ಕಲಬುರಗಿ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಇಂದೇ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ. ಇಂದು ಸಂಜೆ ಸ್ಪೀಕರ್ ಅವರನ್ನು ಖುದ್ದು ಭೇಟಿಯಾಗಿ ರಾಜೀನಾಮೆ ಪತ್ರ ಹಸ್ತಾಂತರ ಮಾಡಲಿದ್ದಾರೆ.
ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಜಾಧವ್ ಅವರು ತಮ್ಮ ಆಪ್ತವಲಯಗಳಿಗೆ ತನ್ನ ನಿರ್ಧಾರ ತಿಳಿಸಿರುವುದಾಗಿ ಮೂಲಗಳು ಮಾಹಿತಿ ಲಭಿಸಿದೆ.
ಇತ್ತ ಪಕ್ಷದಲ್ಲಿ ಅತೃಪ್ತ ಶಾಸಕರಾಗಿರುವ ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ ಶಾಕ್ ನೀಡಿದ್ದು, ತಾವು ಕೊಟ್ಟಿದ್ದ ನಿಗಮ ಮಂಡಳಿ ಜವಾಬ್ದಾರಿಯನ್ನು ವಾಪಸ್ ಪಡೆದಿದೆ. ಈ ಎಲ್ಲಾ ಕಾರಣಗಳಿಂದ ಅವರು ಇಂದು ಸಂಜೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ.
ಕಾಂಗ್ರೆಸ್ನಿಂದ ದೂರವಾದ ಬೆನ್ನಲ್ಲೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಫೆಬ್ರವರಿ 17ರಂದು ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಕಲಬುರಗಿ ಮೀಸಲು ಲೋಕಸಭಾ ಚುನಾವಣೆ ಸಿದ್ಧತೆ ನಡೆಸಲಿದ್ದು, ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಹಣಿಸಲು ಮುಂದಾಗಲಿದ್ದಾರೆ ಎಂಬುದಾಗಿ ಮಾಹಿತಿ ಲಭಿಸಿದೆ.
ಉಮೇಶ್ ಜಾಧವ್ ಅವರಿಗೆ ದೋಸ್ತಿ ಸರ್ಕಾರ ಕೊಟ್ಟಿರುವ ಉಗ್ರಾಣ ನಿಗಮ ಮಂಡಳಿ ಜವಾಬ್ದಾರಿಯನ್ನು ಕೊಟ್ಟಿತ್ತು. ಆದ್ರೆ ಜಾಧವ್ ಅವರು ಸಚಿವ ಸ್ಥಾನಕ್ಕೆ ಉಮೇಶ್ ಜಾಧವ್ ಅವರು ಪಟ್ಟು ಹಿಡಿದಿದ್ದರು. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅವರು ಸ್ವೀಕಾರ ಮಾಡಿರಲಿಲ್ಲ.