ಉಡುಪಿಯ ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ಎಗ್ಗಿಲದೆ ನಡೆಯುತ್ತಿದೆ ಮರಳುಗಾರಿಕೆ; ಟಿಪ್ಪರ್ ಗಳಲ್ಲಿ ಖುಲ್ಲಂ ಖುಲ್ಲ ಸಾಗಟವಾಗುತ್ತಿದ್ರು ಗಣಿ ಇಲಾಖೆ ಅಧಿಕಾರಿಗಳು ಗಪ್ ಚುಪ್
ಇಡೀ ಜಿಲ್ಲೆಯಲ್ಲಿ ಮರಳಿಗಾಗಿ ಅಹಾಕಾರವೆದ್ದಿದೆ.ಮರಳುಗಾರಿಕೆಯನ್ನ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ .ಮರಳಿಗಾಗಿ ಮನೆ ಕಟ್ಟೊರಿಂದ ಹಿಡಿದು ಕೂಲಿ ಕಾರ್ಮಿಕರು,ಲಾರಿ ಚಾಲಕರು ಎಲ್ಲರೂ ಪ್ರತಿಭಟನೆಗಳನ್ನ ಮಾಡ್ತಾ ಇದ್ದಾರೆ.ಈ ಮಧ್ಯೆ ಯಾರಾದ್ರೂ ಒಂದು ಹಿಡಿ ಮರಳು ತೆಗೆದಿದ್ದು ಗೊತ್ತಾದ್ರೆ ಗಣಿ ಇಲಾಖೆ ಅಧಿಕಾರಿಗಳು ಕಾನೂನಿನ ಪುಸ್ತಕದಲ್ಲಿರೋ ಎಲ್ಲಾ ಸೆಕ್ಷನ್ ಗಳನ್ನು ಹುಡುಕಿ ಹುಡುಕಿ ಕೇಸ್ ಹಾಕ್ತಾರೆ .
ಅದ್ರೆ ಇವೆಲ್ಲದರ ಮಧ್ಯೆ ಉಡುಪಿಯ ಬೆಳ್ವೆಯಲ್ಲೊಬ್ಬ ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಲೋಡ್ ಗಟ್ಟಲೇ ಮರಳನ್ನು ಸಾಗಿಸುತ್ತಿದ್ದಾನೆ.
ಬೆಳ್ವೆ ಮರಳು ದಂಧೆಕೋರನೊಬ್ಬನ KA 20 A 9122 ನಂಬರಿನ ಕೆಂಪು ಲಾರಿಯಲ್ಲಿ ಮರಳುಗಳನ್ನ ಸಾಗಿಸುತ್ತಿದ್ದು, ಸಾರ್ವಜನಿಕರು ಗಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರು ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಕಾಳ ಸಂತೆಯಲ್ಲಿ ಸುಮಾರು ಇಪ್ಪತೈದರಿಂದ ಮೂವತ್ತು ಸಾವಿರ ರೂಪಾಯಿಗಳಿಗೆ ಮರಳನ್ನ ಮಾರಲಾಗುತ್ತಿದೆ. ಈ ಮರಳು ಮಾಫಿಯಾದಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋ ಅರೋಪಗಳು ಕೂಡ ಕೇಳಿ ಬರುತ್ತಿದೆ.
ಅಷ್ಟೇ ಅಲ್ಲದೇ ಈ ಬಗ್ಗೆ ದೂರನ್ನು ನೀಡಲು ಮುಂದಾದವರಿಗೆ ಬೆದರಿಕೆ ಹಾಕಿ ಗೂಂಡಾ ವರ್ತನೆ ತೋರಿಸಿರುವ ಪ್ರಕರಣವೂ ನಡೆದಿದೆ. ಜಿಲ್ಲಾಡಳಿತವೂ ಬಡವನಿಗೊಂದು ಕಾನೂನೂ, ಕಾಸಿದ್ದವನಿಗೊಂದು ಕಾನೂನೂ ಮಾಡಿದ್ದಂತಿದೆ. ಸಾರ್ವಜನಿಕರು ಕೂಲಿ ಕಾರ್ಮಿಕರು ಸಂಘ ಸಂಸ್ಥೆ ಗಳು ಮರಳಿನ ಹೋರಾಟ ನಡೆಸುತ್ತಾ ಇದ್ರೆ ಜಿಲ್ಲಾಡಳಿತ ಈವರೆಗೂ ಮರಳುಗಾರಿಕೆಗೆ ಅನುಮತಿ ನೀಡಿಲ್ಲ.
ಇದನ್ನೆ ಬಂಡಾವಳನ್ನಾಗಿಸಿರುವ ಅಕ್ರಮ ದಂಧೆಕೋರರು ಬೆಳ್ವೆ ಭಾಗದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.ಅಷ್ಟೇ ಅಲ್ಲದೇ ರಾಜರೋಷವಾಗಿ ಸಾಗಾಟನೂ ಮಾಡುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ದಂಧೆಕೋರರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.