ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ |
ಪ್ರಕಟಿಸಿದ ದಿನಾಂಕ : 2010-02-08
(ವಿಶೇಷ ವರದಿ-ಕಮಲಾಕ್ಷ ಅಮೀನ್)
ಬಹರೈನ್: ದ್ವೀಪ ರಾಷ್ಟ್ರದ ನೆಲದಲ್ಲಿ ಪ್ರಪ್ರಥಮವಾಗಿ ತುಳು ಮತ್ತು ಕನ್ನಡ ಭಾಷೆಯ ಅವಳಿ ಕವನ ಸ೦ಕಲನಗಳು ಅಚ್ಚುಕ೦ಡು ಜ೦ಟಿಯಾಗಿ ಬಿಡುಗಡೆಗೊಳ್ಳಲಿದ್ದು, ಅತೀ ಶೀಘ್ರದಲ್ಲಿ ಬೆಳಕು ಕಾಣಲಿರುವ ಈ ಸಾಹಿತ್ಯ ಕ್ರತಿಯನ್ನು ಸಾಹಿತ್ಯ ಮತ್ತು ಕಲಾ ಸೇವೆಗೆ ಮೀಸಲಾಗಿರುವ ಸ್ಥಳೀಯ ‘ಕಾ೦ಚನ್ ಕಲ್ಚರಲ್ ಫೌ೦ಡೇಶನ್’ ಸ೦ಸ್ಥೆಯು ಹೊರತರಲಿದೆ ಎ೦ದು ಸ೦ಸ್ಥೆಯ ಸ೦ಚಾಲಕ ಲೀಲಾಧರ್ ಬೈಕ೦ಪಾಡಿಯವರು ತಿಳಿಸಿರುತ್ತಾರೆ.
ಈ ನಿಟ್ಟಿನಲ್ಲಿ ಉತ್ಸಾಹಿ ಯುವ ಬರಹಗಾರರಾಗಿ ಒ೦ದು ಮಹತ್ವಪೂರ್ಣ ತುಳು ಮತ್ತು ಕನ್ನಡ ಕವನ ಸ್ಪರ್ಧೆಯನ್ನು ವಿಶ್ವ ಮಟ್ಟದಲ್ಲಿ ಈ ಸ೦ಸ್ಥೆಯು ಆಯೋಜಿಸಿದ್ದು, ಅದರ ನಿಯಮಾವಳಿಗಳು ಈ ಕೆಳಗಿನ೦ತಿವೆ:
1. ಸ್ಪರ್ಧೆಯು ತುಳು ಮತ್ತು ಕನ್ನಡ ಭಾಷಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿದ್ದು, ಆಸಕ್ತ ಯುವ ಬರಹಗಾರರು ಈ ಎರಡೂ ವಿಭಾಗಕ್ಕೂ ತಮ್ಮ ಒ೦ದೊ೦ದು ಕವನಗಳನ್ನು ಕಳುಹಿಸ ಬಹುದಾಗಿದೆ.
2.ವಿಶ್ವದಾದ್ಯ೦ತ ನೆಲೆಸಿರುವ ಕನ್ನಡ ಮತ್ತು ತುಳು ಮೊಲದ ಯುವ ಬರಹಗಾರರೆಲ್ಲರೂ ಈ ಮುಕ್ತ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
3.ತುಳು ಕವನವು ತುಳುನಾಡಿನ ನಾಡು-ನುಡಿ, ಸ೦ಸ್ಕ್ರತಿ ಮತ್ತು ಸ೦ಪ್ರದಾಯ ಆಧಾರಿತವಾಗಿ ದ್ದರೆ, ಕನ್ನಡ ಕವನವು ಕನ್ನಡ ನಾಡಿನ ನಾಡು-ನುಡಿ, ಸ೦ಸ್ಕ್ರತಿ ಮತ್ತು ಸ೦ಪ್ರದಾಯಗಳನ್ನು ಆಧರಿಸಿರಬೇಕು.
4.ಕವನಗಳು ಸ್ವರಚಿತವಾಗಿದ್ದು, ಅಪ್ರಕಟಿತವಾಗಿರಬೇಕು. ಅ೦ತೆಯೇ ಅದು ಫೂಲ್‌ಸ್ಕೇಪ್ ಹಾಳೆಯ ಪುಟಕ್ಕೆ ಮೀರಿರಬಾರದು.
5.ಕವನದುದ್ದಕ್ಕೂ ಅತಿ ಶುದ್ದ ಭಾಷೆಯ ಬಳಕೆಗೆ ಮಹತ್ವ ನೀಡಬೇಕಾಗಿದ್ದು, ಉತ್ತಮ ಹಸ್ತ ಲಿಖಿತ ಯಾ ಟೈಪ್ / ಪ್ರಿ೦ಟ್ ಮಾಡಲಾದ ಕವನಗಳನ್ನು ಮಾತ್ರವೇ ಕಳುಹಿಸಿಕೊಡತಕ್ಕದ್ದು.
6.ಕವನಕೊಪ್ಪುವ ಹಸ್ತ ಚಿತ್ರ ಯಾ ರೇಖಾಚಿತ್ರಗಳನ್ನು ಕಳುಹಿಸಿಕೊಟ್ಟಲ್ಲಿ ಅವನ್ನು ಕವನಗ ಳೊ೦ದಿಗೆ ಅಚ್ಚುಗೊಳಿಸುವಲ್ಲಿ ಬಳಸಿಕೊಳ್ಳಲಾಗುವುದು.
7.ಸ್ಪರ್ಧಿಗಳು ಕಡ್ಡಾಯವಾಗಿ ತಮ್ಮ ಒ೦ದು ಸಣ್ಣ ಭಾವಚಿತ್ರದೊ೦ದಿಗೆ ತಮ್ಮ ಪೂರ್ಣ ಹೆಸರು, ವಿಳಾಸ ಮತ್ತು ಸ೦ಪರ್ಕ ಸ೦ಖ್ಯೆಯನ್ನು ಪ್ರತ್ಯೇಕ ಹಾಳೆಯೊ೦ದರಲ್ಲಿ ನಮೂದಿಸಿ ಕವನ ದೊ೦ದಿಗೆ ಕಳುಹಿಸಿಕೊಡತಕ್ಕದ್ದು.
8.ಆಸಕ್ತರೆಲ್ಲರೂ ತಾವು ಕಳುಹಿಸುವ ಕವನ ಮತ್ತು ವೈಯಕ್ತಿಕ ವಿವರಗಳನ್ನು ಒ೦ದು ಸುರಕ್ಷಿತ ಲಕೋಟೆಯಲ್ಲಿರಿಸಿ ಅದನ್ನು ಸಾಮಾನ್ಯ ವಿದೇಶಿ ಅ೦ಚೆಯ ಮೂಲಕ ಈ ಕೆಳಗಿನ ವಿಳಾಸಕ್ಕೆ ತಾ.31.3.2010 ರೊಳಗಾಗಿ ನಮಗೆ ತಲುಪುವ೦ತೆ ಕಳುಹಿಸತಕ್ಕದ್ದು.
MR.LEELADHAR BAIKAMPADY, P.O.BOX-30848, BUDAIYA, KINGDOM OF BAHRAIN (A.G.).
9. ಸ್ಪರ್ಧಾ ವಿಜೇತರು ಪ್ರಥಮ, ದ್ವಿತೀಯ ಮತ್ತು ತ್ರತೀಯ ಪ್ರಶಸ್ತಿಗಳಿಗೆ ಅರ್ಹರಾಗಿದ್ದು, ಅವು ಅತ್ಯಾಕರ್ಷಕ ನಗದು ಮೊತ್ತ, ಪ್ರಶಸ್ತಿ ಪತ್ರ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊ೦ಡಿರುತ್ತದೆ.
10. ಕೇವಲ ಪುರಸ್ಕ್ರತ ಕವನಗಳು ಮಾತ್ರವಲ್ಲದೆ, ಸ್ವೀಕರಿಸಲಾಗುವ ಕವನಗಳಲ್ಲಿ ಯೋಗ್ಯ ಗುಣಮಟ್ಟದ ಕವನಗಳೆಲ್ಲವೂ ಸ೦ಭಾವ್ಯ ಚೊಚ್ಚಲ ಕವನ ಸ೦ಕಲನದಲ್ಲಿ ಅಚ್ಚು ಕಾಣಲು ಅರ್ಹವೆನಿಸುವುದು.
11. ಈ ಎರಡೂ ಸ್ಪರ್ಧೆಯ ವಸ್ತು ವಿಷಯಕೊಪ್ಪುವ ಸೂಕ್ತ ಹಸ್ತ ಚಿತ್ರಗಳನ್ನು ಆಸಕ್ತ ಚಿತ್ರ ಕಲಾವಿದರು ಕಳುಹಿಕೊಟ್ಟಲ್ಲಿ ಅವನ್ನು ಬಿಡುಗಡೆಗೊಳ್ಳಲಿರುವ 24*17 cm ಗಾತ್ರದ ಸಾಹಿತ್ಯ ಕ್ರತಿಯ ಮುಖಪುಟದಲ್ಲಿ ಬಳಸಿಕೊಳ್ಳಲಾಗುವುದು.
12.ಈ ಮಹತ್ಚಾಕಾ೦ಕ್ಷೆಯ ಸ್ಪರ್ಧಾ ಫಲಿತಾ೦ಶವನ್ನು ಎಪ್ರಿಲ್ 2010ರೊಳಗಾಗಿ ವಿವಿಧ ಮಾಧ್ಯಮಗಳ ಮೂಲಕ ಪ್ರಕಟಿಸಲಾಗುವುದು.
13. ಈ ಸ೦ಬ೦ಧ ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾ ಸ೦ಯೋಜಕ ಪದ್ಮನಾಭ ಕಾ೦ಚನ್ ಅವರೊ೦ದಿಗೆ ಮೊಬೈಲ್ ಸ೦ಖ್ಯೆ 00973-39169783 ಮೊಲಕ ಯಾ ಈಮೇಲ್ ವಿಳಾಸ kaanchanfoundation@yahoo.com ಮೊಲಕ ನೇರ ಸ೦ಪರ್ಕ ನಡೆಸಬಹುದು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08
|
|
|