ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ. |
ಪ್ರಕಟಿಸಿದ ದಿನಾಂಕ : 2010-03-08
ಮಂಗಳೂರು,ಮಾ.08: ಅಬಕಾರಿ ಇಲಾಖೆಯು ನಡೆಸಿದ ವಿಶೇಷ ಕಾರ್ಯಚರಣೆಯಲ್ಲಿ ನಗರದ ಬಂದರು ಮತ್ತು ಫರಂಗಿಪೇಟೆಗಳ ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಕಳ್ಳ ಬಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಸುಮಾರು 7 ಲಕ್ಷ 50 ಸಾವಿರ ಮೌಲ್ಯದ ಕೊಳೆತ ಬೆಲ್ಲವನ್ನು ವಶಪಡಿಸಿಕೊಂಡು 4 ಮಂದಿ ಆರೋಪಿಗಳನ್ನು ಬಂಧಿಸಿರುತ್ತಾರೆ.
ಬಂದಿತರ ವಿವರ:
1)ಸುಧೀರ್ ವಾಲ್ಕೆ, 2)ಕ್ರಷ್ಣಪ್ಪ, 3)ದಾಮೋದರ್ ಶೆಣೈ, 4)ನಿಸಾರ್ .ಎಫ್.
ಕೆ.ಭೀಮಪ್ಪ ಅಬಕಾರಿ ಜಂಟಿ ಆಯುಕ್ತರು(ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ, ಮಂಗಳೂರು ಇವರ ನೇತ್ರತ್ವದಲ್ಲಿ ಇಂದು ಮಂಗಳೂರು ನಗರದ ಕೋರ್ಟ್ ರಸ್ತೆ, ಬಂದರ್ ಹಾಗೂ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಇಲ್ಲಿ ಕಳ್ಳಭಟ್ಟಿ ತಯಾರು ಮಾಡಲು ಉಪಯೋಗಿಸುತ್ತಿದ್ದ ಸುಮಾರು 50 ಕೆ.ಜಿ ತೂಕದ 458 ಮೂಟೆಗಳಲ್ಲಿ ತುಂಬಿಸಿಟ್ಟಿದ್ದ ಒಟ್ಟು 22,900ಕೆ.ಜಿ ಕೊಳೆತ ಬೆಲ್ಲವನ್ನು 4 ಗೋಡೌನ್‌ಗಳ ಮೇಲೆ ದಾಳಿ ನಡೆಸಿ 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಜಫ್ತು ಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ರೂ 7,50,000.00 ಆಗಿರುತ್ತದೆ. ಮುಂದಿನ ತನಿಖೆಯನ್ನು ಕಾರ್ಯವ್ಯಾಪ್ತಿಯ ಅಬಕಾರಿ ನಿರೀಕ್ಷಕರು ಹಾಗೂ ಉಪನಿರೀಕ್ಷರು ನಡೆಸುತ್ತಿದ್ದಾರೆ.
ಈ ರೀತಿಯಾಗಿ ಮಾನವ ಸೇವೆನೆಗೆ ಯೋಗ್ಯವಲ್ಲದ ಮತ್ತು ಆರೋಗ್ಯಕ್ಕೆ ಹಾನಿಕರವಾದ ಕೊಳೆತ ಬೆಲ್ಲವನ್ನು ದಾಸ್ತಾನು ಇರಿಸುವುದಾಗಲೀ ಸಾಗಾಟ ಮತ್ತು ಮಾರಾಟ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 24 - A ಪ್ರಕಾರ ಅಪರಾಧವಾಗಿದ್ದು, ಕರ್ನಾಟಕ ಅಬಕಾರಿ ಕಾಯ್ದೆ ನಿಯಮ 32 ರಂತೆ ಶಿಕ್ಷಾರ್ಹವಾಗಿರುತ್ತದೆ ಎಂದು ಅಬಕಾರಿ ಜಂಟಿ ಅಯುಕ್ತಕರಾದ ಕೆ.ಭೀಮಪ್ಪ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ವಿ.ಎಸ್.ಗುಂಡು, ಎಸ್.ತಮ್ಮ, ಕೆ.ಎಸ್.ರಾಜಶೇಖರ್, ಎಂ.ಕೆ.ಕೇಶವಮೂರ್ತಿ ಹಾಗೂ ಅಬಕಾರಿ ಉಪನಿರೀಕ್ಷಕರುಗಳಾದ ಸತೀಶ್ ಕುದ್ರೋಳಿ, ಕುಶಾಲಪ್ಪ ಗೌಡ, ಮೋಹನ್ ರಾವ್, ರೋಹಿತಾಶ್ವ, ಹೆಚ್.ವಿ.ಸುರೇಶ್, ಕ್ರಷ್ಣಪ್ಪ ಹಾಗೂ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ ಎಸ್ ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-08
|
|
|