Gadkari Ji, compliments! You are the only one in the BJP with some guts. Please also comment on:
1. The #RafaleScam & Anil Ambani
2. Farmers’ Distress
3. Destruction of Institutionshttps://t.co/x8BDj1Zloa— Rahul Gandhi (@RahulGandhi) February 4, 2019
ನವದೆಹಲಿ: ಮನೆಯವರ ಬಗ್ಗೆ ಕಾಳಜಿ ವಹಿಸದವರು ದೇಶ ನಿರ್ವಹಿಸಲಾರರು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಾಡಿ ಹೊಗಳಿದ್ದಾರೆ.
ಬಿಜೆಪಿಯಲ್ಲಿ ಗಟ್ಸ್ ಇರೋ ಏಕೈಕ ನಾಯಕ ಎಂದರೆ ನಿತಿನ್ ಗಡ್ಕರಿ ಅವರಾಗಿದ್ದು, ಅವರು ರಾಫೆಲ್ ಡೀಲ್, ರೈತರ ಸಮಸ್ಯೆ ಮತ್ತು ಕೇಂದ್ರ ಸಂಸ್ಥೆಗಳ ನಾಶದ ಬಗ್ಗೆಯೂ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಗಡ್ಕರಿ ಜಿ, ನಿಮಗೆ ಧನ್ಯವಾದಗಳು. ಬಿಜೆಪಿಯಲ್ಲಿ ಧೈರ್ಯವಂತ ವ್ಯಕ್ತಿ ನೀವು ಒಬ್ಬರೇ. ದಯಮಾಡಿ ರಾಫೆಲ್ ಹಗರಣ, ಅನಿಲ್ ಅಂಬಾನಿ, ರೈತರ ಸಂಕಷ್ಟ ಹಾಗೂ ಕೇಂದೀಯ ಸಂಸ್ಥೆಗಳ ನಾಶದ ಬಗ್ಗೆಯೂ ಮಾತನಾಡಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ನಿತಿನ್ ಗಡ್ಕರಿ ಅವರು, ಇತ್ತೀಚಿನ ದಿನಗಳಲ್ಲಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದು, ನಿನ್ನೆ ನಾಗ್ಪುರದಲ್ಲಿ, ಮನೆಯನ್ನು ಸರಿಯಾಗಿ ನೋಡಿಕೊಳ್ಳದವರು ದೇಶವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ ಎಂದಿದ್ದರು.