ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ನವೀನ್ ಲೋಬೊ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-03-11
ಪಶ್ಚಿಮ ರೈಲ್ವೇಯ ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ಮಂಗಳೂರು ಬೊಂದೇಲ್ ಮೂಲದ ನವೀನ್ ಲೋಬೊ ಅತ್ಯಾಧಿಕ ಮತಗಳಿಂದ ಚುನಾಯಿತರಾಗಿದ್ದಾರೆ.
ಬ್ಯಾಂಕ್‌ನ ೧೯ಜನರ ನಿರ್ದೇಶಕ ಮಂಡಳಿಗೆ ಕಳೆದ ಭಾನುವಾರ ನಡೆದ ಚುನಾವಣೆಯಲ್ಲಿ ಅತ್ಯಾಧಿಕ ಮತಗಳಿಂದ ಚುನಾಯಿತರಾಗಿದ್ದ ನವೀನ್ ಲೋಬೊ ಕಳೆದ ಸುಮಾರು ಎರಡುವರೆ ದಶಕಗಳಿಂದ ಪಶ್ಚಿಮ ರೈಲ್ವೇಯ ನೌಕರನಾಗಿರುವರು. ಕೆಳಸ್ತರದ ನೌಕರನಾಗಿ ರೈಲ್ವೇಗೆ ಭರ್ತಿಗೊಂಡು ಸದ್ಯ ಉನ್ನತ ಸ್ಥಾನದಲ್ಲಿ ಸೇವಾನಿರತ ನವೀನ್ ಲೋಬೊ ಗುಜರಾತ್, ಮಧ್ಯಪ್ರದೇಶ, ಜೈಪುರ್, ಮಹಾರಾಷ್ಟ್ರ ರಾಜ್ಯಗಳ ನಗರಗಳಲ್ಲಿ ಕಾರ್ಯನಿರತ ಪಶ್ಚಿಮ ರೈಲ್ವೇಯ ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕತ್ವಕ್ಕೆ ಇದೇ ಮೊದಲ ಭಾರಿ ಸ್ಪರ್ಧಿಸಿದ ಮೊತ್ತಮೊದಲ ತುಳು-ಕನ್ನಡಿಗರಾಗಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-11
|
|
|