ಮು೦ಬೈ: ಜೈಲಿನಲ್ಲಿ ಸಲೇಂ ಮೋಜು, ಮಸ್ತಿ : ಪಂಚತಾರಾ ಹೊಟೇಲಿನಲ್ಲಿರುವ೦ತೆ ಐಷರಾಮಿ ಜೀವನ |
ಪ್ರಕಟಿಸಿದ ದಿನಾಂಕ : 2010-07-28
ಮುಂಬಯಿ : ಮಾಫಿಯಾ ಡಾನ್ ಅಬೂ ಸಲೇಂ ಮೇಲೆ ಕಳೆದ ಶನಿವಾರ ದಾವೂದ್ ಇಬ್ರಾಹಿಂ ಗ್ಯಾಂಗಿನ ಮುಸ್ತಫಾ ದೊಸಾ ಹಲ್ಲೆ ಮಾಡಿದ ಬಳಿಕ ಆರ್ಥರ್ ರೋಡ್ ಜೈಲಿನೊಳಗೆ ಕೆಲವು ಕೈದಿಗಳಿಗೆ ಸಿಗುತ್ತಿದ್ದ ವಿಶೇಷ ಸವಲತ್ತುಗಳ ವಿಚಾರ ಬಯಲಾಗಿದೆ.
ಹಲ್ಲೆ ನಡೆದ ಬೆನ್ನಿಗೆ ಗೃಹ ಖಾತೆಯ ಸಹಾಯಕ ಸಚಿವ ರಮೇಶ್ ಬಾಗ್ವೆ ಅವರು ಜೈಲಿಗೆ ಭೇಟಿ ನೀಡಿದಾಗ ಅಲ್ಲಿ ಸಲೇಂ ದೊಸಾ ಸಹಿತ ಭೂಗತ ಜಗತ್ತಿನ ಗ್ಯಾಂಗ್ಗಳಿಗೆ ಸೇರಿದ ಕೆಲವು ಕೈದಿ ಗಳು ಅನುಭವಿಸುತ್ತಿದ್ದ ಐಷಾರಾಮಿ ಜೀವನವನ್ನು ನೋಡಿ ದಂಗು ಬಡಿದು ಹೋದರು.
ಸಲೇಂನ ಜೈಲು ಕೊಠಡಿ ಯಾವುದೇ ಪಂಚತಾರಾ ಹೊಟೇಲಿನ ಕೊಠಡಿಗೆ ಕಡಿಮೆಯಿರಲಿಲ್ಲ. ಅದರೊಳಗಿದ್ದ ಶೌಚಾಲಯವಂತೂ ಪಂಚತಾರಾ ಹೊಟೇಲುಗಳಲ್ಲಿರುವುದಕ್ಕಿಂತಲೂ ಉತ್ತಮ ಗುಣಮಟ್ಟದ್ದು ಅವನ ಕೊಠಡಿಗೆ ಮಾರ್ಬಲ್ ಹಾಸಲಾಗಿದೆ. ಗೋಡೆಯ ಮೇಲೆಲ್ಲ ಅಶ್ಲೀಲ ಫೋಟೋಗಳನ್ನು ಅಂಟಿಸಲಾಗಿತ್ತು. ಉತ್ತಮ ಹಾಸಿಗೆ ಮತ್ತಿತರ ಸೌಲಭ್ಯಗಳಿಗೆ ಸಲೇಂ ಏರ್ಪಾಡು ಮಾಡಿಕೊಂಡಿದ್ದ.
ಜೈಲು ಕೊಠಡಿಯಲ್ಲಿ 2 ದೊಡ್ಡ ಊಟದ ಬುತ್ತಿಗಳೂ ಇದ್ದವು. ಬಾಗ್ವೆ ಜೈಲಿಗೆ ಭೇಟಿಯಿತ್ತಾಗ ಕೆಲವು ಅಧಕಾರಿಗಳು ಅವರು ಸಲೇಂನ ಬ್ಯಾರಕ್ನತ್ತ ಹೋಗುವುದನ್ನು ತಡೆಯಲು ಪ್ರಯತ್ನಿಸಿ ದರು. ಆದರೆ ಬಾಗ್ವೆ ಅವರನ್ನು ಲೆಕ್ಕಿಸದೆ ಬ್ಯಾರಕ್ಗೆ ಹೋದಾಗ ಜೈಲಿನೊಳಗಿನ ಪಂಚತಾರಾ ಸೌಲಭ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದರು.
ಮುಸ್ತಫಾ ದೊಸಾ ಕೂಡ ಹಲವು ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡಿದ್ದ. ಅವನ ಕೊಠಡಿ ಯಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಹಣ್ಣು ಹಂಪಲುಗಳಿದ್ದವು. ಸಿಗಾರ್, ಇಸ್ತ್ರಿ ಮಾಡಿದ ಉಡುಪು, ರುಚಿಕರವಾದ ಆಹಾರ ಅವನಿಗೆ ಹೊರಗಿನಿಂದ ಸರಬರಾಜಾಗುತ್ತಿತ್ತು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-28
|
|
|