ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ! |
ಪ್ರಕಟಿಸಿದ ದಿನಾಂಕ : 2010-03-08
ಚೆನ್ನೈ, ಸೋಮವಾರ, 8 ಮಾರ್ಚ್ 2010
ಪರಮಹಂಸ ನಿತ್ಯಾನಂದ ಸ್ವಾಮಿ ಲೀಲೆಗಳಿಗೆ ಮರುಳಾಗಿದ್ದ ತಮಿಳು ನಟಿ ರಂಜಿತಾ ಆತನನ್ನೇ ಮದುವೆಯಾಗಲು ಬಯಸಿದ್ದಳು. ಇದು ಸಾಧ್ಯವಾಗದೇ ಇದ್ದಾಗ ಕರುಪ್ಪನ್ ಜತೆ ಸೇರಿಕೊಂಡು ವೀಡಿಯೋ ಬ್ಲ್ಯಾಕ್‌ಮೇಲ್ ನಡೆಸಿದ್ದಳು ಎಂದು ವರದಿಯೊಂದು ಹೇಳಿದೆ.
ರಂಜಿತಾಳ ಕೌಟುಂಬಿಕ ಜೀವನ ದಿಕ್ಕಾಪಾಲಾಗುತ್ತಿರುವುದನ್ನು ಸರಿಪಡಿಸಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಅನುಭವಿ ನಟ ಕೆ.ಆರ್. ವಿಜಯ ಅವರ ಸೊಸೆ, ಮಠದ ಭಕ್ತೆಯಾಗಿದ್ದ ಸುಧಾ ಅವರ ಮೂಲಕ ಸ್ವಾಮೀಜಿಯನ್ನು ಮೂರು ವರ್ಷಗಳ ಹಿಂದೆ ಪರಿಚಯ ಮಾಡಿಕೊಡಲಾಗಿತ್ತು.
ಆ ಬಳಿಕ ರಂಜಿತಾ ಸತತವಾಗಿ ಮಠಕ್ಕೆ ಭೇಟಿ ನೀಡುತ್ತಿದ್ದಳು. ಸೇನಾಧಿಕಾರಿ ಗಂಡನ ಜತೆ ಮುನಿಸಿಕೊಂಡಿರುವ ಪ್ರಕರಣವನ್ನು ರಿಪೇರಿ ಮಾಡಲು ಬಂದಿದ್ದ ಎರಡು ಮಕ್ಕಳ ತಾಯಿ ಸ್ವಾಮೀಜಿಯ ಲೀಲೆಗಳಿಗೆ ಮಾರು ಹೋಗಿ ತನ್ನ ವಾಸಸ್ಥಾನವನ್ನು ಚೆನ್ನೈಯಿಂದ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದಳು ಎಂದು ಮೂಲಗಳು ಹೇಳಿವೆ.
ನಂತರದ ದಿನಗಳಲ್ಲಿ ಸ್ವಾಮೀಜಿಗೆ ತೀರಾ ನಿಕಟವರ್ತಿಯೆನಿಸಿಕೊಂಡ ರಂಜಿತಾ, ತನ್ನನ್ನು ಮದುವೆಯಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದಳು. ಒಂದು ಹಂತದಲ್ಲಿ ಇದಕ್ಕೆ ಕುಕ್ಕೇ ಸುಬ್ರಹ್ಮಣ್ಯ ಮಠದ ವಿದ್ಯಾಭೂಷಣರ ಉದಾಹರಣೆಯನ್ನೂ ಆಕೆ ನೀಡಿದ್ದಳು ಎಂದು ಮೂಲಗಳು ಹೇಳಿದ್ದು, ಈ ಕುರಿತು ಅಪಾರ ಭರವಸೆ ಹೊಂದಿದ್ದ ರಂಜಿತಾ ತನ್ನ ಮದುವೆ ಮುರಿದುಕೊಳ್ಳಲು ದೃಢ ನಿಶ್ಚಯ ತೆಗೆದುಕೊಂಡಳು ಎನ್ನಲಾಗಿದೆ.
ಮಿಲಿಟರಿ ಅಧಿಕಾರಿ ರಾಕೇಶ್ ಮೆನನ್ ಜತೆಗಿನ ರಂಜಿತಾಳ ವಿವಾಹ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿದ್ದು, ಇನ್ನಷ್ಟೇ ತೀರ್ಪು ಬರಬೇಕಿದೆ.
ಸ್ವಾಮೀಜಿಯ ಕಾಮಕಾಂಡವನ್ನು ವೀಡಿಯೋ ಮಾಡಿದ್ದೇನೆ ಎಂದು ಪೊಲೀಸರಲ್ಲಿ ಹೇಳಿಕೊಂಡಿರುವ ಲೆನಿನ್ ಕರುಪ್ಪನ್ ಕೂಡ ರಂಜಿತಾಳಿಗೆ ಆಪ್ತನಾಗಿದ್ದ. ಆತ ರಂಜಿತಾಳನ್ನು ಪ್ರೀತಿಯಿಂದ 'ಅತ್ತಿಗೆ' ಎಂದೇ ಕರೆಯುತ್ತಿದ್ದ. ಅಲ್ಲದೆ ಸ್ವಾಮಿ ನಿಮ್ಮನ್ನು ಮದುವೆಯಾಗುತ್ತಾರೆ ಎಂಬ ಭರವಸೆಯನ್ನೂ ನೀಡಿದ್ದ.
ಆದರೆ ರಂಜಿತಾಳ ಪ್ರಸ್ತಾಪವನ್ನು ಸ್ವಾಮೀಜಿ ತಳ್ಳಿ ಹಾಕಿದ್ದಳ್ಳದೆ, ಇವಳನ್ನು ನಿರ್ಲಕ್ಷಿಸಲು ಆರಂಭಿಸಿ ಮತ್ತೊಬ್ಬ ಯುವತಿಯ ಹತ್ತಿರ ಸರಿಯಲಾರಂಭಿಸಿದ್ದರು. ಇದರಿಂದ ತೀವ್ರವಾಗಿ ನೊಂದುಕೊಂಡ ರಂಜಿತಾ ಪದೇ ಪದೇ ಮನವಿ ಮಾಡಿದ ಹೊರತಾಗಿಯೂ ಸ್ವಾಮಿ ತನ್ನ ನಿಲುವನ್ನು ಸಡಿಲಿಸಿರಲಿಲ್ಲ ಎಂದು ಮೂಲಗಳು ಹೇಳಿವೆ.
ಇದೇ ಹಿನ್ನೆಲೆಯಲ್ಲಿ ಕರುಪ್ಪನ್ ಜತೆ ಸೇರಿದ ರಂಜಿತಾ ವೀಡಿಯೋ ಚಿತ್ರೀಕರಣಕ್ಕೆ ಸಹಕರಿಸಿದ್ದಳು. ಇದನ್ನು ಮುಂದಿಟ್ಟುಕೊಂಡು ಸ್ವಾಮೀಜಿಯನ್ನು ಕರುಪ್ಪನ್ ಬ್ಲ್ಯಾಕ್‌ಮೇಲ್ ಮಾಡಿದ್ದ. ಇದು ಯಶಸ್ಸು ಕಾಣದೇ ಇದ್ದಾಗ ಈ ಹಾದಿ ತುಳಿದಿದ್ದಾನೆ ಎಂದೂ ಹೇಳಲಾಗಿದೆ.
ಸ್ವಾಮೀಜಿಯಿಂದ ವೀಡಿಯೋ ಸ್ಪಷ್ಟನೆ ಪೂರ್ಣಪಾಠ....
ಅಜ್ಞಾತ ಸ್ಥಳವೊಂದರಲ್ಲಿ ಸಾಮಾನ್ಯ ಕ್ಯಾಮರಾವೊಂದರಿಂದ ಚಿತ್ರೀಕರಿಸಲಾಗಿರುವ ವೀಡಿಯೋವನ್ನು ನಿತ್ಯಾನಂದ ಮಠದ ಅಧಿಕೃತ ವೆಬ್‌ಸೈಟಿನಲ್ಲಿ ಹಾಕಲಾಗಿದ್ದು, ಸ್ವತಃ ಸ್ವಾಮೀಜಿ ನೀಡಿರುವ ಸ್ಪಷ್ಟನೆ ಇದರಲ್ಲಿದೆ.
ಆದರೆ ಎಲ್ಲೂ ಕೂಡ ತಮಿಳು ನಟಿ ಜತೆಗಿನ ಕಾಮಕಾಂಡ ಅಥವಾ ಕರುಪ್ಪನ್ ಕುತಂತ್ರ ಹೀಗೆ ಯಾವ ವಿಚಾರವನ್ನೂ ಸ್ವಾಮೀಜಿ ಪ್ರಸ್ತಾಪಿಸಿಲ್ಲ. ಕಾವಿಧಾರಿಯಾಗಿರುವ ಸ್ವಾಮಿ ಆರಂಭದಲ್ಲಿ ನಾಲ್ಕು ಸಾಲುಗಳ ಮಂತ್ರವನ್ನು ಉಚ್ಛರಿಸಿದ ನಂತರ ಕೈ ಮುಗಿದು ಮಾತು ಆರಂಭಿಸುವ ಚಿತ್ರಣ ಇದರಲ್ಲಿದೆ.
'ನನ್ನ ಮೇಲೆ, ನಮ್ಮ ಧಾರ್ಮಿಕ ಸಂಸ್ಥೆಯ ಮೇಲೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಆಪಾದನೆಗಳನ್ನು ಹೊರಿಸಲಾಗಿದೆ. ಇದೇ ಹೊತ್ತಿನಲ್ಲಿ ಸಾವಿರಾರು ಇ-ಮೇಲ್ ಹಾಗೂ ಪತ್ರಗಳ ಮೂಲಕ ವಿಶ್ವದಾದ್ಯಂತದ ಭಕ್ತರು ಮತ್ತು ಅಭಿಲಾಷಿಗಳು ನಮಗೆ ಸಾಂತ್ವನ ಹೇಳಿದ್ದಾರೆ'
'ಈ ಆಪಾದನೆಯಿಂದ ಭಕ್ತರು ಆಘಾತಕ್ಕೊಳಗಾಗಿದ್ದಾರೆ. ಅವರಿಗೆಲ್ಲ ನಾನು ನೀಡುತ್ತಿರುವ ಭರವಸೆಯೇನೆಂದರೆ, ನಾನು ಯಾವುದೇ ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ. ದಯವಿಟ್ಟು ಈಗಲೇ ಯಾವುದೇ ನಿರ್ಧಾರಕ್ಕೆ ಬರಬೇಡಿ. ಪ್ರಕರಣದ ಕುರಿತು ನಾವು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದೇವೆ'
'ನಮ್ಮೊಂದಿಗೆ ಕಳೆದ ಹಲವಾರು ವರ್ಷಗಳಿಂದ ಇರುವ ಮತ್ತು ಕಷ್ಟಕಾಲದಲ್ಲೂ ನಮ್ಮನ್ನು ಬೆಂಬಲಿಸುತ್ತಿರುವ ಭಕ್ತರಿಗೆ ಕೃತಜ್ಞತೆಗಳು' ಎಂದು ತಮಿಳು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿರುವ ವೀಡಿಯೋ ಹೇಳಿಕೆಗಳಲ್ಲಿ ತಿಳಿಸಲಾಗಿದೆ
ವರದಿಯ ವಿವರಗಳು |
 |
ಕೃಪೆ : WEB DUNIYA ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-08
|
|
| hassanmukka, mangalore | 2010-03-09 | | ಹಾಗಾದರೆ ಸ್ವಾಮಿಜಿಗೆ ಮಾಹಿತಿ ಕಲೆ ಹಾಕಲು ಇನ್ನು ಎಸ್ತು ದಿನ ಬೆಕು?
ಈ ಸಮಯದಲ್ಲಿ ರಾಜಕರನಿಗಳನ್ನು ,ಬೆಕಾದ ಅಧಿಕಾರಿಗಳನ್ನು,ಪೊಲಿಸರನ್ನು,ಕೊರ್ಟಿನ
ನ್ಯಾಯಾಧಿಷರನ್ನು ಹಿಡ್ದು ಕೆಸನ್ನು ಹಳ್ಳ ಹಿಡ್ಸಲು ಸುಲಭ ಆಗುತ್ದೆ!
|
|