ಮು೦ಬೈ: ಶೇ. 80 ನೌಕರಿಗಳನ್ನು ಮರಾಠಿಗರಿಗೆ ಕೊಡುವ೦ತೆ ಕೆನರಾ ಬ್ಯಾಂಕಿಗೆ ಶಿವಸೇನೆ ಒತ್ತಾಯ |
ಪ್ರಕಟಿಸಿದ ದಿನಾಂಕ : 2010-03-17
ಮುಂಬಯಿ, ಮಾ. ೧೬: ಕನಿಷ್ಠ ಶೇ. ೮೦ ನೌಕರಿಗಳನ್ನು ಮರಾಠಿಗರಿಗೆ ಕೊಡುವಂತೆ ಶಿವಸೇನೆ ಕೆನರಾ ಬ್ಯಾಂಕನ್ನು ಆಗ್ರಹಿಸಿದೆ.
ಬ್ಯಾಂಕ್ ೧,೫೦೦ ಗುಮಾಸ್ತ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದ್ದು , ಈ ಪೈಕಿ ಶೇ. ೮೦ ನೌಕರಿಗಳನ್ನು ಮರಾಠಿಗರಿಗೆ ಕೊಡಬೇಕೆಂದು ಶಿವಸೇನೆ ಹೇಳಿದೆ.
ನಾವು ನೇಮಕಾತಿ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಬ್ಯಾಂಕ್ ಶೇ. ೮೦ ನೌಕರಿ ಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಶಿವಸೇನೆಯ ನಾಯಕ ಅನಿಲ್ ದೇಸಾಯಿ ಹೇಳಿದ್ದಾರೆ.
ದೇಸಾಯಿ ಹಾಗೂ ಶಿವಸೇನೆಯ ಹಿರಿಯ ನಾಯಕ ಗಜಾನನ ಕೀರ್ತಿಕರ್ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕರನ್ನು ಭೇಟಿ ಮಾಡಿ ಶೇ. ೮೦ ನೌಕರಿಗಳನ್ನು ಮರಾಠಿಗರಿಗೆ ಕೊಡಲು ಒತ್ತಾ ಯಿಸಿದ್ದಾರೆ.
ಮರಾಠಿಗರಿಗೆ ಪ್ರಾತಿನಿಧ್ಯ ಕೊಡುವುದಾಗಿ ಹಾಗೂ ಬ್ಯಾಂಕಿನ ವಹಿವಾಟಿಗೆ ಮರಾಠಿ ಭಾಷೆಯ ನ್ನು ಬಳಸುವುದಾಗಿ ಬ್ಯಾಂಕ್ ಭರವಸೆಯಿತ್ತಿದೆ ಎಂದು ದೇಸಾಯಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-17
|
|
|