ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ |
ಪ್ರಕಟಿಸಿದ ದಿನಾಂಕ : 2010-03-09
{PLEASE CLK THE LINK ABOVE TO VIEW MORE NICE PICS}
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಪುರುಷ-ಮಹಿಳೆಯರ ಸಮಾನತೆಯೇ ಸಂಪೂರ್ಣ ಸಮಾಜವಾಗಿದೆ. ಸ್ತ್ರೀಯರ ವಿನಃ ಸಮಾಜವೇ ಶೂನ್ಯವಾಗಿದ್ದು, ಪುರುಷರಿಗೆ ಸಮಭಾಗಿಯಾಗಿ ಬದುಕನ್ನರಸಿದ ಸ್ತ್ರೀಯರು ಸಮಾಜದಲ್ಲಿ ಸಮಾನತೆಯನ್ನು ಕಂಡುಕೊಂಡಿದ್ದಾರೆ. ಆದುದರಿಂದಲೇ ವರದಕ್ಷಿಣೆ ಗಳಂತಹ ಪಿಡುಗು, ದೌರ್ಜನ್ಯ ಮರೆಯಾಗುತ್ತಿದೆ. ಸಮಾನ ಜೀವನಕ್ಕಾಗಿ ಮಹತ್ವದ ನಿರ್ಣಾಯಗಳಿಗೂ ಮಹಿಳೆಯರು ಪ್ರಧಾನ ವಾಗಿದ್ದು, ಪ್ರಸಕ್ತ ಹೆಣ್ಣೊಬ್ಬಳಿಗೆ ಬಲ್ಲವಳಾಗಲು ಎಲ್ಲವೂ ಸರಳ ಮತ್ತು ಮುಕ್ತವಾಗಿದೆ. ಆದುದರಿಂದಲೇ ಇದು ಮಹಿಳಾ ಪ್ರಭುತ್ವ ದ ಕಾಲಘಟ್ಟವಾಗಿದೆ. ಪುರುಷರು ಒಂದು ಮನೆಯ ಮೂಲ ಕಂಬಗಳಾಗಿದ್ದರೆ ಮಹಿಳೆಯರು ಭದ್ರತೆ ನೀಡುವ ಛಾವಣಿ ಗಳಂತೆ. ಎಲ್ಲಾ ಸ್ತ್ರೀಯರನ್ನು ಸುಶಿಕ್ಷಿತರನ್ನಾಗಿಸಿ ಮಹಿಳಾ ಪ್ರದಾನ ಸಮಾಜಕ್ಕೆ ನಾಂದಿಯಾಡುವ ಅಗತ್ಯ ಮಹಿಳೆ ಯರದ್ದಾಗ ಬೇಕು. ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿ ಭಾರತೀಯ ಸ್ತ್ರೀಶಕ್ತಿಯನ್ನು ವಿಶ್ವಕ್ಕೆ ಮಾದರಿಯಾಗಿಸ ಬೇಕು ಎಂದು ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಂ. ಹೆಗ್ಡೆ ಕರೆಯಿತ್ತರು.


ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ (೦೮.೦೩.೨೦೧೦) ಸೋಮವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಂ.ಹೆಗ್ಡೆ ಆಗಮಿಸಿ ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿ ಆಶಾ ಹೆಗ್ಡೆ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಹಾಗೂ ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷರಾದ ಜಯ ಸಿ.ಸುವರ್ಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಎಸೋಸಿಯೇಶನ್‌ನ ಕಾರ್ಯಾಧ್ಯಕ್ಷ ವೈ. ನಾಗೇಶ್, ಉದ್ಯಮಿ ಶ್ರೀಮತಿ ಮೊಮಿತಾ ಹರೀಶ್ ಅವಿನ್, ಸಮಾಜ ಸೇವಕಿ ಶ್ರೀಮತಿ ಸುಗುಣಾ ಕೆ.ಕಾಮತ್, ರಂಗನಟಿ ಶ್ರೀಮತಿ ಅರುಷಾ ಎನ್.ಶೆಟ್ಟಿ ಮತ್ತು ಪ್ರೊ. ನಿರ್ಮಲಾ ಸನೀಲ್ ಉಪಸ್ಥಿತರಿದ್ದರು.



ವೇದಿಕೆಂiiಲ್ಲಿ ಉಪಕಾರ್ಯಾಧ್ಯಕ್ಷೆ ಶ್ರೀಮತಿ ಎಸ್. ಪೂಜಾರಿ, ಶ್ರೀಮತಿ ಪ್ರಭಾ ಕೆ.ಬಂಗೇರಾ, ಶ್ರೀಮತಿ ಶೋಭಾ ದಯಾನಂದ್, ಶ್ರೀಮತಿ ಸುಮಲತಾ ಎಲ್.ಅವಿನ್, ಶ್ರೀಮತಿ ಮೋಹಿನಿ ವಿ.ಕೋಟ್ಯಾನ್, ಶ್ರೀಮತಿ ಜಾನಕಿ ನಾಗೇಶ್, ಶ್ರೀಮತಿ ವಸಂತಿ ಸಾಲ್ಯಾಣ್ಕರ್, ಶ್ರೀಮತಿ ಲೀಲಾ ಸಿ.ಸಾಲ್ಯಾನ್, ಶ್ರೀಮತಿ ಸುಮಿತ್ರಾ ಎಸ್. ಬಂಗೇರಾ ಮತ್ತಿತರರು ವಿಶೇಷ ಆಮಂತ್ರಿತ್ರರಾಗಿ ಹಾಜರಿದ್ದರು.
ಮಾತೆಯರೆಣಿಸಿ ಮೆರೆಯುವ ಪ್ರತೀಯೋರ್ವ ಮಹಿಳೆಯಿಂದ ಮಾತ್ರ ಸಂಸ್ಕಾರಯುತ ಮತ್ತು ಉತೃಷ್ಟ ನಿಲುವಿನ ಸಮಾಜ ರೂಪಿಸಲು ಸಾಧ್ಯವಾಗಿದ್ದು, ಮಹಿಳಾ ಪ್ರಧಾನ ಸಮಾಜದ ನಿರ್ಮಾಣಕ್ಕೆ ಸ್ತ್ರೀಯರಲ್ಲಿ ಸಾಂಘಿಕ ಶಕ್ತಿಯ ಅವಶ್ಯವಿದೆ ಎಂದು ಮೊಮಿತಾ ಅವಿನ್ ಅಬಿಪ್ರಾಯ ಪಟ್ಟರು.



ಸುಗುಣಾ ಕಾಮತ್ ಮಾತನಾಡಿ ನಾರಾಯಣ ಗುರುಗಳ ಪ್ರತಿಷ್ಠಾಪಿತ ಸಾನಿಧ್ಯದಲ್ಲಿ ಮಹಿಳೆಯರ ಒಗ್ಗೂಡುವಿಕೆ ಅರ್ಥಪೂರ್ಣವಾದದ್ದು. ಬ್ರಹ್ಮಶ್ರೀಗಳ ತತ್ವವು ಮಾತೆಯರೆಲ್ಲರೂ ಪರಿಪಾಲಿಸಿದರೆ ಆಶಾಯುತ ದೇಶಕ್ಕಾಗಿ ಮಹಿಳಾ ದಿಶಾ ಅವಶ್ಯವಾಗಿ ಕಾರ್ಯನಿರ್ವಾಹಿಸ ಬಲ್ಲದು. ತುಳುನಾಡಿನ ಜನತೆ ಒಂದು ಬೆರಳಿನಿಂದಲೂ ಕಣ್ಣೀರನ್ನು ಒರಸಿ ಸಂತೈಸಬಲ್ಲ ಶ್ರೀಮಂತಿಕೆಯುಳ್ಳವರಾಗಿದ್ದಾರೆ. ಇದು ಮಾನವೀಯ ಮೌಲ್ಯದ ಸದ್ಗುಣತೆಯನ್ನು ಮೆರೆಯುತ್ತದೆ. ಇದು ಸೃಷ್ಠಿಕರ್ತನ ಭಾಗ್ಯದಾರಿಯೂ ಹೌದು ಎಂದರು.




ಶಕ್ತಿಶಾಲಿ ಭಾರತ ರಾಷ್ಟ್ರದ ನಿರ್ಮಾಣಕ್ಕೆ ಮಹಿಳಾ ಶಕ್ತಿಯು ಪೂರಕವಾಗಿದೆ. ಸಂಸ್ಕಾರಯುತ ಭಾರತಕ್ಕೆ ಮಹಿಳೆಯರೇ ಮುಂದಾಗಬೇಕು. ತಮ್ಮನ್ನು ಎಂದೂ ಅಬಲೆಯರು ಎನ್ನುವುದನ್ನು ಮರೆತು ಸಬಲತೆಯ ಸದ್ಗುಣವನ್ನೇ ಮೈಗೂಡಿಸಿ ಸುಧೃಡ ಸಮಾಜವನ್ನು ನಿರ್ಮಿಸೋಣ ಎಂದು ಅರುಷಾ ಶೆಟ್ಟಿ ಕರೆಯಿತ್ತರು.
ಸಮಾಜದಲ್ಲಿ ಮಹಿಳೆಯರು ಸಮಾನರು ಮತ್ತು ಅರ್ಹರೂ ಕೂಡಾ. ಆದರೆ ಇಂದು ಸ್ತ್ರೀಯರಲ್ಲಿ ತಾಳ್ಮೆ ಶಕ್ತಿ ಕ್ಷೀಣಿಸುತ್ತಿದ್ದು ಇದು ಸಮಾಜಘಾತುಕ ಘಟನೆಗಳಿಗೆ ಹೆಚ್ಚಿನ ಅವಕಾಶವಾಗುತ್ತಿವೆ. ಅತಿಯಾದ ಸುಶಿಕ್ಷಿತರು ಎಂದ ಮಾತ್ರಕ್ಕೆ ಸಮಾನರು ಎನ್ನುವಂತಿಲ್ಲ. ಮೊದಲು ಹೊಂದಾಣಿಕೆಯೊಂದಿಗೆ ಸಾಮರಸ್ಯದ ಬಾಳಿಗೆ ಸಮಾನರಾಗುವುದು ಅತ್ಯವಶ್ಯ. ಸಮಾನತೆಯನ್ನೇ ವಸ್ತುವಾಗಿಸಿ ಬಾಳುವುದರಿಂದಲೇ ಪ್ರಸಕ್ತ ದಾಂಪತ್ಯ ಜೀವನದಲ್ಲಿ ಅಧಿಕ ವಿಚ್ಛೇದನಗಳು ವೃದ್ಧಿಯಾಗುತ್ತಿವೆ. ಆದುದರಿಂದ ಮಹಿಳೆಯರು ಪುರುಷರ ವಿಶ್ವಾಸವನ್ನು ಗಳಿಸಿ, ವಾತ್ಸಲ್ಯಮಯಿ ಬಾಳನ್ನು ರೂಪಿಸುವ ಅಗತ್ಯವಿದೆ. ಹಾಗೆಯೇ ಸ್ತ್ರೀಯರು ಸಮಾಜಕ್ಕೆ ಆದರ್ಶಪ್ರಾಯರಾಗಿ ಭವಿಷ್ಯತ್ತಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಜೀವನ ಕಲಿಸುವ ಅಗತ್ಯವೂ ಇದೆ. ಎಂದು ಜಯ ಸಿ.ಸುವರ್ಣರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ವಿ.ಉಳ್ಳಾಲ್ ಸ್ವಾಗತಿಸಿದರು. ಎಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಸುವರ್ಣ ಪ್ರಾಸ್ತವಿಕ ನುಡಿಗಳನ್ನಾದಿದರು. ಸುಶೀಲಾ ಮತ್ತು ಮೋಹಿನಿ ಪ್ರಾರ್ಥನೆಯನ್ನಾಡಿದರು. ಕು| ನಿಶಾ ನಿತ್ಯಾನಂದ್ ಕೋಟ್ಯಾನ್ ಅತಿಥಿಗಳನ್ನೆಲ್ಲರನ್ನೂ ಪರಿಚಯಿಸಿದರು. ಎಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ನಿತ್ಯಾನಂದ ಡಿ.ಕೋಟ್ಯಾನ್ ಮತ್ತು ಸಿ.ಟಿ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೆ.ಸುವರ್ಣ, ಗೌ| ಜತೆ ಕಾರ್ಯದರ್ಶಿ ಧರ್ಮೇಶ್ ಎಸ್.ಸಾಲ್ಯಾನ್ ಮುಂತಾದವರು ಉಪಸ್ಥಿತರಿದ್ದು, ನೃತ್ಯಗಳನ್ನು ಸಾದರ ಪಡಿಸಿದ ತಂಡಗಳಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಮಹಿಳಾ ವಿಭಾದದ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀ ಎನ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಮಲತಾ ಅವಿನ್ ಧನ್ಯವಾದ ಸಮರ್ಪಿಸಿದರು.



ಇದೇ ಸಂದರ್ಭದಲ್ಲಿ ಯೋಗಋಷಿ, ಆಧ್ಯಾತ್ಮವಾದಿ ಬಾಬಾ ರಾಮ್‌ದೇವ್ ಇವರ ಸಂಸ್ಥೆಯ ಪದಾಧಿಕಾರಿಗಳು ಸ್ಲೈಡ್ ಶೋ ಮುಖೇನ ಮಹಿಳೆಯರಿಗೆ ವಿಶೇಷವಾದ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದು, ಎಸೋಸಿಯೇಶನ್‌ನ ವಿವಿಧ ಸ್ಥಳಿಯ ಮತ್ತು ಸಾಮನ್ವಯ ಸಮಿತಿಗಳ ಮಹಿಳಾ ವಿಭಾಗಗಳ, ಭಾರತ್ ಬ್ಯಾಂಕ್‌ನ ಮಹಿಳೆಯರು ಮತ್ತು ಬಾಲಕೀಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಸಾದರಪಡಿಸಿದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-09
|
|
|