ಮಂಗಳೂರು ನಗರದ ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತಸ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಒಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಿಸಿ ಓರ್ವ ನನ್ನು ವಶಕ್ಕೆ ಪಡೆದಿದ್ದಾರೆ.ಯುವಕನನ್ನು ಮಂಗಳೂರು ಸಿಸಿಬಿ ಮತ್ತು ಉರ್ವ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ನಗರದ ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತತ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್ ಪಾರ್ಲರ್ ನಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ಬಗ್ಗೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ದಲ್ಲಾಳಿ (ಪಿಂಪ್) ಸುಶೀಲ ಎಂಬಾಕೆಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ವೇಶ್ಯಾವಾಟಿಕೆಯಿಂದ ಗಳಿಸಿದ ರೂಪಾಯಿ 2,000/ ನ್ನು ವಶಪಡಿಸಲಾಗಿದೆ. ದಲ್ಲಾಳಿ (ಪಿಂಪ್) ಸುಶೀಲ ತಲೆಮರೆಸಿಕೊಂಡಿರುತ್ತಾಳೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶ್ರೀ ಶಾಂತಾರಾಮ, ಉರ್ವ ಠಾಣೆಯ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಸಿಸಿಬಿ ಘಟಕದ ಪಿಎಸ್ಐ ಕಬ್ಬಳರಾಜ್ ಮತ್ತು ಸಿಬ್ಬಂದಿಗಳು ಮತ್ತು ಉರ್ವ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.