ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ |
ಪ್ರಕಟಿಸಿದ ದಿನಾಂಕ : 2010-03-15
ಉಡುಪಿ, ಮಾ.೧೪: ನಿವೃತ್ತಿ ವೇತನ ತಾರತಮ್ಯದ ವಿರುದ್ಧ ಮಾಜಿ ಸೈನಿಕರು ರವಿವಾರ ಉಡುಪಿ ಅಜ್ಜರ ಕಾಡಿನ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿ, ರಕ್ತದಿಂದ ಸಹಿ ಮಾಡಿದ ಮನವಿ ಪತ್ರವನ್ನು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ಸಲ್ಲಿಸಿದರು.
ಉಡುಪಿ ಜಿಲ್ಲಾ ಮಾಜಿ ಸೈನಿಕರ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ೫೦ಕ್ಕೂ ಅಧಿಕ ಮಾಜಿ ಸೈನಿಕರು, ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು. ಈ ಸಂಬಂಧ ಮನವಿಯನ್ನು ನವ ದೆಹಲಿಯ ಇಂಡಿಯನ್ ಎಕ್ಸ್ ಸರ್ವಿಸ್‌ಮನ್ ಮೂವ್‌ಮೆಂಟ್ ಸಂಸ್ಥೆಯ ಮೂಲಕ ಅರ್ಪಿಸಲಾಯಿತು.

ಮಾಜಿ ಸೈನಿಕರ ‘ಒಂದು ರ‍್ಯಾಂಕ್- ಒಂದು ಪೆನ್ಶನ್’ ಬೇಡಿಕೆಯನ್ನು ಸರಕಾರ ಪ್ರತಿ ಬಾರಿಯೂ ತಿರಸ್ಕರಿ ಸುತ್ತಿದೆ. ಭಾರತೀಯ ಸೇನೆಗಳಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಪಡೆಯುತ್ತಿರುವ ನಿವೃತ್ತಿ ವೇತನಕ್ಕೂ, ೨೦೦೬ರ ಜನವರಿಯಿಂದ ನಿವೃತ್ತಿಯಾದ ಸೈನಿಕರು ಪಡೆಯುವ ವೇತನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಒಂದೇ ಹುದ್ದೆಯಲ್ಲಿರುವ ಮಾಜಿ ಸೈನಿಕನ ಸಮಾನ ಸೇವಾವಧಿಗೆ ಸಮಾನ ವಾದ ನಿವೃತ್ತಿ ವೇತನ ದೊರಕಬೇಕೆಂ ಬುದು ನಮ್ಮ ಪ್ರಮುಖ ಬೇಡಿಕೆಯಾ ಗಿದೆ. ಇಂತಹ ತಾರತಮ್ಯವನ್ನು ಸರಕಾರ ಕೂಡಲೇ ನಿವಾರಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ವೇದಿ ಕೆಯ ಉಡುಪಿ ಜಿಲ್ಲಾ ಸಂಚಾಲಕ ಏರ್‌ವೈಸ್ ಮಾರ್ಷಲ್ ಕೆ.ರಮೇಶ್ ಕಾರ್ಣಿಕ್, ನಗರ ಸಂಚಾಲಕ ಚಂದ್ರ ಶೇಖರ್ ಸುವರ್ಣ, ಸಲಹೆಗಾರರಾದ ಕಮೋಡೋರ್ ಜೆ.ಕ್ಯಾಸ್ತಲಿನೋ, ಕರ್ನಲ್ ರಾಮಚಂದ್ರರಾವ್, ಮಾಜಿ ಸೈನಿಕರ ಸೊಸೈಟಿಯ ಅಧ್ಯಕ್ಷ ಎಂ.ಡಿ. ಶ್ರೀಧರ್, ಕೆ.ಎಲ್.ಬಾಳಿಗಾ, ಗಿಲ್ಬರ್ಟ್ ಬ್ರಗಾಂಝ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-15
|
|
|