ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ |
ಪ್ರಕಟಿಸಿದ ದಿನಾಂಕ : 2010-03-21
ಬೆಂಗಳೂರು, ಮಾ.೨೦: ಕೆಲವು ವರ್ಷಗಳಿಂದ ಬೆಂಗಳೂರು ನಗರಕ್ಕೆ ಗ್ರಹಣ ಹಿಡಿದಿದ್ದು, ಇದ ರಿಂದ ನಗರವನ್ನು ಮುಕ್ತಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ವಿದೇಶಾಂಗ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿದ್ದ ನಗರವಾ ಗಿತ್ತು. ನಗರದ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸರಕಾರ ಇದ್ದದ್ದು, ಜೊತೆಗೆ ವಿದೇಶಿ ಹಾಗೂ ಸ್ವದೇಶಿ ಬಂಡವಾಳವನ್ನು ಆಕರ್ಷಿಸುವಂತಿದ್ದದ್ದೆ ಇದಕ್ಕೆ ಮೂಲ ಕಾರಣ ಎಂದು ನುಡಿದ ರು.
ದುರದೃಷ್ಟವಶಾತ್ ಕೆಲವು ವರ್ಷಗಳಿಂದ ನಗರಕ್ಕೆ ಒಂದು ರೀತಿಯ ಗ್ರಹಣ ಹಿಡಿದಿಯೋ ಏನೊ ಎಂಬ ಅನುಮಾನ ಕರ್ನಾಟಕ, ದೇಶ ಮಾತ್ರವಲ್ಲ ವಿದೇಶಗಳ ಜನತೆಯಲ್ಲೂ ಕಾಡುತ್ತಿದೆ. ಇದು ನನ್ನ ದೃಷ್ಟಿಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಬೆಳವಣಿಗೆ ಏಕೆ ಆಯಿತು, ಇದಕ್ಕೆ ಕಾರಣ ಯಾರು ಎಂಬುದರ ಕುರಿತು ವಿಶ್ಲೇಷಣೆ ಮಾಡುವು ದಕ್ಕಿಂತ, ಇದರಿಂದ ಮುಕ್ತಗೊಳಿಸ ಬೇಕಿದೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿ ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಮೀಪಿಸುತ್ತಿದ್ದು, ನಗರವ ನ್ನು ಗ್ರಹಣ ಮುಕ್ತಗೊಳಿಸಲು ಅವಕಾಶ ಬಂದಿದೆ ಎಂದು ಕೃಷ್ಣ ಹೇಳಿದರು.
ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ರಾಜ್ಯ ಬಿಜೆಪಿ ಸರಕಾರ ಹುನ್ನಾರ ನಡೆಸಿತು. ಇದು ಜನತಂತ್ರ ವ್ಯವಸ್ಥೆಗೆ ಶೋಭೆ ತರುವಂತದಲ್ಲ. ಹಿಂದಿನ ಪಾಲಿಕೆ ಮೇಯರ್‌ಗಳು ಕೋರ್ಟ್ ಮೆಟ್ಟಿಲೇರಿ ಚುನಾವಣೆ ಬರಲು ಕಾರಣರಾದರು. ಇವೆಲ್ಲವೂ ನಗರದ ನಾಗರಿಕರ ಗಮನಕ್ಕೆ ಬಂದಿದ್ದು, ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ನುಡಿದರು.
ನಾಗರಿಕರು ನಗರದ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ನಗರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಕಾಂಗ್ರೆಸ್‌ಗೆ ಮತ ಚಲಾಯಿಸಬೇಕೊ ಅಥವಾ ನಾಗರಿಕರ ಸಮಸ್ಯೆಗಳಿಗೆ ಸ್ಪಂಧಿಸದೆ ನಿರ್ಲಕ್ಷ ವಹಿಸಿರುವ ಆಡಳಿತಾರೂಢ ಬಿಜೆಪಿಗೆ ಮತ ಚಲಾಯಿಸಬೇಕೊ ಎಂಬುದರ ಕುರಿತು ಆಲೋಚನೆ ಮಾಡಬೇಕು. ನಂತರ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸ ಬೇಕು ಎಂದು ಕೃಷ್ಣ ಮನವಿ ಮಾಡಿದರು.
ಕೇಂದ್ರದ ನರ್ಮ್ ಯೋಜನೆಯ ಹಣವನ್ನು ಬಳಸಿಕೊಂಡಿಲ್ಲ: ಕೇಂದ್ರ ಸರಕಾರ ನಗರದ ಸಮಗ್ರ ಅಭಿವೃದ್ಧಿಗಾಗಿ ನರ್ಮ್ ಯೋಜನೆಯಡಿ ಸಾವಿರಾರು ಕೋಟಿ ರೂ. ಹಣ ಎಲ್ಲ ರಾಜ್ಯಗ ಳಿಗೂ ಬಿಡುಗಡೆ ಮಾಡುತ್ತದೆ. ಈ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ರಾಜ್ಯಗಳ ಲ್ಲಿ ಕರ್ನಾಟಕವೂ ಸೇರಿದೆ ಎಂದು ಕೃಷ್ಣ ದೂರಿದರು.
೧೯೯೯ರಿಂದ ೨೦೦೪ನೆ ಸಾಲಿನವರೆಗೆ ನಗರದಲ್ಲಿ ೨೫ ಮೇಲ್‌ಸೇತುವೆಗಳ ಕಾಮಗಾರಿಯನ್ನು ಪ್ರಾರಂಭಿಸ ಲಾಗಿತ್ತು. ಇದರಲ್ಲಿ ಕೆಲವು ಪೂರ್ಣಗೊಂಡಿದ್ದು, ಕೆಲವು ಮೇಲ್‌ಸೇತುವೆ ಕಾಮಗಾರಿ ಗಳು ಕುಂಟುತ್ತಾ ಸಾಗಿದೆ. ಈ ಮೇಲ್‌ಸೇತುವೆಗಳಿಗೆ ದೃಷ್ಟಿ ತೆಗೆಯು ವಂತೆ ಈಗಿನ ಸರಕಾರ ಮ್ಯಾಜಿಕ್ ಬಾಕ್ಸ್‌ಗಳನ್ನು ನಿರ್ಮಾಣ ಮಾಡಿವೆ. ಈ ಮ್ಯಾಜಿಕ್ ಬಾಕ್ಸ್‌ಗಳ ನಿರ್ಮಾಣಕ್ಕಾಗಿ ಸುಂದರವಾದ ರಸ್ತೆಗಳನ್ನು ಕುರೂಪ ಗೊಳಿಸಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರಕಾರ ಕೈಗೊಂಡಿರುವ ಇಂತಹ ಕಾರ್ಯ ಗಳನ್ನು ನೋಡಿದರೆ ಪಶ್ಚಾತಾಪವಾಗುತ್ತದೆ ಎಂದು ಕೃಷ್ಣ ನುಡಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೆ. ಇದನ್ನು ನಗರದ ನಾಗರಿಕರು ಮರೆಯಬಾರದು. ನಗರದ ಹಿತದೃಷ್ಟಿಯಿಂದ ಯಾವ ಪಕ್ಷ ಮತಚಲಾಯಿಸಿದರೆ ಒಳಿತು ಎಂಬುದನ್ನು ಮನಗಾಣಬೇಕು ಎಂದು ಕೃಷ್ಣ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖಂಡ ಎಚ್.ಎಂ.ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21
|
|
| Muhammad, Udupi | 2010-03-21 | | S. M krishan is also one of the big chaddi like P.V Narasimha Rao be aware about him |
|