ಚೆನ್ನೈ: ತಮಿಳು ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಾಲಾಸರವಕ್ಕಂನಲ್ಲಿ ನಡೆದಿದೆ.
ರಿಯಾಮಿಕ್ಕ(26) ನೇಣಿಗೆ ಶರಣಾದ ನಟಿ. ನವಂಬರ್ 28ರಂದು ತನ್ನ ಸಹೋದರನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಂಗಳವಾರ ತಡರಾತ್ರಿ ರಿಯಾಮಿಕ್ಕ ತನ್ನ ಬಾಯ್ಫ್ರೆಂಡ್ ದಿನೇಶ್ ಗೆ ಕರೆ ಮಾಡಿದ್ದರು. ಆದ್ರೆ ದಿನೇಶ್ ಕರೆ ಸ್ವೀಕರಿಸಲಿಲ್ಲ. ಬುಧವಾರ ರಿಯಾಮಿಕ್ಕಳ ಕರೆ ನೋಡಿದ ದಿನೇಶ್, ಆಕೆಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ರಿಯಾಮಿಕ್ಕ ಯಾವುದೇ ಕರೆ ಸ್ವೀಕರಿಸಲಿಲ್ಲ. ಇದರಿಂದ ಗಾಬರಿಗೊಂಡ ದೀನೇಶ್ ಆಕೆಯ ಮನೆಗೆ ಹೋಗಿ ಪ್ರಕಾಶ್ ಬಳಿ ರಿಯಾಮಿಕ್ಕ ಬಗ್ಗೆ ಕೇಳಿದ್ದಾನೆ.
ದಿನೇಶ್ ಹಾಗೂ ಪ್ರಕಾಶ್, ನಟಿ ರಿಯಾಮಿಕ್ಕ ರೂಮಿನ ಬಾಗಿಲು ತಟ್ಟಿದ್ದಾರೆ. ಆದರೆ ರಿಯಾಮಿಕ್ಕ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಪ್ರಕಾಶ್ ಕಿಟಿಕಿಯನ್ನು ಒಡೆದು ನೋಡಿದ್ದಾನೆ. ಈ ವೇಳೆ ರಿಯಾಮಿಕ್ಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸರು ದೂರು ಸ್ವೀಕರಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಆಕೆಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲಸದ ಒತ್ತಡದಿಂದ ರಿಯಾಮಿಕ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.