ಕಾರ್ಕಳ. ಮಾ.೨೧: ಕೇಂದ್ರ ಕಾನೂನು ಸಚಿವ ಡಾ.ಎಂ.ರಪ್ಪ ಮೊಯ್ಲಿ ಮಾ.೨೨ರಂದು ಕಾರ್ಕಳಕ್ಕೆ ಆಗಮಿಸಲಿರುವರು.
ಅಂದು ಬೆಳಗ್ಗೆ ೧೧ ಗಂಟೆಗೆ ಕಿಸಾನ್ ಸಭಾ ಟ್ರಸ್ಟ್ ಕಾರ್ಕಳ, ಮಹಾತ್ಮಾ ಗಾಂಧಿ ವಸತಿ ಪ್ರೌಢ ಶಾಲೆ ಕುಕ್ಕುಂದೂರು, ಕಸ್ತೂರ್ಬಾ ಶಿಕ್ಷಕರ ತರಬೇತಿ ವಿದ್ಯಾಲಯ ಕುಕ್ಕುಂದೂರು, ಬಯಲು ರಂಗಮಂದಿರ ಮತ್ತು ಸಭಾಂಗಣದ ಉದ್ಘಾಟನಾ ಸಮಾ ರಂಭಗಳಲ್ಲಿ ಭಾಗವಹಿಸುವರು ವಿಜಯನಗರ ಸ್ಟೀಲ್ ಇಂಡಸ್ಟ್ರೀಸ್‌ನ ಸಜ್ಜನ್ ಜಿಂದಾಲ್, ಎಮ್‌ಆರ್‌ಪಿಎಲ್‌ನ ಗ್ರೂಪ್ ಜನರಲ್ ಮ್ಯಾನೇಜರ್ ಕೆ.ಲಕ್ಷ್ಮೀ ನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು ಎಂದು ಕಿಸಾನ್ ಸಭಾದ ಪ್ರಕಟನೆ ತಿಳಿಸಿದೆ.