ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ |
ಪ್ರಕಟಿಸಿದ ದಿನಾಂಕ : 2010-03-10
ಮಂಗಳೂರು, ಮಾ. ೯: ಮಂಗಳೂರು- ಮಣಿಪಾಲ ನಡುವೆ ವೋಲ್ವೊ ಬಸ್ ಆರಂಭಿಸಲು ವ್ಯವಸ್ಥೆಗಳು ಪೂರ್ಣಗೊಂಡಿವೆ. ಕೆಲವೇ ದಿನಗಳಲ್ಲಿ ಯೋಜನೆ ಜಾರಿಗೊಳಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಪರವಾನಿಗೆ ಸೇರಿದಂತೆ ಎಲ್ಲ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಉದ್ಘಾಟನೆ ದಿನಾಂಕ ಅಂತಿಮಗೊಂಡಿಲ್ಲ. ಆದರೆ ಮುಂದಿನ ಸೋಮವಾರದ ವೇಳೆಗೆ ಯೋಜನೆ ಕಾರ್‍ಯರೂಪಕ್ಕೆ ಬರುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗ ಹಿರಿಯ ವಿಭಾಗೀಯ ನಿಯಂತ್ರಾಣಾಧಿಕಾರಿ ಪಿ. ಬಿ. ಕರುಂಬಯ್ಯ ಅವರು ಮಂಗಳವಾರ ತಿಳಿಸಿದರು.

ಮಂಗಳೂರಿನಿಂದ ಉಡುಪಿಗೆ ೫೫ ರೂ. ಹಾಗೂ ಮಣಿಪಾಲಕ್ಕೆ ೬೦ ರೂ. ದರ ನಿಗದಿಪಡಿಸಲು ಚಿಂತನೆ ನಡೆದಿದೆ ಎಂದವರು ತಿಳಿಸಿದರು. (ಇತರ ಎಕ್ಸ್‌ಪ್ರೆಸ್ ಬಸ್‌ಗಳಿಗೆ ಈ ದರ ೩೬ ಮತ್ತು ೩೮ ರೂ. ಇವೆ.)
ಮಂಗಳೂರು ಸ್ಟೇಟ್‌ಬ್ಯಾಂಕ್-ಮಣಿಪಾಲ ನಡುವೆ ಸಂಚರಿಸುವ ಹೊಸ ಬಸ್‌ಗಳಿಗೆ ಸುರತ್ಕಲ್, ಮೂಲ್ಕಿ, ಪಡುಬಿದ್ರೆ, ಉಡುಪಿಯಲ್ಲಿ ನಿಲುಗಡೆ ಇವೆ. ಸಾರ್ವಜನಿಕರಿಗೆ ಸುಮಾರು ಗಂಟೆಗೊಂದ ರಂತೆ ವೋಲ್ವೊ ಬಸ್ ಲಭ್ಯವಾಗಲಿವೆ.

ಪ್ರಥಮ ಹಂತದಲ್ಲಿ ಒಟ್ಟು ೬ ವೋಲ್ವೊ ಬಸ್‌ಗಳು ಈ ಮಾರ್ಗದಲ್ಲಿ ಓಡಾಟ ನಡೆಸಲಿದ್ದು, ೫ ಬಸ್‌ಗಳು ಇಲಾಖೆಯ ಮಂಗಳೂರು ಕಾರ್‍ಯಾಗಾರದಲ್ಲಿ ಸಜ್ಜಾಗಿ ನಿಂತಿವೆ. ಇನ್ನೊಂದು ಬಸ್ ಮುಂದಿನ ಎರಡು ದಿನಗಳಲ್ಲಿ ಮೈಸೂರಿನಿಂದ ಮಂಗಳೂರಿಗೆ ಆಗಮಿಸಲಿದೆ.
-ಹೈಟೆಕ್ ಸೌಲಭ್ಯ: ಸಂಪೂರ್ಣ ಹವಾನಿಯಂತ್ರಿತ ವಾಗಿರುವ ಈ ಬಸ್‌ಗಳು ಚಲನಚಿತ್ರ ಮಂದಿರಗಳಲ್ಲಿ ಇರುವಂತಹ ಗ್ರೇಡಿಯನ್ ಆಸನ ವ್ಯವಸ್ಥೆ, ಪ್ರಯಾಣಿಕರಿಗೆ ಬಸ್ ತಲುಪಿರುವ ಸ್ಥಳದ ಕುರಿತು ಮಾಹಿತಿ ನೀಡುವ ಎಲೆಕ್ಟ್ರಾನಿಕ್ ನಿಯಂತ್ರಿತ ಮಾರ್ಗಸೂಚಿ ಫಲಕಗಳು, ಸ್ವಯಂಚಾಲಿತ ಬಾಗಿಲುಗಳನ್ನು ಒಳಗೊಂಡಿವೆ.
ಅಂಗವಿಕಲರು, ವೃದ್ಧರು, ಕಾಯಿಲೆ ಪೀಡಿತರನ್ನು ವೀಲ್‌ಚಯರ್ ಮೂಲಕ ನೇರವಾಗಿ ಬಸ್‌ನೊ ಳಗೆ ಆಸನ ಸಮೀಪ ತನಕವೂ ಕರೆಯೊಯ್ಯಲು ಅನುಕೂಲವಾಗುವಂತಹ ತಂತ್ರಜ್ಞಾನ ಉಪ ಯೋಗಿಸಿ ಬಸ್ ನಿರ್ಮಾಣಗೊಂಡಿದೆ.

ಗೇರ್ ಬದಲಿಸುವ ಪ್ರಕ್ರಿಯೆಯನ್ನು ಚಾಲಕ ಕೇವಲ ಗುಂಡಿ ಒತ್ತುವ ಮೂಲಕ ನಿಯಂತ್ರಿಸಲಿ ದ್ದಾನೆ. ಬಸ್‌ನ ವೇಗಕ್ಕೆ ತಕ್ಕಂತೆ ಗೇರ್ ತನ್ನಷ್ಟಕ್ಕೆ ಬದಲಾವಣೆಗೊಳ್ಳುತ್ತದೆ. ಬಸ್‌ನ ಹಿಂಭಾಗ ಮತ್ತು ಹಿಂಬಾಗಿಲಿನ ದೃಶ್ಯವನ್ನು ಚಾಲಕ ತನ್ನ ಆಸನದ ಮುಂದಿರುವ ಪರದೆಯಲ್ಲಿ ಕಾಣಬಹು ದಾಗಿದೆ ಎಂದು ಸಹಾಯಕ ತಾಂತ್ರಿಕ ಅಧಿಕಾರಿ ಮಂಜುನಾಥ ವಿವರಿಸಿದರು. ಬಸ್ ಗಂಟೆಗೆ ೧೨೫ ಕಿ. ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ಬೆಂಗಳೂರು, ಮೈಸೂರು ಬಳಿಕ ವೋಲ್ವೊ ಸಿಟಿ ಬಸ್ ಹೊಂದಿರುವ ೩ನೇ ಡಿಪೋ ಮಂಗಳೂ ರು.
ವರದಿಯ ವಿವರಗಳು |
 |
ಕೃಪೆ : ಪ್ರಕಾಶ್ ಮಂಜೇಶ್ವರ/ಚಿತ್ರ ಮ್ಯಾ೦ಗಲೋರಿಯನ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-10
|
|
| Suresh Bangera, Palimar, Muscat | 2010-03-10 | | Its very good news.but expence,
the same way why the KSRTC can not provide normal like other private express bus in-between udupi m\'lore in cheep rate. |
|