ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ |
ಪ್ರಕಟಿಸಿದ ದಿನಾಂಕ : 2010-03-22
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯು ತನ್ನ ವಿಶೇಷ ಮಹಾಸಭೆ ಮತ್ತು ಸಮಿತಿಯ ಮಹಿಳಾ ವಿಭಾಗವು ಅರಸಿನ ಕುಂಕುಮ ಕಾರ್ಯಕ್ರಮವನ್ನು ಇಂದಿಲ್ಲಿ (೨೧.ಮಾರ್ಚ್.೨೦೧೦) ಭಾನುವಾರ ಅಪರಾಹ್ನ ಸಯಾನ್ ಪೂರ್ವದ ಶ್ರೀ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಆಯೋಜಿಸಿತ್ತು.
ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿದ ಸಭೆಯಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಭವನ ನಿರ್ಮಾಣ ಮತ್ತು ನಿಧಿಸಂಗ್ರಹ, ಮಹಿಳಾ ವಿಭಾಗದ ಶ್ರೇಯೋಭಿವೃದ್ಧಿ ಮತ್ತು ಯುವ ವಿಭಾಗದ ಆಸ್ತಿತ್ವ, ಸೌಜನ್ಯ ಸ್ಮರಣ ಸಂಚಿಕೆ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಬಗ್ಗೆ ವಿಚಾರ-ವಿನಿಮಯ ಚರ್ಚೆಗಳು ನಡೆದವು.
ಸ್ವಸಮಾಜದ ಹಿರಿಮೆ ಎಲ್ಲರಲ್ಲೂ ಸೃಷ್ಠಿಯಾಗಬೇಕು. ನಮ್ಮ ಸಮಾಜದ ಪುಷ್ಫ ಪರಿಮಳ ವಿಶ್ವಕ್ಕೆ ಪಸರಿಸುವ ಕಾಲ ಕೂಡಿ ಬಂದಿದ್ದು, ಸದ್ಯ ಪಶ್ಚಿಮ ಮತ್ತು ದಕ್ಷಿಣ ವಲಯಗಳ ಪ್ರಾದೇಶಿಕ ಸಮಿತಿಗಳನ್ನು ರಚಿಸಲಿದ್ದೇವೆ. ಈ ಮೂಲಕ ಸ್ರ್ತೀ ಶಕ್ತಿ ಹಾಗೂ ಯುವಜನ ಶಕ್ತಿ ಸಮಾಜ ಸಂಘಟನೆಗೆ ಬಲ ತುಂಬಲಿದೆ. ಅಂತೆಯೇ ಶಿಕ್ಷಣ, ವ್ಯಾಪಾರ ಮತ್ತು ವೃತ್ತಿಗಳಿಗೂ ಸ್ಪಂದಿಸಿ ಸ್ವಸಮಾಜದ ಮೋಹಕ್ಕೆ ಬಲ ತುಂಬಲಿದೆ. ಯುವಜನತೆಯೇ ಸಂಸ್ಥೆಯ ಆಧಾರಸ್ತಂಭವಾಗಿದ್ದು ಹಿರಿಯರ ಆಶೀರ್ವಾಚನ ಮಾರ್ಗದರ್ಶನದೊಂದಿಗೆ ಭಂಡಾರಿ ಸಮಾಜ ಭವನದ ಋಣ ಶೀಘ್ರವೇ ಸಂಪೂರ್ಣವಾಗಲಿದೆ ಎಂದು ಅಧ್ಯಕ್ಷ ಬಾಲಕೃಷ್ಣ ಭಂಡಾರಿ ತಿಳಿಸಿದರು.
ವ್ಯಕ್ತಿಯ ಮನಸ್ಸು ಸ್ಥಿತಿ ಚಲನವಲನದಿಂದ ಪೂರ್ಣವಾಗುತ್ತದೆ. ಆದುದರಿಂದ ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ಕಾಸುಕ್ಕಿಂತಲೂ ಸ್ಥಿರ ಮನಸ್ಸು ಅತ್ಯಗತ್ಯವಾಗಿದೆ. ನಾವು ಬರೇ ವಾರ್ಷಿಕೋತ್ಸವಗಳ ಮೂಲಕ ಒಟ್ಟಾಗುವುದು ಸರಿಯಲ್ಲ. ಭವಿಷ್ಯದಲ್ಲಿ ವಾರ್ಷಿಕ ಮಹೋತ್ಸವಕ್ಕಿಂತ ವಾರದ ಉತ್ಸವ ಆಚರಿಸಿ ಸಮಾಜವನ್ನು ಕಟ್ಟಿ ಬೆಳೆಸುವ ಅಗತ್ಯವಿದೆ. ಹಿಂದಿನ ಕಾಲದಲ್ಲಿ ಜೊತೆಗೂಡಲು ಅವಕಾಶಗಳ ಅನಿವಾರ್ಯತೆಯಿತ್ತು. ಆದರೆ ಇಂದು ಮನೆಗಳ ಅಂತಸ್ತುಗಳಾಗಿ ಮನಗಳ ದುಸ್ಥಿತಿ ಸೃಷ್ಠಿಯಾಗಿ ಸಾಂಘಿಕ ಬಾಳಿಗೆ ಅವಕಾಶಗಳು ಇಲ್ಲವಾಗಿದೆ. ಭಂಡಾರಿ ಸಮಾಜದ ಜನತೆ ಒಗ್ಗೂಡಿ ನಮ್ಮ ಸಮಾಜದ ಪ್ರಗತಿಗಾಗಿ ಅಳಿಲು ಸೇವೆ ಸಲ್ಲಿಸಿ ಧನ್ಯರೆಣಿಸುವುದು ಅತ್ಯವಶ್ಯವಾಗಿದೆ ಎಂದು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ ತಿಳಿಸಿದರು. ಬಳಿಕ ಬಹುತೇಕ ಪಧಾಧಿಕಾರಿಗಳು, ಉಪಸಮಿತಿಯ ಮುಖ್ಯಸ್ಥರುಗಳು, ಸದಸ್ಯರು ಮಾತನಾಡಿದರು.
ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಭಂಡಾರಿ ಥಾಣೆ, ಗೌ| ಪ್ರ| ಕಾರ್ಯದರ್ಶಿ ನ್ಯಾ| ಆರ್.ಎಂ.ಭಂಡಾರಿ, ಗೌ| ಕೋಶಾಧಿಕಾರಿ ಬಿ.ವೆಂಕಟೇಶ್ ಭಂಡಾರಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ್ ಎಸ್.ಭಂಡಾರಿ, ಉಪ ಕಾರ್ಯಾಧ್ಯಕ್ಷ ಬಾಲಕೃಷ್ಣ ಭಂಡಾರಿ ಪುತ್ತೂರು, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಎಸ್.ಭಂಡಾರಿ ಕಡಂದಲೆ ಹಾಗೂ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಲಲಿತಾ ವಿಶ್ವನಾಥ್ ಭಂಡಾರಿ, ಹಿರಿಯ ಮುತ್ಸದ್ಧಿಗಳಾದ ಶ್ರೀಮತಿ ಸುಂದರಿ ಎಸ್.ಭಂಡಾರಿ ಮತ್ತು ಸಂಜೀವ ಭಂಡಾರಿ ಚಿರಾಬಜಾರ್ ಹಾಗೂ ಗುರುದಾಸ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಮಹಾಸಭೆಯ ಮುನ್ನ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿಸಲಾಗಿದ್ದು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಲಲಿತಾ ವಿಶ್ವನಾಥ್ ಭಂಡಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಈ ಶುಭಾವಸರದಲ್ಲಿ ಶ್ರೀಮತಿ ಸುಂದರಿ ಎಸ್. ಭಂಡಾರಿ, ಶ್ರೀಮತಿ ಲತಾ ಎಸ್.ಭಂಡಾರಿ, ಶ್ರೀಮತಿ ಸುನಂದ ಜಿ.ಭಂಡಾರಿ, ಶ್ರೀಮತಿ ಲಲಿತಾ ವಿ. ಭಂಡಾರಿ ಶ್ರೀಮತಿ ಸುಜತಾ ಜಿ ಭಂಡಾರಿ ಮತ್ತು ಶ್ರೀಮತಿ ಶಾಲಿನಿ ಆರ್.ಭಂಡಾರಿ ಸೇರಿದಂತೆ ಸಮಾಜದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಜೊತೆ ಕಾರ್ಯದರ್ಶಿಗಳಾದ ಪ್ರಶಾಂತ್ ಭಂಡಾರಿ ಹಾಗೂ ವಿಜಯ ಭಂಡಾರಿ ನಾಲಾಸೋಪಾರ, ಜೊತೆ ಕೋಶಾಧಿಕಾರಿಗಳಾದ ರಮೇಶ್ ಭಂಡಾರಿ ಹಾಗೂ ಪ್ರಭಾಕರ ಭಂಡಾರಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನ್ಯಾ| ಶೇಖರ್ ಭಂಡಾರಿ, ಬಾಲಕೃಷ್ಣ ಭಂಡಾರಿ ಪುತ್ತೂರು, ರವಿರಾಜ್ ಭಂಡಾರಿ, ಉದಯ ಭಂಡಾರಿ, ಕರುಣಾಕರ ಭಂಡಾರಿ, ರುಕ್ಮಯ ಭಂಡಾರಿ, ಸದಾಶಿವ ಭಂಡಾರಿ, ಸುಧಾಕರ ಭಂಡಾರಿ, ಸದಾಶಿವ ಮುಂಡ್ಕೂರು, ಪ್ರಶಾಂತ್ ಡೊಂಬಿವಲಿ ಮತ್ತು ಕಮಲಾಕ್ಷ ಭಂಡಾರಿ, ಸಲಹೆ ಸಮಿತಿಯ ನಾರಾಯಣ ಭಂಡಾರಿ, ಗುರುದಾಸ್ ಭಂಡಾರಿ ಮತ್ತು ನ್ಯಾ| ಶೇಖರ್ ಭಂಡಾರಿ, ಶಿಕ್ಷಣ ಮತ್ತು ಕಟ್ಟಡ ನಿಧಿ ಸಂಗ್ರಹ ಸಮಿತಿಯ ರಮೇಶ್ ಭಂಡಾರಿ ಮತ್ತು ವಿಶ್ವನಾಥ್ ಭಂಡಾರಿ, ಕಿರಣ್ ಭಂಡಾರಿ ಮತ್ತು ಜಯ ಭಂಡಾರಿ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಸಲಹ ಸೂಚನೆ, ಮಾಹಿತಿ-ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಧಿಕ ಸಂಖ್ಯೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಸಮಾಜ ಭಾಂದವರು ಭಾಗವಹಿಸಿದ್ದು, ವಿಜಯ ಭಂಡಾರಿ ನಾಲಾಸೋಪಾರ ಪ್ರಾರ್ಥನೆಗೈದು ಸ್ವಾಗತಿಸಿದರು.
ನ್ಯಾ| ಆರ್.ಎಂ.ಭಂಡಾರಿ ವಂದನಾರ್ಪಣೆಗೈದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ / ವರದಿ : ರೋನ್ಸ್ ಬಂಟ್ವಾಳ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22
|
|
|