ಮಂಗಳೂರು: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ವಿರೋಧಿಸಿ ಮಂಗಳೂರಿನಲ್ಲಿ ಶಬರಿಮಲೆ ಉಳಿಸಿ ಜಾಥ ನಡೆಯಿತು.
ಮಂಗಳೂರಿನ ಪಿವಿಎಸ್ ನಿಂದ ಶರವು ಗಣಪತಿ ದೇವಸ್ಥಾನದ ವರೆಗೆ ನಡೆದ ಶಬರಿಮಲೆ ಉಳಿಸಿ ಜಾಥದಲ್ಲಿ ಪ್ರತಿಭಟನಕಾರರು ಕೇರಳ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಜಾಥದಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಯಿತು