ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ. |
ಪ್ರಕಟಿಸಿದ ದಿನಾಂಕ : 2010-03-20
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಮಾ.20: ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆ ರಾಜ್ಯ ವಿಧಾನ ಸಭೆಯಲ್ಲಿ ಅಂಗೀಕರಿಸ್ಪಟ್ಟಿರುವುದಕ್ಕೆ ಮಂಗಳೂರಿನ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಇಂದು ನಗರದ ಮಂಗಳಾದೇವಿ ದೇವಸ್ಥಾನದ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
ವಿಶ್ವ ಹಿಂದ್ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಕೆ.ಕ್ರಷ್ಣಮೂರ್ತಿ ಅವರು ಈ ಸಂಧರ್ಭದಲ್ಲಿ ಮಾತನಾಡಿ, ಗೋಹತ್ಯೆ ನಿಷೇದ ಕಾನೂನು ಜಾರಿಯಾಗುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ವಿವಿಧ ಹಿಂದೂ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದಾರೆ.
ಇದೀಗ ಬಜರಂಗದಳ, ವಿಶ್ವ ಹಿಂದ್ ಪರಿಷತ್ ಮೊದಲಾದ ಸಂಘಟನೆಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಅದೇ ರೀತಿ ವಿಧಾನ ಪರಿಷತ್ ನಲ್ಲಿ ಕೂಡ ಈ ವಿಧೇಯಕದ ಪರವಾಗಿ ಮತ ಚಲಾಯಿಸಿ ಅವಿರೋಧಕವಾಗಿ ಅಂಗೀಕರಿಸುವ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಸ್ಪಂದಿಸಬೇಕೆಂದು ವಿನಂತಿಸಿದರು.
ನಮ್ಮ ರಾಜ್ಯ ಪಾಲರು ಕೂಡ ಈ ವಿಧೇಯಕಕ್ಕೆ ಸಹಿ ಹಾಕಿ ತಕ್ಷಣ ಕಾನೂನು ಜಾರಿಗೆ ತರಬೇಕೆಂದು ಅವರು ಅಗ್ರಹಪಡಿಸಿದರು.
ಬಜರಂಗದಳದ ನಗರಧ್ಯಾಕ್ಷ ರಾಘವೇಂದ್ರ, ಗೋಸಂರಕ್ಷಣಾ ಸಮಿತಿಯ ಸಂಚಾಲಕ ವಿನಯ್ ಎಲ್.ಶೆಟ್ಟಿ, ಮನಪಾ ಸದಸ್ಯ ದಿವಾಕರ್, ಶರಣ್ ಪಂಪ್ ವೆಲ್, ಗೋಪಾಲ ಕುತ್ತಾರ್, ಹರೀಶ್ ಅಮ್ಟಾಡಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಶಿವನಂದ ಮೆಂಡನ್ ಸ್ವಾಗತಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-20
|
|
| Ibrahim Hussain, Udipi, Karnataka | 2010-03-21 | | ಕಳೆದ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷವು ರಾಜ್ಯವನ್ನು ಗುಜರಾತ್ ಮಾದರಿಯಾಗಿ ಮಾಡುತ್ತೇವೆಂದು ಪ್ರಚಾರ ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರು ಒಂದೊಂದಾಗಿ ಮರೆಯಲ್ಲಿರಿಸಿದ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ರಾಜ್ಯವು ಕಳೆದ 60 ವರ್ಷಗಳಲ್ಲಿ ಮಾಡದಷ್ಟು ಸಾಲಮಾಡಿ ಪ್ರತೀ ಪ್ರಜೆಯನ್ನು ಸಾಲಗಾರರನ್ನಾಗಿ ಮಾಡಿದ ಹೆಗ್ಗಳಿಕೆ ಇವರಿಗೆ. ಕಾನೂನು ಸುವ್ಯವಸ್ತೆ ಸಂಪೊರ್ಣ ಹದಕೆಟ್ಟಿದ್ದು, ಎಂದು ಕಾಣದಷ್ಟು ಮತೀಯ ಗಲಭೆ ಗಳು ಈ ರಾಜ್ಯವು ಬಿಜೆಪಿ ಆಡಳಿತದಲ್ಲಿ ಕಂಡಿರುತ್ತದೆ. ಗೋಹತ್ಯೆ ನಿಷೇದಕ್ಕೆ ಅಸ್ತು ನೀಡುರುವೂದಕ್ಕೆ ಆತಂಕವನ್ನು ಯಾರೂ ಪಡುವುದಿಲ್ಲ. ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಇಂತಹ ಜನವಿರೋಧಿ ಮಸೂದೆಯನ್ನು ಮಂಡಿಸಿರುವುದು ಹೊಸತೇನಲ್ಲ. ಮತ್ತೆ ಗೋಮಾಂಸ ತಿನ್ನದಿದ್ದಲ್ಲಿ ಯಾರು ಸಾಯುದಿಲ್ಲ. ಇದರಿಂದ ಇತರ ಹೈನುಗಾರಿಕೆಗೆ ಲಾಭವಲ್ಲದೆ ನಷ್ಟವಿಲ್ಲ. ಮುಂದಿನ ಚುನಾವಣೆಯಲ್ಲಿ ಕ್ರಷಿಕರು ಮತ್ತು ಮಾಧ್ಯಮ ವರ್ಗದವರು ಇವರಿಗೆ ಸರಿಯಾದ ಉತ್ತರ ನೀಡಲಿದ್ದಾರೆ. ಅಂತು ಈ ಎಲ್ಲಾ ಬೆಳವಣಿಗೆಗಳ ಕಾರಣ ಪುರುಷನಾದ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯನ್ನು ಶ್ಲಾಘಿಸಬೇಕು, ಏಕೆಂದರೆ ಯೆಡ್ಡಿಯನ್ನು ಕೈಹಿಡಿದು ಅಧಿಕಾರದಲ್ಲಿ ಕುಳ್ಳಿರಿಸಿದ ಮಹಾನುಭಾವ. ಕಾದು ನೋಡುವ ಸಮಯವು ಒದಗಿಬಂದಿದೆ. |
| salam mangalore, kuwait | 2010-03-21 | | ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆ ರಾಜ್ಯ ವಿಧಾನ ಸಭೆಯಲ್ಲಿ ಅನ್ಗಿಕರಿಸ್ಪತ್ತಿರುವುದು ತುಂಬಾ ನಾಚಿಕೆ ಗೇಡಿನ ವಿಷಯ ಪಕ್ಕದ ತಲಪಾಡಿ ದಾಟಿದರೆ ಕಾಣ ಸಿಗುವ ಊರೇ ಕೇರಳ ಅಲ್ಲಿ ಬೇಕಾದಸ್ತು ದನದ ಮಾಂಸ ಸಿಗುತ್ತದೆ. ಮುಂದೆ ಒಂದು ದಿನ ತಲಪಾಡಿ ಸುತ್ತ ಮುತ್ತ ಹೋಟೆಲ್ ಗಳಲ್ಲಿ ದನದ ಮಾಂಸದ ಭರ್ಜರಿ ಮಾರಾಟ ನಮಗೆ ಕಾಣ ಬಹುದು. ಗೋ ಮಾಂಸ ಹೊಟ್ಟೆಯಲ್ಲಿ ಇದ್ದರೆ ಅದನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ ಅಲ್ವಾ ಚಡ್ಡಿಗಳೇ |
| falhl, mangalore | 2010-03-21 | | Maargada badiyalli sattu biddaru adannu kondu hogi hoolada evaru go hathya niseda madidare kushi paduva karanavadaru enu?.go annu pooje maduvavanu adakke endi aki maneyalliye pooje madutha erbeku.adannu elleigo bittu snana madisada evaru santhosapaduva karanavenu?.thumba haloo kottre kelavaru pooje madthare.haloo kodudu kadime madidare adannu neglet madthare.edu evarige agoo plisarige duddu madudakke aithu. |
| saraf, mangalore | 2010-03-21 | | this is very good law about gohatya.everybody must follow this rules.who is thinking for cow is god he is must be keep one cow and pray.when going to age he is not put food that. |
| lk, abu dhabi | 2010-03-20 | | this is very bad iam aslo hindu but i am not agree this law any alternate way need for very old caw and some time fire catch or rain time flod coming tha time cow death govt take any acton ? pls roop used for cow some tite this roop should be cut and save the cow use roope midel use one rupper pies this ruber pise sume kg load should be brocken and old or health problem caw what will do?pls |
| a,j nitte, doha qatar | 2010-03-20 | | innu mele beef price thumbaa kammi aaga bahudh |
|