ಮಂಗಳೂರು: ಮಂಗಳೂರಿನಲ್ಲಿ ಈ ಬಾರಿಯು ಅತ್ಯಧಿಕ ಶೇಕಡ ಮತದಾನವಾಗಬೇಕೆಂಬ ನಿಟ್ಟಿನಲ್ಲಿ ಮತದಾನ ನಡೆಸುವ ಜಾಗೃತಿಯನ್ನು ವಿಭಿನ್ನವಾಗಿ ನಡೆಸಲು ದ.ಕ ಜಿಲ್ಲೆಯ ಸ್ವೀಪ್ ಸಮಿತಿ ಸಜ್ಜಾಗಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಪಂಚಾಯತ್ ಸಿ ಇ ಓ ಸೆಲ್ವಮಣಿ ಅವರು ಈ ಬಾರಿ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸ್ವೀಪ್ ನಿಂದ ಗಾಳಿಪಟ ಉತ್ಸವ, ಮರಳು ಶಿಲ್ಪ , ಹದಿನೆಂಟು ಕಿಲೋಮೀಟರ್ ನ ವಾಕಥನ್, ಸೈಕ್ಲೋಥಾನ್ ನಡೆಸಿ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಾಲ್ ಗಳಲ್ಲಿ ಡೆಮೋ ಮ ತಚಲಾವಣೆ ಮಾಡಿಸುವ ಯೋಜನೆಯಿದ್ದು ಈಗಾಗಲೆ ಜಿಲ್ಲೆಯ ವಿವಿಧೆಡೆ ಎರಡು ಲಕ್ಷ ಮಂದಿಗೆ ಮತದಾನ ಚಲಾವಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದ ಎಂದು ತಿಳಿಸಿದರು. ಈ ಬಾರಿ ಪಿಂಕ್ ಬೂತ್, ಎತ್ನಿಕ್ ಬೂತ್, ಟ್ರೈಬಲ್ ಪ್ರೆಂಡ್ ಬೂತ್ ಜೊತೆಗೆ ಸೀನಿಯರ್ ಸಿಟಿಜನ್ ಪ್ರೆಂಡ್ಲಿ ಬೂತ್ ಮಾಡಲಾಗುವುದು ಎಂದರು.