ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್. |
ಪ್ರಕಟಿಸಿದ ದಿನಾಂಕ : 2010-03-19
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಮಾ.19: ನಗರದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ’ಇನ್ ಲ್ಯಾಂಡ್ ಬಿಲ್ಡರ್‍ಸ್’ ಮಂಗಳೂರಿಗೆ ನೀಡುತ್ತಿರುವ ಇನ್ನೊಂದು ಹೆಮ್ಮೆಯ ಕೊಡುಗೆ "ಇನ್ ಲ್ಯಾಂಡ್ ಅರ್ನೆಟ್" ವಾಣಿಜ್ಯ ಸಂಕೀರ್ಣದ ಉದ್ಘಾಟನೆಯು ಇಂದು ಅದ್ದೂರಿಯಾಗಿ ನಡೆಯಿತು.
ನಗರದ ಪ್ರಮುಖ ಪ್ರದೇಶವಾಗಿರುವ ಕೊಡಿಯಾಲ್ ಬೈಲ್ ನ ನವಭಾರತ ವ್ರತ್ತದ ಬಳಿ ಅತ್ಯಂತ ಸುಂದರ ವಿನ್ಯಾಸದೊಂದಿಗೆ ಅಕರ್ಷಕವಾಗಿ ತಲೆಯೆತ್ತಿ ನಿಂತಿರುವ "ಇನ್ ಲ್ಯಾಂಡ್ ಅರ್ನೆಟ್" ಅನ್ನು ಇಂದು ಬೆಳಿಗ್ಗೆ ಯೆನಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ವೈ.ಅಬ್ದುಲ್ ಕುಂಜ್ನಿ ಅವರು ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಖ್ಯಾತ ಕನ್ನಡ ಚಿತ್ರ ನಟ "ದರ್ಶನ್" ಪಾಲ್ಗೊಂಡಿದ್ದರು.
ಗೌರವ ಅತಿಥಿಗಳಾಗಿ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್, ಕೆನಾರ ಚೆಂಬರ್‌ಸ್‌ನ ಮಾಜಿ ಅಧ್ಯಕ್ಷರಾದ ಸುಬ್ಬಯ್ಯ ಶೆಟ್ಟಿ, ಸದಾನಂದ ಶೆಟ್ಟಿ, ಜೋ ಫೆರ್ನಾಂಡಿಸ್, ಮೊಯ್ದಿನ್ ಬಾವ, ಗ್ರೆಗರಿ ಮಥಾಯಿಸ್ ಭಾಗವಹಿಸಿದ್ದರು. ಇನ್ ಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹಮ್ಮದ್, ನಿರ್ದೇಶಕರಾದ ಮೆರಾಜ್ ಯುಸುಫ್ ಹಾಗೂ ವಹಾಜ್ ಯುಸುಫ್ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇನ್ ಲ್ಯಾಂಡ್ ಬಿಲ್ಡರ್‍ಸ್ ಮತ್ತು ಇನ್ ಫ್ರಾಸ್ಟ್ರಕ್ಚರ್‌ನ ಕಾರ್ಪೊರೆಟ್ ಕಛೇರಿಯನ್ನು ಇನ್ ಲ್ಯಾಂಡ್ ಅರ್ನೆಟ್‌ನ ಮೂರನೇ ಮಹಡಿಗೆ ಸ್ಥಳಾಂತರಿಸಲಾಯಿತು. ಸ್ಥಳಾಂತರಿತ ಕಛೇರಿಯನ್ನು ವೈ.ಅಬ್ದುಲ್ ಕುಂಜ್ನಿ ಅವರು ಉದ್ಘಾಟಿಸಿದರು.
ಅತ್ಯಂತ ವಿಶಾಲ ಸ್ಥಳಾವಕಾಶವನ್ನು ಹೊಂದಿರುವ ನೂತನ ಕಛೇರಿಯನ್ನು ಅತ್ಯಾಧುನಿಕ ಸವಲತ್ತುಗಳು ಹಾಗೂ ವಿನ್ಯಾಸದೊಂದಿಗೆ ಸಿದ್ದಗೊಳಿಸಲಾಗಿದೆ. ಅರ್ಕಿಟೆಕ್ಟ್ಸ್, ಎಂಜಿನಿಯರ್, ಗುತ್ತಿಗೆದಾರರು ಸೇರಿದಂತೆ ನಿರ್ಮಾಣ ಕ್ಷೇತ್ರದ ವಿವಿಧ ವಿಭಾಗಗಳು ಇಲ್ಲಿ ಒಂದೇ ಸೂರಿನಡಿಯಲ್ಲಿ ಕಾರ್ಯಚರಿಸುತ್ತವೆ.
ನಗರಕ್ಕೊಂದು ಮೆರುಗು: ಸುಂದರ ಹಾಗೂ ವಿನ್ಯಾಸಗಳ ನಿರ್ಮಾಣಗಳಿಗೆ ಗುರುತಿಸಲ್ಪಟ್ಟಿರುವ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಮತ್ತೊಂದು ಆಕರ್ಷಕ ವಾಣಿಜ್ಯ ಸಂಕೀರ್ಣ ಇನ್ ಲ್ಯಾಂಡ್ ಅರ್ನೆಟ್ ನಗರದ ಅತ್ಯಂತ ಸುಂದರ ಕಟ್ಟಡಗಳಲ್ಲಿ ಒಂದಾಗಿ ಈಗಾಗಲೇ ಜನಾಕರ್ಷಣೆಯನ್ನು ಪಡೆದಿದೆ. ಸೆಮಿ ವ್ರತ್ತ ವಿನ್ಯಾಸದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಕರ್ಷಕ ಶೈಲಿಯಲ್ಲಿ ಇನ್ ಲ್ಯಾಂಡ್ ಅರ್ನೆಟ್ ನಿರ್ಮಾಣಗೊಂಡಿದೆ.
ನಿರ್ಮಾಣದಲ್ಲಿರುವ ಯೋಜನೆಗಳು: ನಗರದ ವಿಮಾನ ನಿಲ್ದಾಣ ರಸ್ತೆಯ ಮೇರಿಹಿಲ್ ನಲ್ಲಿ ನಗರದಲ್ಲೇ ಅತೀ ಎತ್ತರದ ವಸತಿ ಸಮುಚ್ಚಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ’ಇನ್ ಲ್ಯಾಂಡ್ ವಿಂಡ್ಸರ್’, ಕುಲಶೇಖರ್ ಸೆಕ್ರೇಡ್ ಹಾರ್ಟ್ ಶಾಲೆಯ ಮುಂಬಾಗದಲ್ಲಿರುವ ’ಇನ್ ಲ್ಯಾಂಡ್ ಪ್ರಿಸ್ಟೈನ್’ , ಕೊಂಚಾಡಿಯ ನಾಲ್ಕನೇ ಮೈಲ್ ಬಳಿಯ ’ಇನ್ ಲ್ಯಾಂಡ್ ಸೆಲ್ಯೂಟ್’, ಕಂಕನಾಡಿ ವಾಣಿಜ್ಯ ಸಂಕೀರ್ಣ ’ ಇನ್ ಲ್ಯಾಂಡ್ ಗೆಲೋರ್’ , ನಿರ್ಮಾಣ ಹಂತದಲ್ಲಿರುವ ಸಂಸ್ಥೆಯ ಪ್ರತಿಷ್ಠಿತ ಯೋಜನೆಗಳಾಗಿವೆ.
ಉದ್ದೇಶಿತ ಯೋಜನೆಗಳು: ಬೆಂಗಳೂರಿನ ಸಹಕಾರ್ ನಗರ ಕೊಡಗೆಹಳ್ಳಿಯಲ್ಲಿ ’ಇನ್ ಲ್ಯಾಂಡ್ ಎಲಾಂಜ’, ಮಂಗಳೂರಿನ ಬಲ್ಲಾಳ್ ಭಾಗ್ ನಲ್ಲಿ ’ಇನ್ ಲ್ಯಾಂಡ್ ಎಕ್ಲಾನ್’ ಹಾಗೂ ಮಠದಕಣಿಯಲ್ಲಿ ’ಇನ್ ಲ್ಯಾಂಡ್ ಎಸ್ಟೆನ್ಸಿಯಾ’ ಸಂಸ್ಥೆಯ ಉದ್ದೇಶಿತ ಯೋಜನೆಗಳಾಗಿವೆ.
ಉತ್ಕ್ರಷ್ಟತಾ ಪರಂಪರೆ: ಇನ್ ಲ್ಯಾಂಡ್ ಬ್ಯಾನರ್ ನ ಪ್ರತಿಯೊಂದು ಪ್ರೊಜೆಕ್ಟ್‍ಗಳು ವ್ಯೂಹಾತ್ಮಕ ಯೋಜನೆ ಹಾಗೂ ಅತ್ಯಾಧುನಿಕ ತಂತ್ರಜ್ನಾನಗಳನ್ನು ಬಳಸಿ ವಿವಿಧ ತಜ್ನರುಗಳ ತಜ್ನತೆಯನ್ನು ಧಾರೆಯೆರೆದು ನಿರ್ಮಾಣಗೊಳ್ಳುತ್ತಿವೆ. ಮನೆಗಳ, ವಾಣಿಜ್ಯ ಸಂಕೀರ್ಣಗಳ ಪ್ರತಿಯೊಂದು ಚದರ ಇಂಚು ಕೂಡಾ ಇನ್ ಲ್ಯಾಂಡ್ ಸಂಸ್ಥೆ ಕಳೆದ ೨೪ ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಉತ್ಕ್ರಷ್ಟತೆಯ ಹಾದಿಯಲ್ಲೇ ನಿರ್ಮಾಣಗೊಳ್ಳುತಿವೆ. ಈ ಉತ್ಕ್ರಷ್ಟತಾ ಪರಂಪರೆ ಇಂದು ಸಂಸ್ಥೆಗೆ ದೇಶದಲ್ಲಿ ಒಂದು ಅನನ್ಯತೆಯನ್ನು ತಂದುಕೊಟ್ಟಿದೆ ಎನ್ನುತ್ತಾರೆ ಇನ್ ಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹಮ್ಮದ್.
ಸಂಸ್ಥೆ ಈಗಾಗಲೇ ಮಂಗಳೂರು, ಬೆಂಗಳೂರಿನಲ್ಲಿ ಸುಂದರ, ಅಕರ್ಷಕ, ಉತ್ತಮ ಗುಣಮಟ್ಟದ ಹಲವಾರು ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದೆ.
ವಿವರಗಳಿಗೆ ; 9972089099, 9686599099 ದೂರವಾಣಿಯನ್ನು ಸಂಪರ್ಕಿಸ ಬಹುದಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-19
|
|
|