ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ |
ಪ್ರಕಟಿಸಿದ ದಿನಾಂಕ : 2010-03-20
ಭುವನೇಶ್ವರ, ಶನಿವಾರ, 20 ಮಾರ್ಚ್ :
ನಿಷೇಧವನ್ನು ಉಲ್ಲಂಘಿಸಿ ಹಿಂಸಾಚಾರ ಪೀಡಿತ ಕಂಧಮಾಲ್ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಅವರ ಸಹಚರರೊಂದಿಗೆ ಶುಕ್ರ ವಾರ ರಾತ್ರಿ ಒರಿಸ್ಸಾ ಪೊಲೀಸರು ಬಂಧಿಸಿದ್ದಾರೆ.
ಕಂಧಮಾಲ್ ಜಿಲ್ಲೆಗೆ ಪ್ರವೇಶಿಸದಂತೆ ತೊಗಾಡಿಯಾ ಮೇಲಿದ್ದ ನಿಷೇಧದ ಹೊರತಾಗಿಯೂ ಅಕ್ರಮವಾಗಿ ನುಗ್ಗಲೆತ್ನಿಸಿದ ಆರೋಪದ ಮೇಲೆ ಸಿಆರ್‌ಪಿಸಿ ಸೆಕ್ಷನ್ 151ರ ಅಡಿಯಲ್ಲಿ ಬಂಧಿ ಸಲಾಗಿದೆ. ಅವರು ಕಂಧಮಾಲ್ ಸಮೀಪದ ಬೌದ್ ಜಿಲ್ಲೆಯ ಚಾರಿಚಚೌಕ್ ಎಂಬಲ್ಲಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಂಧಮಾಲ್ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ ನಂತರ ತೊಗಾಡಿಯಾ ಮತ್ತಿತರರು ಚಾರಿಚೌಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಇದೀಗ ಬಂಧಿತ ವಿಎಚ್‌ಪಿ ನಾಯಕ ರನ್ನು ಚೌರಿಚೌಕ್‌ನಲ್ಲಿನ ಪೊಲೀಸ್ ಆಧೀನದಲ್ಲಿರುವ ಅರಣ್ಯ ಪರಿಶೀಲನಾ ಬಂಗ್ಲೆಯಲ್ಲಿಡಲಾ ಗಿದೆ.
2008ರ ಆಗಸ್ಟ್‌ನಲ್ಲಿ ವಿಎಚ್‌ಪಿ ನಾಯಕ ಲಕ್ಷ್ಮಣಾನಂದ ಸರಸ್ವತಿಯವರ ಹತ್ಯೆಯ ಹಿನ್ನೆಲೆ ಯಲ್ಲಿ ಭಾರೀ ಕೋಮುಗಲಭೆಗೆ ಕಾರಣವಾಗಿದ್ದ ಜಿಲ್ಲೆಗೆ ತಾನು ಒರಿಸ್ಸಾ ನಿಷೇಧದ ಹೊರತಾಗಿ ಯೂ ಪ್ರವೇಶಿಸುತ್ತೇನೆ ಎಂದು ತೊಗಾಡಿಯಾ ಪ್ರಕಟಿಸಿದ ನಂತರ ಜಿಲ್ಲಾ ಪ್ರವೇಶ ದ್ವಾರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ಹಾಗೂ ಮ್ಯಾಜಿಸ್ಟ್ರೇಟರನ್ನು ನೇಮಿಸಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು.
ತನ್ನ ಮೇಲೆ ಹೇರಲಾಗಿರುವ ನಿಷೇಧ ಕಾನೂನು ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂ ದು ಬಣ್ಣಿಸಿರುವ ತೊಗಾಡಿಯಾ, ಕೋಮುಗಲಭೆ ಪೀಡಿತ ಜಿಲ್ಲೆಗೆ ಎರಡು ದಿನಗಳ ಪ್ರವಾಸಕ್ಕೆಂ ದು ಯೂರೋಪಿಯನ್ ನಿಯೋಗಕ್ಕೆ ಒಪ್ಪಿಗೆ ನೀಡಲಾಗಿದ್ದರೂ, ನನ್ನ ಮೇಲೆ ಮಾತ್ರ ನಿರ್ಬಂಧ ಹೇರಿರುವುದು ಸಮರ್ಥನೀಯವಲ್ಲ ಎಂದಿದ್ದಾರೆ.
2008ರ ಆಗಸ್ಟ್ 23ರಂದು ನಡೆದ ಸರಸ್ವತಿಯವರ ಹತ್ಯೆಯ ನಂತರ ಜಿಲ್ಲೆಯಲ್ಲಿ ನಡೆದ ತಿಂಗಳಿಗೂ ಹೆಚ್ಚು ಕಾಲದ ಕೋಮುಗಲಭೆಯಲ್ಲಿ ಕನಿಷ್ಠ 38 ಮಂದಿ ಕಗ್ಗೊಲೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ಚರ್ಚ್ ಮುಖ್ಯಸ್ಥರಿಗೆ ಕಂಧಮಾಲ್ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದರೂ, ಹಿಂದೂ ಸಂಘಟನೆಗಳ ಮುಖ್ಯಸ್ಥರಿಗೆ ಯಾಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ತೊಗಾಡಿಯಾ ಪ್ರಶ್ನಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20
|
|
| althaf, KAUP | 2010-03-21 | | 3 kaasina togadiya. |
| hassanmukka, mangalore/ksa | 2010-03-20 | | PROVIDE HIM WITH GOOD STAR HOTEL FOOD,BOTTLED WATER,AIR CONDITIONED ROOM LCD TV,ETC,ETC.. |
|