ಮಂಗಳೂರು: ಜೂನ್ 11ರಂದು ಬಂಟ್ವಾಳ ಠಾಣಾ ವ್ಯಾಪ್ತಿಯ ಬಡ್ಡಕಟ್ಟೆಯಲ್ಲಿ ತಲವಾರು ಹಿಡಿದು ಯುವಕರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕು ಬಿ ಕಸಬ ಗ್ರಾಮದ ಕಬ್ಬಿನಾ ಹಿತ್ಲು ಮನೆ ನಿವಾಸಿಗಳಾದ ಪ್ರದೀಪ್ ಪ್ರಾಯ (28), ತಿಲಕ್ (28) ಮತ್ತು ಬಿಷಪ್ ಕಂಪೌಂಡ್ ನಿವಾಸಿ ಮನೋಹರ್ (28) ಬಂಧಿತ ಆರೋಪಿಗಳು.
ಜೂನ್ 11ರಂದು ಪ್ರಕರಣ ನಡೆದಿದ್ದು, ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಸುರೇಂದ್ರ ಭಂಡಾರಿ , ಸತೀಶ್ ಕುಲಾಲ್ ಹಾಗೂ ಪೃಥ್ವಿರಾಜ್ ಜೆ ಶೆಟ್ಟಿ ಎಂಬ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್, ಎಸ್ಐ ಚಂದ್ರಶೇಖರ್, ಹರೀಶ್ ಹಾಗೂ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.