ಸುಪ್ರಿಯಾ ಮಧ್ವರಾಜ್ ಆಸ್ತಿ – 5.86 ಕೋಟಿ ರೂ., ಮಗಳು ಪ್ರತ್ಯಕ್ಷ ಆಸ್ತಿ- 1.82 ಕೋಟಿ ರೂ.
ಒಟ್ಟು ಚರಾಸ್ತಿ- 82.47 ಕೋಟಿ ರೂ.: ಪ್ರಮೋದ್ ಮಧ್ವರಾಜ್ – 76.14 ಕೋಟಿ ರೂ., ಸುಪ್ರಿಯಾ ಮಧ್ವರಾಜ್ – 4.51 ಕೋಟಿ ರೂ., ಪ್ರತ್ಯಕ್ಷ ಆಸ್ತಿ- 1.82 ಕೋಟಿ ರೂ.
ಒಟ್ಟು ಸ್ಥಿರಾಸ್ತಿ – 3.66 ಕೋಟಿ ರೂ.: ಪ್ರಮೋದ್ ಮಧ್ವರಾಜ್ – 2.32 ಕೋಟಿ ರೂ. (ಕೃಷಿಯೇತರ ಭೂಮಿ, ಕಮರ್ಷಿಯಲ್ ಕಟ್ಟಡ, ಮನೆ), ಸುಪ್ರಿಯಾ ಮದ್ವರಾಜ್ – 1.34 ಕೋಟಿ ರೂ.
ಕೈಯಲ್ಲಿರುವ ನಗದು: ಪ್ರಮೋದ್ ಮಧ್ವರಾಜ್- 3,50,000 ರೂ., ಸುಪ್ರಿಯಾ ಮಧ್ವರಾಜ್ – 50,000 ರೂ., ಪ್ರತ್ಯಕ್ಷ – 25,000 ರೂ.
ಬ್ಯಾಂಕ್ ಠೇವಣಿ: ಪ್ರಮೋದ್ ಮಧ್ವರಾಜ್ – 68.93 ಲಕ್ಷ ರೂ., ಸುಪ್ರಿಯಾ ಮಧ್ವರಾಜ್ -1.21 ಕೋಟಿ ರೂ., ಪ್ರತ್ಯಕ್ಷ – 83.91 ಲಕ್ಷ ರೂ.
ಷೇರು ಮತ್ತು ಮ್ಯೂಚುವಲ್ ಫಂಡ್: ಪ್ರಮೋದ್ ಮಧ್ವರಾಜ್ – 62.86 ಲಕ್ಷ ರೂ., ಸುಪ್ರಿಯಾ ಮಧ್ವರಾಜ್ – 87.15 ಲಕ್ಷ ರೂ., ಪ್ರತ್ಯಕ್ಷ – 8.62 ಲಕ್ಷ ರೂ.
ವಿಮೆ ಮತ್ತು ಅಂಚೆ ಉಳಿತಾಯ: ಪ್ರಮೋದ್ ಮಧ್ವರಾಜ್ – 1.47 ಕೋಟಿ ರೂ.
ಚಿನ್ನಾಭರಣ: ಪ್ರಮೋದ್ ಮಧ್ವರಾಜ್- 10 ಲಕ್ಷ ರೂ. (344 ಗ್ರಾಂ ಚಿನ್ನ), ಹೆಂಡತಿ – 44.3 ಲಕ್ಷ ರೂ. (1511.74 ಗ್ರಾಂ ಚಿನ್ನ), ಮಗಳು – 5.81 ಲಕ್ಷ ರೂ. (200 ಗ್ರಾಂ ಚಿನ್ನ)
ವಾರ್ಷಿಕ ಆದಾಯ: ಪ್ರಮೋದ್ ಮಧ್ವರಾಜ್- 1.91 ಕೋಟಿ ರೂ., ಹೆಂಡತಿ – 21.68 ಲಕ್ಷ ರೂ. (1511.74 ಗ್ರಾಂ ಚಿನ್ನ), ಮಗಳು – 1,440ರೂ. (200 ಗ್ರಾಂ ಚಿನ್ನ)
ಪ್ರಕರಣಗಳು – ಯಾವುದೂ ಇಲ್ಲ
ವಾಹನ – ಇಲ್ಲ