ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ |
ಪ್ರಕಟಿಸಿದ ದಿನಾಂಕ : 2010-03-20
ಕುಂದಾಪುರ, ಮಾ. ೧೯: ಲೋಕಸಭಾ ಚುನಾವಣೆಯಲ್ಲಿ ತನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿ ದ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ನೀಡುವುದಾಗಿ ಸಂಸದ ಬಿ.ವೈ. ರಾಘ ವೇಂದ್ರ ಹೇಳಿದ್ದಾರೆ.
ಅವರು ಮರವಂತೆಯ ಶ್ರೀ ರಾಮ ಭಜನಾ ಮಂದಿರದ ಭಜನಾ ಸಪ್ತಾಹ ಸಂದರ್ಭ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕೊಡೇರಿ ಮೀನುಗಾರಿಕಾ ಬಂದರಿಗೆ ಈಗಾಗಲೇ ಬಜೆಟ್‌ನಲ್ಲಿ 10 ಕೋ.ರೂ. ಮೀಸಲಿರಿಸಲಾ ಗಿದೆ.
ಶಿರೂರು ಬಂದರು ನಿರ್ಮಾಣಕ್ಕೆ ನಬಾರ್ಡ್‌ನಿಂದ 17 ಕೋ. ರೂ. ಬಿಡುಗಡೆಗೆ ಪ್ರಾಸ್ತಾವನೆ ಸಲ್ಲಿಸಲಾಗಿದೆ.
ಗಂಗೊಳ್ಳಿ ಬಂದರಿನ ಜಟ್ಟಿ ಮತ್ತು ಸಮುದ್ರ ತಡೆಗೋಡೆಗೆ 10 ಕೋ.ರೂ. ತೆಗೆದಿ ರಿಸಲಾಗಿದೆ.
ಸೌಪರ್ಣಿಕಾ ನದಿಗೆ ಆಲೂರು ಬಳಿ 60 ಕೋ.ರೂ. ವೆಚ್ಚದಲ್ಲಿ ಬ್ಯಾರೇಚ್ ಕಂ ಸೇತುವೆ ನಿರ್ಮಾಣ ಮಾಡಿ 40 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿಗೆ ಮಂಜೂರಾತಿ ದೊರಕಿದೆ.
ಮರವಂತೆಯ ಜನರ ಬೇಡಿಕೆಯಾದ ಔಟರ್ ಹಾರ್ಬರ್ ಸಮೀಕ್ಷೆಗೆ ಹಣ ನೀಡಲಾಗಿದೆ ಎಂದು ಅವರು ಹೇಳಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20
|
|
|