ಮಂಗಳೂರು: ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ
ಪ್ರಕಟಿಸಿದ ದಿನಾಂಕ : 2010-03-10
ಮಂಗಳೂರು, ಮಾ.೯: ತುಂಬೆಯ ಬಿ.ಎ. ಆಸ್ಪತ್ರೆ ಹಾಗೂ ಬಂಟ್ವಾಳ ಕೆಳಗಿನ ಪೇಟೆಯ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ ನಡೆಯಿತು.
ಸಮಾರಂಭವನ್ನು ಬಿಎ ಆಸ್ಪತ್ರೆಯ ಸ್ಥಾಪಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಬಿ.ಎ. ಮುಹಮ್ಮದ್ ವಹಿಸಿದ್ದರು. ಬಿ.ಎ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಆರ್.ಶೆಟ್ಟಿ ಬಿ.ಎ. ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹಾಜಿ ಪಿ.ಬಿ.ಅಬ್ದುಲ್ ಖಯ್ಯೂಂ, ಸದಸ್ಯರಾದ ಹಾಜಿ ಬಿ.ಎ.ಸುಲೈಮಾನ್ ಮತ್ತು ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಕಾರ್ಯದರ್ಶಿ ಶಮೀವುಲ್ಲಾ ಉಪಸ್ಥಿತರಿ ದ್ದರು. ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಉಚಿತವಾಗಿ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ತುಂಬೆ ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು.
ಅಬ್ದುರ್ರಹ್ಮಾನ್ ಕಿರಾಅತ್ ಪಠಿಸಿದರು. ಡಾ. ಇಮ್ರಾನ್, ಇಸ್ಮಾಯಿಲ್ ಎಸ್.ಕೆ. ಸಹಕರಿಸಿದರು.