ಮಂಗಳೂರು : ಮಂಗಳೂರಿನಲ್ಲಿ ಬಾರ್, ವೈನ್ಶಾಪ್ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರಿಗೆ ಸೇರಿದ ಬೆಂದೂರ್ನಲ್ಲಿರುವ ಕಟ್ಟಡದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಆರಂಭಿಸುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ತನ್ನ ನೈಜ ಸಂಸ್ಕತಿಯನ್ನು ಜನರ ಮುಂದಿಟ್ಟಿದೆ ಎಂದು ಬಿಜೆಪಿ ಶಾಶಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂದೂರಿನಲ್ಲಿರುವ ಜೋಕಿಂ ಲೂವಿಸ್ ಪಿಂಟೋ ಅವರಿಗೆ ಸೇರಿದ ಕಟ್ಟಡ ಇದಾಗಿದ್ದು, ಇವರು ಮಂಗಳೂರಿನಲ್ಲಿ ಮದ್ಯಮಾರಾಟದ ಮಳಿಗೆಯನ್ನು ಹೊಂದಿರುವವರಾಗಿದ್ದಾರೆ. ಇವರ ಕಟ್ಟಡಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ತೆರೆಯುವ ಮೂಲಕ ಕಾಂಗ್ರೆಸ್ ಪಕ್ಷ ಸಾರ್ವಜನಿಕರಿಗೆ ಯಾವ ಸಂದೇಶ ನೀಡಲು ಹೊರಟಿದೆ ಎಂಬುವುದು ಸಾಬೀತಾದಾಗಿದೆ. ನಮ್ಮ ಸಂಸ್ಕತಿ, ಪರಂಪರೆ, ಅಭಿವೃದ್ಧಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿಯೇ ಈ ರೀತಿಯ ವರ್ತನೆ ಪ್ರದರ್ಶಿಸಿದರೆ, ಚುನಾವಣೆ ಮುಗಿದ ಬಳಿಕ ಯಾವ ರೀತಿಯ ವ್ಯವಹಾರಕ್ಕೆ ಮುಂದಾಗಬಹುದು ಎಂಬುವುದು ಸಾರ್ವಜನಿಕರಿಗೆ ಬಿಡಿಸಿ ಹೇಳಬೇಕಾಗಿಲ್ಲ ಎಂದವರು ಆಪಾದಿಸಿದ್ದಾರೆ
ಕಾಂಗ್ರೆಸ್ ಚುನಾವಣಾ ಕಚೇರಿ ತೆರೆದಿರುವ ಕಟ್ಟಡಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ಕಂಪ್ಲೀಶನ್ ಸರ್ಟಿಫಿಕೇಟ್ನ್ನು ಇನ್ನೂ ನೀಡಿಲ್ಲ. ಕಂಪ್ಲೀಶನ್ ಸರ್ಟಿಫಿಕೇಟ್ ನೀಡದ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳನ್ನು ಅಧಿಕೃತವಾಗಿ ಮಾಡುವಂತಿಲ್ಲ. ಆದರೂ ಕಾಂಗ್ರೆಸ್ ತನ್ನ ಚುನಾವಣಾ ಕಚೇರಿ ಈ ಕಟ್ಟಡದಲ್ಲಿ ಆರಂಭಿಸಿ ಕಾನೂನು ಉಲ್ಲಂಘಿಸಿದೆ. ಕಾನೂನು ಬಾಹಿರವಾಗಿ ಹಾಗೂ ಅಕ್ರಮವಾಗಿ ಚಟುವಟಿಕೆ ಮಾಡುತ್ತಿರುವುದು ಕಾಂಗ್ರೆಸ್ನ ಸಂಸ್ಕøತಿಯಾಗಿದೆ. ಚುನಾವಣಾ ಸಂದರ್ಭದಲ್ಲಿಯೇ ಈ ರೀತಿಯ ಚಟುವಟಿಕೆ ಮಾಡುವ ಕಾಂಗ್ರೆಸ್ಗೆ ಮತ್ತೆ ಅಧಿಕಾರ ಕೊಟ್ಟರೆ ಯಾವ ರೀತಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು, ಅಕ್ರಮ ಚಟುವಟಿಕೆ ಮಾಡಬಹುದು ಎಂಬುವುದನ್ನು ನಾಗರಿಕರು ಅರ್ಥಮಾಡಿಕೊಳ್ಳುವಷ್ಟು ಬುದ್ದಿವಂತರಿದ್ದಾರೆ. ಕಾಂಗ್ರೆಸ್ ಇಂತಹ ಅಕ್ರಮಗಳನ್ನು ಜನರೇ ನಿಯಂತ್ರಿಸಲಿದ್ದಾರೆ ಎಂದು ಅವರು ಹೇಳಿದರು