ಮುಂಬೈ: ಸೆಕ್ಸೀ ಕ್ವೀನ್ ರಾಖೀ ಸಾವಂತ್ ಮತ್ತೆ ಸುದ್ದಿ ಮಾಡಿದ್ದಾಳೆ. ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮದುವೆ ಬಳಿಕ ತನ್ನ ಮದುವೆಯೂ ಸಖತ್ ಸುದ್ದಿ ಮಾಡಲಿದೆ ಎಂಬುದನ್ನು ಘಂಟಾ ಘೋಷವಾಗಿ ಬಹಿರಂಗಪಡಿಸಿದ್ದಾಳೆ.
ಈ ವರ್ಷದ ಅಂತ್ಯಕ್ಕೆ ತಾನು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾಳೆ. ಈ ವೇಳೆ ರಾಖಿ ಭಾವಿ ಪತಿ ಆಕೆಯ ಸೀರೆ ಎಳೆದು ಲೈವ್ ಫಸ್ಟ್ ನೈಟ್ ಮಾಡ್ತೇನೆ ಎಂದು ಹೇಳಿದ್ದಾರೆ.
ದೀಪಕ್ ಕಲಾಲ್ ಅವರ ಹೇಳಿಕೆ ಒಳಗೊಂಡ ಈ ದೃಶ್ಯ ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡಿದೆ. ದೀಪಕ್ ಹಾಗೂ ರಾಖಿ ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆಯ ಪ್ರತಿಯೊಂದು ಡಿಟೇಲ್ಸ್ ಹೊರಹಾಕಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ರಾಖಿ ಸಾಕಷ್ಟು ಡ್ರಾಮಾ ಮಾಡಿ ತನ್ನ ಭಾವಿ ಪತಿಗೆ ಎಲ್ಲರ ಸಮ್ಮುಖದಲ್ಲಿ ನಿಂದಿಸಿದ್ದಾರೆ.
ಇದೇ ವೇಳೆ ದೀಪಕ್ ಮಾಧ್ಯಮಗಳ ಮುಂದೆ ರಾಖಿ ಸಾವಂತ್ ಸೀರೆಯನ್ನು ಎಳೆದಿದ್ದಾರೆ. ಅಲ್ಲದೇ ರಾಖಿ ಸಾವಂತ್ ತನ್ನ ಭಾವಿ ಪತಿಗೆ ತಾಳಿ ಕಟ್ಟಿದ್ದಾರೆ. ಈ ವೇಳೆ ರಾಖಿ ತಾನೂ ಹಾಕಿರುವ ಸೀರೆಯನ್ನು ಡೊನಾಲ್ಡ್ ಟ್ರಂಪ್ ಅವರು ಗಿಫ್ಟ್ ನೀಡಿದ್ದಾರೆ ಎಂದು ಹೇಳಿ ನಾವಿಬ್ಬರು ಫಸ್ಟ್ ನೈಟ್ ಲೈವ್ ಮಾಡುತ್ತೇವೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಮುಂದೆ ದೀಪಕ್ ನಮ್ಮ ಮದುವೆ ಕೇವಲ 70 ಕೋಟಿ ರೂ. ಬಜೆಟ್ ಎಂದು ಹೇಳಿದ್ದಾರೆ. ಆಗ ರಾಖಿ ನೀನು ನನಗೆ 85 ಕೋಟಿ ರೂ. ಎಂದು ಹೇಳಿದೆ. ಈಗ ಆ 15 ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಆಗ ದೀಪಕ್ ಆ ಹಣ ಉಡುಪುಗಳು ಖರೀದಿಸಲು ಸಹಾಯವಾಗುತ್ತದೆ ಎಂದು ಉತ್ತರಿಸಿದರು.
ದೀಪಿಕಾ-ರಣ್ವೀರ್, ಪ್ರಿಯಾಂಕಾ- ನಿಕ್ ಮದುವೆ ನಂತರ ರಾಖಿ ಸಾವಂತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಖಿ ಯೂಟ್ಯೂಬರ್ ದೀಪಕ್ ಕಲಾಲ್ ಜೊತೆ ಮದುವೆಯಾಗುತ್ತಿದ್ದಾರೆ. ಸದ್ಯ ರಾಖಿ ಮದುವೆಯ ಆಮಂತ್ರಣ ಪ್ರತಿಕೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ.