ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ |
ಪ್ರಕಟಿಸಿದ ದಿನಾಂಕ : 2010-03-16
ದುಬೈ; ತುಳುವರ ಕಲೆ ಮತ್ತು ಸಂಸ್ಕೃತಿಯನ್ನು ಯು.ಏ.ಇಯಲ್ಲಿ ಉಳಿಸಿ ಬೆಳೆಸುವುದರ ಏಕೈಕ ಉದ್ದೇಶದ ಜೊತೆಯಲ್ಲೇ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಒದಗಿಸುವ ಮಹೋನ್ನತ ಉದ್ದೇಶದೊಂದಿಗೆ ರೂಪ ತಳೆದು ಅಸ್ತಿತ್ವಕ್ಕೆ ಬಂದ "ನಮ ತುಳುವೆರ್"ನ ಕಾರ್ಯಕಾರಿ ಸಮಿತಿ ಯ ಸದಸ್ಯರು ವಿನ್ನಿ ರೆಸ್ಟಾರಂಟಿನಲ್ಲಿ ಮುಂಬರುವ ವರ್ಷದ ಯೋಜನೆಗಳನ್ನು ಘೋಷಿ ಸುವ ಸಲುವಾಗಿ ಕಾತರದಿಂದ ಉತ್ಸಾಹದಿಂದ ಒಟ್ಟು ಸೇರಿದ್ದರು.
ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶಿತ ನಮ ತುಳುವೆರ್ ಯು.ಏ.ಇ.ಯಲ್ಲಿ ಪದಾಧಿಕರದ ಗೊಡವೆಯೇ ಇಲ್ಲ. ಇಲ್ಲಿ ಎಲ್ಲರೂ ಸಮಾನರೇ. ಎಲ್ಲಾ ಕೋಮು ಗಳ ಸಂಘಟಿತ ಸಂಸ್ಠೆಗಳ ಹಿರಿಯ ಪದಾಧಿಕಾರಿಗಳು, ನಾಯಕರಲ್ಲದೆ ವಿವಿಧ ವೃತ್ತಿ ರಂಗಗಳಿಂ ದ, ಕಲಾಕ್ಷೇತ್ರಗಳ ಪ್ರತಿನಿಧಿಗಳಿರುವ ಕಾರ್ಯಕಾರಿ ಸಮಿತಿಯಲ್ಲಿ ಜಾತಿ ಮತ ಭೇದಗಳಿಲ್ಲ. ಸಮಿತಿಯ ಸದಸ್ಯರು ತುಳುನಾಡಿನಿಂದ ಬಂದು ಯು.ಏ.ಇ.ಯಲ್ಲಿ ನೆಲೆಗೊಂಡವರು.

ನಾಡಿನ ಉದ್ದಗಲದಿಂದ ಸಂಸ್ಕೃತಿಗಾಗಿ...ಸೇವೆ ಸಲ್ಲಿಸುವ ಮಹೋನ್ನತ ಉದ್ದೇಶಕ್ಕಾಗಿ ಐವತ್ತೊಂದಕ್ಕೂ ಮಿಕ್ಕಿ ಸಹೃದಯಿಗಳು ಒಟ್ಟು ಸೇರಿದ್ದರು. "ರೇಡಿಯೊ ಸ್ಪೈಸ್" ಹಾಗೂ ದಾಯಿಜಿ ಮೀಡಿಯಾದ ಪ್ರತಿನಿಧಿಗಳೂ ಭಾಗವಹಿಸಿದರು.
" ತುಳು ಸಂಸ್ಕೃತಿಯ ವಿಶೇಷ ಒಲವು, ಸಹಾಯಾರ್ಥದ ನಿಲುವು" ಎಂಬುದು ಇದರ ಧ್ಯೇಯವಾಕ್ಯ. ನಿನ್ನೆಯ ದಿನ ನಡೆದ ಸಭೆಯಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಚರ್ಚೆಯ ವಿಷಯಗಳನ್ನು ಪ್ರಸ್ತುತ ಪಡಿಸಲಾಯಿತು.

೧) ನಮ ತುಳುವೆರ್ ಬಗ್ಗೆ ಕಿರು ಪರಿಚಯ
೨) ಹಿಂದಿನ ಚಟುವಟಿಕೆಗಳ ವರದಿ, ಪತ್ರಿಕೆಗಳ ವರದಿ ಮತ್ತು ನೀಡಿದ ನೆರವಿನ ಸಚಿತ್ರ ಸಾಕ್ಷಿಗಳನ್ನು ಪ್ರಸ್ತುತ ಪಡಿಸಲಾಯಿತು.
೩) ಕಳೆದ ವರ್ಷ ಏನೂ ಚಟುವಟಿಕೆಗಳಿಲ್ಲದಿರುವ ಕಾರಣಗಳನ್ನು ಚರ್ಚಿಸಲಾಯಿತು.
೪) ಮುಂಬರುವ ಸಾಲಿನ ಯೋಜನೆಗಳು - ಸಹಾಯಾರ್ಥಕ್ಕಾಗಿ ಧನ ಸಂಗ್ರಹಣೆಯನ್ನು ನಿರ್ಧರಿಸಲಾಯಿತು.
೫) ತುರ್ತು ಪರಿಸ್ಠಿತಿಗಳಿಗೆ ಸ್ಪಂದಿಸುವ ಸಲುವಾಗಿ ನಮ ತುಳುವೆರ್ ದತ್ತ ನಿಧಿಯೊಂದನ್ನು ಪ್ರಾರಂಭಿಸುವ ಯೋಜನೆ
೬) ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ಎರಡು ಹಾಸ್ಯ ನಾಟಕಗಳ ಪ್ರದರ್ಶನದ ಯೋಜನೆ...
೭) ನಾಟಕ ಪ್ರದರ್ಶನದ ಖರ್ಚು ವೆಚ್ಚಗಳು
೮) ಕಾರ್ಯಕಾರಿ ಜವಾಬ್ದಾರಿಗಳ ಸೂಕ್ತವಾದ ಹಂಚಿಕೆ
೯) ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಬೇಕಾಗುವ ಸಿದ್ಧತೆಗಳು
೧೦) ತುಳು ಬಾಂಧವರಿಗೆ ವಿಮಾ ಯೋಜನೆಯನ್ನು ಒದಗಿಸುವ ಸಲಹೆ
ಕಾಯವೈಖರಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಬಂದಂತ ಎಲ್ಲ ಸಲಹೆಗಳನ್ನು ತುಂಬು ಹೃದಯದಿಂದ ಸ್ವಾಗತಿಸಲಾಯಿತು.
ನಮ ತುಳುವೆರ್ ವತಿಯಿಂದ ಈ ಹಿಂದೆ ಸಾನಿಧ್ಯ ಸ್ಪೆಶಲ್ ನೀಡ್ಸ್ ಸ್ಕೂಲ್ ಮಂಗಳೂರು ಇವರಿಗೆ ಸಹಾಯವನ್ನು ಒದಗಿಸಲಾಗಿತ್ತು. ಅಪಘಾತಕ್ಕೊಳಗಾದ ಮಂಗಳೂರಿನ ರಶೀದಾ ಫಾರುಕ್ ಇವರಿಗೆ ನೆರವನ್ನು ನೀಡಲಾಗಿತ್ತು. ಎರಡುವರೆ ವರ್ಷದ ಅನುಶ್ ಇವರಿಗೂ ಸಹಾಯ ಧನವನ್ನು ನೀಡಲಾಗಿತ್ತು.

ಧನ ಸಂಗ್ರಹಣೆಗಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರ ಎರಡು ನಾಟಕಗಳನ್ನು ಅಕ್ಟೋಬರ್ ಒಂದರಂದು ಪ್ರದಶನಕ್ಕೇರ್ಪಡಿಸುವುದೆಂದು ನಿರ್ಧರಿಸಲಾಯಿತು. ಇದೇ ಸಂದರ್ಭ ದಲ್ಲಿ ಅವರ ನೂತನ ಕಾಸೆಟ್ಟುಗಳನ್ನು ಲೋಕಾರ್ಪಣೆಗೈ ಯುವುದೆಂದೂ ನಿರ್ಧರಿಸ ಲಾಯಿತು.
ಎಲ್ಲರ ಒಮ್ಮತದಿಂದ, ಸಂಗ್ರಹವಾದ ಧನವನ್ನು ಸಾನಿಧ್ಯ ಸ್ಪೆಶಲ್ ನೀಡ್ಸ್ ಸ್ಕೂಲ್ ಮಂಗಳೂರು, ಅರುಣೋದಯ ಸ್ಪೆಶಲ್ ನೀಡ್ಸ್ ಸ್ಕೂಲ್, ಕಾರ್ಕಳ ಮತ್ತು ನಮ ತುಳುವೆರ್ ದತ್ತಿ ನಿಧಿಗೆ ಯು ಏ ಇ ಯಲ್ಲಿರುವ ತುಳುವರ ಸಹಾಯಕ್ಕಾಗಿ ಸಮಾನವಾಗಿ ಹಂಚುವುದೆಂದು ನಿರ್ಧರಿಸಲಾಯಿತು.
ಪೂರ್ವ ನಿಯೋಜಿತ ಸದುದ್ದೇಶಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಯೋಜನೆಯನ್ನು ರೂಪಿಸಿದ್ದಲ್ಲದೆ ಕನಸನ್ನು ನನಸಾಗಿಸಲು ಟೊಂಕ ಕಟ್ಟಿದ ಎಲ್ಲಾ ಸದಸ್ಯರಿಗೆ ನಮ ತುಳುವೆರ್ ಧನ್ಯವಾದ ಸಮರ್ಪಿಸಿತು
ವರದಿಯ ವಿವರಗಳು |
 |
ವರದಿಗಾರರು : ಗೋಪಿಕ ಮಯ್ಯ
ಪ್ರಕಟಿಸಿದ ದಿನಾಂಕ : 2010-03-16
|
|
| Shashi Kumar S, Udupi / Mangalore | 2010-03-20 | | Good thinking,promoting tulu culture for noble cause is really good. Wishing all the best for S.P for taking initiative. But one thing i want to tell you,after some time, nama tuluveru should not be nama billawas tuluveru. Becuase if anyone sees the above photo, there is a lady in the centre, she is billawa & the person sitting left & right are also billawas & people standing behind her also billawas, major people are billawas in this. This is the community where all the people of different castes & religion from tulunadu works together. So, i hope the message is very clear to S.P in this. Best of luck. |
| ವಿಜಯ್ ಸುವರ್ಣ , ಕತಾರ್ | 2010-03-18 | | ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ "ನಮ ತುಳುವೆರ್" ಬಳಗಕ್ಕೆ ಹ್ರತ್ಪೂರ್ವಕ ಅಭಿನಂದನೆಗಳು. . ತುಳು ಸಂಸ್ಕ್ರತಿಯನ್ನು ಉಳಿಸಿಬೆಳೆಸುವ ಉನ್ನತ ಉದ್ದೇಶವನ್ನೇ ಸದುದ್ದೇಶಗಳನ್ನೇ ಮೂಲಮಂತ್ರವನ್ನಾಗಿಸಿಕೊಂಡು ಮೈತಳೆದು ನಿಂತಿರುವ ನಿಮ್ಮ ಪ್ರತಿಯೊಂದು ಉದ್ದೇಶಗಳೂ ಸಫಲತೆಯ ಸನ್ಮಾರ್ಗದಲ್ಲಿ ಸಾಗುವಂತಾಗಲಿ ಎಂಬುದೇ ಸಮಸ್ತ ತುಳುವಿಗರ ಹ್ರತ್ಪೂರ್ವಕವಾದ ಹಾರೈಕೆ. ಹೆಚ್ಚಿನೆಡೆ ಗಳಲ್ಲಿ ನನ್ನ ಫೋಟೋ ಬರಬೇಕು, ನನ್ನ ಹೆಸರು ಬರಬೇಕು,,,,ನಾನೇ ಅಧ್ಯಕ್ಷ ನಾಗಬೇಕು ... ನಾನೇ ಅದಾಗಬೇಕು, ಇದಾಗಬೇಕು..ನನ್ನ ನಾಮಧೆಯವೇ... ನನ್ನ ಭಾವಚಿತ್ರವೇ ಮುಂಚೂಣಿಯಲ್ಲಿ ಇರಬೇಕು..ಎಂದೆಲ್ಲಾ ಕನವರಿಸುತ್ತಿರುವ, ಹಂಬಲಿಸುತ್ತಿರುವ , ಪದಾಧಿಕಾರೀ...ಕಾರ್ಯಕಾರೀ ಸಮಿತಿಗಳಿಂದ ತುಂಬಿರುವ ಸಂಘಟನೆಗಳೇ ತುಂಬಿರುವ ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನೇ ಒಳಗೊಂಡಿರದ "ನಮ ತುಳುವೆರ್" ನಿಜಕ್ಕೂ ಪ್ರಶಂಸನೀಯ ಸಂಸ್ಥೆ. ಸಮಾಜದ ಅಸ್ತಿರತೆಯನ್ನು ಗಮನಿಸಿ, ಅಶಕ್ತರ ಅಶಕ್ತತೆಯನ್ನು ಮನಗಂಡು, ಎಲ್ಲಿ ನಿಜವಾಗಿಯೂ " ಬೇಕು" ... ಆ "ಬೇಕಿ" ಗಾಗಿ ಸ್ಪಂಧಿಸುವ ನಿಮ್ಮ ಉತ್ಕ್ರಷ್ಟ ಯೋಚನೆ, ಯೋಜನೆ ನಿಜಕ್ಕೂ ಫಲದಾಯಕ ನಿಮ್ಮೆಲ್ಲಾ ಯೋಜನೆಗಳೂ ಯೋಚಿಸಿದಂತೆ ಮುನ್ನೆಡೆದು ಸಮಾಜದಲ್ಲಿ ಒಂದು ಅತ್ಯುತ್ಕ್ರಷ್ಟ ಸಂಸ್ಥೆಯಾಗಿ ಮುನ್ನಡೆಯುತ್ತಿರಲಿ ಎಂದು ಮನಃ ಪೂರ್ವಕವಾಗಿ ಹಾರೈಸುತ್ತೇನೆ. |
| akbarmata, ubaar | 2010-03-18 | | tulukootada karyakramolug sonmelu.jaatibheda budud tuluappena marubhumida jokulunamamatha.tulunaad da kastakarpnyog pugel korka. tulu kootog imbukorka |
| M.E.Moolur, UDUPI/DUBAI | 2010-03-16 | | This is a very unique cooperative social service concept where the “Tuluver”, reaching beyond the boundaries of cast, creed and race joins together to serve the less privileged brothers and sisters of Tulunaad. Here the responsibility is not confined to a few office bearers, instead every one among the 51 is leader and every one is the follower as well.
We must appreciate Mr.Shodhan for floating such a great idea and I am sure, this is going to be a very successful organization because of its innovative nature being “ Unity with diversity ”, provided all the members stand united and strive for its causes.- M.E.Moolur. ( Mohd.Ebrahim Moolur)
|
|