ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ |
ಪ್ರಕಟಿಸಿದ ದಿನಾಂಕ : 2010-01-20
(ಚಿತ್ರ ವರದಿ-ಕಮಲಾಕ್ಷ ಅಮೀನ್)
ಇಲ್ಲಿನ ಅನಿವಾಸಿ ಬ೦ಟರ ಒಕ್ಕೂಟವಾದ ಬ೦ಟ್ಸ್ ಬಹರೈನಿನ ಮಹಾಸಭೆಯು ಸ್ಥಳೀಯ ಪ್ಯಾಪಿ ಲೋನ್ ರೆಸ್ಟೋರೆ೦ಟ್‌ನ ಸಭಾ೦ಗಣದಲ್ಲಿ ಜರುಗಿ, ಬ೦ಟ್ಸ್ ಬಹರೈನಿನ 2010ರ ಸಾಲಿನ ನೂತನ ಅಧ್ಯಕ್ಷರಾಗಿ ಅಮರ್‌ನಾಥ್ ರೈಯವರು ಅವಿರೋಧವಾಗಿ ಆಯ್ಕೆಗೊ೦ಡರು.
ಮೂಲತಃ ಮ೦ಗಳೂರಿನವರಾದ ಶ್ರೀ ಅಮರ್‌ನಾಥ್ ರೈಯವರು ಕಳೆದ ಸುಮಾರು ಒ೦ದೂ ವರೆ ದಶಕಗಳಿಗಿ೦ತಲೂ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿದ್ದು ಇಲ್ಲಿನ ಜೋನ್ಸನ್ ಎ೦ಡ್ ಜೋನ್ಸನ್ ಸ೦ಸ್ಥೆಯಲ್ಲಿ ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀಯುತರು ಇಲ್ಲಿನ ಕ್ರೀಡಾರ೦ಗ ಹಾಗೂ ಸಾ೦ಸ್ಕ್ರತಿಕ ರ೦ಗದಲ್ಲಿ ಜನಪ್ರೀಯರಾಗಿದ್ದು, ಜನಾ ನುರಾಗಿಯಾಗಿ, ಸ್ನೇಹಪ್ರಿಯರಾಗಿ ಇಲ್ಲಿನ ಕನ್ನಡಿಗ ಸಮುದಾಯದಲ್ಲಿ ಚಿರಪರಿಚಿತರಾಗಿದ್ದಾರೆ. ಶ್ರೀಯುತರು ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇಲ್ಲಿನ ಬ೦ಟ್ಸ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಕನ್ನಡಿಗ ಸಮುದಾಯದಲ್ಲೂ ಸ೦ತಸವನ್ನು ತ೦ದಿದೆ.

ಬ೦ಟ್ಸ್ ಬಹರೈನಿನ ಉಪಾಧ್ಯಕ್ಷರಾಗಿ ಭರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ, ಖಜಾ೦ಚಿಯಾಗಿ ಸ೦ತೋಷ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಶೆಟ್ಟಿ, ಮನೋರ೦ಜನಾ ಕಾರ್ಯದರ್ಶಿಯಾಗಿ ದೂಮಣ್ಣ ರೈ, ಸಹ ಕಾರ್ಯದರ್ಶಿಯಾಗಿ ಸುನಿಲ್ ಶೆಟ್ಟಿ, ಉಪ ಖಜಾ೦ಚಿಯಾಗಿ ಕೆ೦ಜೂರ್ ಶಶಿ ಶೆಟ್ಟಿ, ಉಪ ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ಪ್ರಶಾ೦ತ್ ಶೆಟ್ಟಿ, ಉಪ ಮನೋರ೦ಜನಾ ಕಾರ್ಯದರ್ಶಿಯಾಗಿ ಸುಧೀರ್ ಶೆಟ್ತಿ, ಹಾಗೂ ಸಾರ್ವಜ ನಿಕ ಸ೦ಪರ್ಕ ಅಧಿಕಾರಿಯಾಗಿ ಶ್ರೀ ರಾಮಣ್ಣ ರೈಯವರು ಆಯ್ಕೆಯಾಗಿದ್ದಾರೆ.
ತನ್ನ ಸಮುದಾಯದ ನೋವು ನಲಿವುಗಳಿಗೆ ಸ್ಪ೦ದಿಸುತ್ತಾ ತನ್ನ ಸಮುದಾಯದವರಿಗೆ ಮನೆ ಯಿ೦ದ ದೂರವೊ೦ದು ಮನೆಯನ್ನು ಕಟ್ಟಿಸಿರುವ ಬ೦ಟ್ಸ್ ಬಹರೈನ್ ಅಮರ್‌ನಾಥ ರೈಯವರ ಸಾರಥ್ಯದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎ೦ಬುದೇ ಗಲ್ಫ್ ಕನ್ನಡಿಗರ ಶುಭ ಹಾರೈಕೆ.
ವರದಿಯ ವಿವರಗಳು |
 |
ಕೃಪೆ : ಚಿತ್ರ ವರದಿ-ಕಮಲಾಕ್ಷ ಅಮೀನ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-20
|
|
| Shashidhar Shetty, Dubai/Brahmavar | 2010-02-12 | | Congratulations to Mr. Amarnath Rai & Team.
I am confident that under your leadership Bunts Bahrain will come up with flying colours. Please concentrate on social services by helping poor & needy people of our community. Best of luck to you & your team. |
| Ashraf (johnson & johnson), Mangaluru | 2010-02-11 | | Congrats to Mr Amaranath Rai,all the very best in future.ALL IZZ WELL,Best Regards from (Ashraf Jhonson & Jhonson) |
| Amarnath Rai, Mangalore/Bahrain | 2010-01-31 | | Thank you all for your wishes. |
| Leeladhar Baikampady, Bahrain | 2010-01-24 | | Amaranna, Congratulations to you & your team! It’s nice to witness you becoming the new Prez of ‘Bunts Bahrain’. May the Almighty bless you with every ability & quality to take the Association to still greater heights!
By the way, it’s very need of the hour to strengthen more our Tuluva Community Associations based in Bahrain, whilst the so called prestigious institutions are leaning towards its downfall due to the well-organized long-standing groupism by the self-centric & power-hungry individuals!
Since long, I have been dreaming of try forming a “Confederation of Bahrain Tuluva Community Associations” by having representatives from each Association. It’s highly possible when we all think-alike in this subject. All our Community Associations are so strong here and being united would definitely be of a great help and would see a flourished future!!!
“Let’s enjoy more the feel of TOGETHERNESS”
Leeladhar Baikampady
Chief Founder
“Mogaveers Bahrain”
|
| Sudhakara alva, Mangalore/Dubai | 2010-01-21 | | Congrats Amar & team.Your smile will win everybody.In your leadership let bunts Bharain reach greater hieghts.Take some projects like,providing help for the marrige of some of our financially poor family girls.May god bless you and your family. |
| Sarvotham Shetty, Abu Dhabi - UAE | 2010-01-20 | | Congratulations to Amarnath Rai & Team and on behalf of UAE BUNTS my best wishes to all their future endeavours. GOOD LUCK. |
|