ಮುಂಬೈ: ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಗಾಯಕ ನಿಕ್ ಜೋನಸ್ ಜೋಡಿ ಕೆಲವು ದಿನಗಳಿಂದ ಜಾಗತಿಕ ಮಾದ್ಯಮಗಳಿಗೆ ಹಾಟ್ ಫೆವರಿಟ್ ಆಗಿತ್ತು. ವಿಷಯವೇನೆಂದರೆ ಪ್ರಿಯಾಂಕಾ ಹಾಗೂ ನಿಕ್ ಇದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಿಕ್ ಕುಟುಂಬ ಶುಕ್ರವಾರ ಭಾರತಕ್ಕೆ ಆಗಮಿಸಿದೆ.
ಮುಂಬೈಗೆ ಬಂದಿರುವ ನಿಕ್ ತಂದೆ ಪೌಲ್ ಕೇವಿನ್ ಜೋನಸ್ ಮತ್ತು ತಾಯಿ ಡೆನಿಸ್ ಮಿಲ್ಲರ್ ಅವರಿಗೆ ಪ್ರಿಯಾಂಕಾ ಚೋಪ್ರಾ ಕುಟುಂಬ ಆದರದ ಸ್ವಾಗತ ನೀಡಿದೆ.
ಶನಿವಾರ ಸಂಜೆ ಭಾರತೀಯ ಚಲನಚಿತ್ರ ರಂಗದ ಸ್ನೇಹಿತರಿಗೆ ಹಾಗೂ ಕುಟುಂಬದ ಆಪ್ತ ಸಂಬಂಧಿಕರಿಗೆ ಪ್ರಿಯಾಂಕಾ ಮತ್ತು ನಿಕ್ ಕುಟುಂಬ ವಿಶೇಷ ಔತಣಕೂಟ ಏರ್ಪಡಿಸಿದೆ. ಈ ಮೂಲಕ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಲಿದೆ. ಇಂದು ಸಂಜೆ 5 ಸ್ಟಾರ್ ಹೋಟೆಲ್ ನಲ್ಲಿ ನಿಶ್ಚಿತಾರ್ಥದ ಸಂಬಂಧ ಔತಣಕೂಟ ಏರ್ಪಾಟಾಗಿದೆ.
ಇದಕ್ಕೂ ಮುನ್ನ ಬುಧವಾರ ರಾತ್ರಿ ಪ್ರಿಯಾಂಕಾ ಅವರ ಮನೆಗೆ ಆಗಮಿಸಿದ್ದ ಒಬ್ಬ ಪುರೋಹಿತರು ಹಿಂದೂ ಧಾರ್ಮಿಕ ಆಚರಣೆಗಳ ಪ್ರಕಾರ ಪ್ರಿಯಾಂಕಾ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ ಎನ್ನಲಾಗಿದೆ.
ರೋಕಾ ಸಮಾರಂಭ
ಪ್ರಿಯಾಂಕಾ ಮನೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ, ಪೂಜಾ ಕಾರ್ಯಕ್ರಮ ನಡೆದಿದೆ. ಪ್ರಿಯಾಂಕಾ-ನಿಕ್ ಜೋಡಿಯು ಸಾಂಪ್ರದಾಯಿಕ ಉಡುಗೆ ತೊಟ್ಟು ಈ ಪೂಜೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ಹೇಳಿದೆ.
The couple held their engagement ceremony in Mumbai. #PriyankaNickEngagement https://t.co/NXmxCdM1ZG
— Twitter Moments (@TwitterMoments) August 18, 2018