ಗಣಿ ಧೂಳಿನಲ್ಲಿ ಸಚಿವ ರಾಮುಲು.... |
ಪ್ರಕಟಿಸಿದ ದಿನಾಂಕ : 2010-07-30
ಗದಗ,ಜು.29: ಆರೋಗ್ಯ ರಕ್ಷಣೆಯ ಬಹುದೊಡ್ಡ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿರುವ ಸಚಿವ ಬಿ.ಶ್ರೀರಾಮುಲು ಗಣಿ ಘರ್ಷಣೆಯ ಧೂಳಿನಿಂದ ಹೊರಬರಲು ವಿವಿಧ ವೇಷ ಧರಿಸುತ್ತಿದ್ದರೆ ಸಾಂಕ್ರಾಮಿಕ ರೋಗಗಳ ಗೋಳಿನಲ್ಲಿ ಸಿಲುಕಿ ನರಳುತ್ತಿ ರುವ ಜನತೆ ಆರೋಗ್ಯ ಇಲಾಖೆಯ ಕಾರ್ಯವೈಖರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಭಾರಿ ಮಳೆ ಆರಂಭವಾಗಿದ್ದು ಒಂದೆಡೆಯಾದರೆ ಜಲ,ವಾಯು,ಪರಿಸರ ಮಾಲಿನ್ಯದಿಂದಾಗಿ ಎಚ್.1.ಎನ್.1,ಚಿಕನ್ ಗುನ್ಯಾ, ಡೆಂಗ್ಯೂ,ಮಲೇರಿಯಾ ಸೇರಿದಂತೆ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ರಾಜ್ಯದ ವಿವಿಧೆಡೆಗಳಲ್ಲಿ ಬಾಲಕರು,ವಯೋವೃದ್ಧರು ಈ ರೋಗಗಳಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ರೋಗಗಳ ನಿಯಂತ್ರಣಕ್ಕೆ ಮುಂದಾಗಿ ಜನತೆಯ ನೋವಿಗೆ ಸ್ಪೆಂಧಸಬೇಕಾದ ಆರೋಗ್ಯ ಇಲಾಖೆ,ಸರಕಾರಿ ಆಸ್ಪೆತ್ರೆಗಳು ಸಂಪೂರ್ಣವಾಗಿ ನಿದ್ದೆಗೆ ಜಾರಿದ್ದರಿಂದ ಸಾಂಕ್ರಾಮಿಕ ರೋಗಗಕ್ಕೆ ಬಲಿಯಾಗಿರುವ ಜನರು ಭಯ ಭೀತರಾಗಿ ಜೀವವನ್ನುಳಿಸಿ ಕೊಳ್ಳಲು ಸಾಕಷ್ಟು ಸಾಲ & ಸೂಲ ಮಾಡಿ ಖಾಸಗಿ ಆಸ್ಪೆತ್ರೆಗಳ ಮೂರೆ ಹೋಗುತ್ತಿದ್ದಾರೆ.
ಕಡು ಬಡವರು, ಕೊಳಚೆ ನಿವಾಸಿಗಳು, ಅಲೆಮಾರಿ ಜನಾಂಗ, ಕೂಲಿಕಾರರು, ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಮಧ್ಯಮ ವರ್ಗದವರು ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗಾಗಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ,ತಾಲೂಕಾ ಆಸ್ಪೆತ್ರೆ, ಜಿಲ್ಲಾ ಆಸ್ಪೆತ್ರೆಗಳಿಗೆ ಅಲೆದಾಡಿದಾಗಲೂ ಸೂಕ್ತ ಚಿಕಿತ್ಸೆ ದೊರೆಯದೆ ರೋಗಕ್ಕಿಂತಲೂ ಹೆಚ್ಚಾಗಿ ಆಸ್ಪೆತ್ರೆಯ ಅವವ್ಯಸ್ಥೆಯಿಂದ ತೀವ್ರ ಹಿಂಸೆಯನ್ನು ಅನುಭವಿಸುತ್ತಿದ್ದರೂ ಕೇಳುವ, ಪರಿಹಾರ ದೊರಕಿಸುವ ಇಲಾಖೆಯ ದೊರೆ(ಸಚಿವ) ಇತ್ತ ತಲೆ ಎತ್ತಿಯೂ ಮಲಗದೆಯಿರುವುದು ಸರಕಾರಿ ವೈದ್ಯರಿಗೆ,ಸಿಬಂಧ ಗಳಿಗೆ ನೆಮ್ಮದಿಯನ್ನು ತಂದು ಕೊಟ್ಟಿದ್ದರೆ ಖಾಸಗಿ ವೈದ್ಯರಿಗೆ ಹಣ ಮಾಡಿ ಕೊಳ್ಳಲು ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಸರಕಾರಿ ಆಸ್ಪೆತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಬೇಕಾದ ಔಷಧಗಳು,ವೈದ್ಯರು,ಸಿಬಂದಿಗಳು, ಸಲಕರಣೆ ಗಳು ಇಲ್ಲದಿರುವುದು ಒಂದೆಡೆಯಾದರೆ ಇದ್ದ ವ್ಯವಸ್ಥೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವ ಕೈಗಳು ಇಲ್ಲದಿರುವುದರಿಂದ ಮಕ್ಕಳು, ವಯೋವೃದ್ಧರು ಸೇರಿದಂತೆ ಸಂಕ್ರಾಮಿಕ ರೋಗಿಗಳು ಅನಾರೋಗ್ಯದಿಂದ ಬಳಲುವಂತಾಗಿದೆ.
ಸಾಂಕ್ರಾಮಿಕ ರೋಗಗಳ ಉಲ½ಣವನ್ನು ತಡೆಗಟ್ಟುವ,ಸಾಂಕ್ರಾಮಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ,ಔಷಧಗಳನ್ನು ಸಮರ್ಪಕವಾಗಿ ಒದಗಿಸುವ, ವೈದ್ಯರ ಸೇವೆಯನ್ನು ಚುರುಕುಗೊಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಗಣಿ ಘರ್ಷಣೆಯ ಸುಳಿಗೆ ಸಿಕ್ಕಿದ್ದು ಅದರಿಂದ ಹೊರಬರಲು ಹೆಣಗಾಡುತ್ತಾ ಇಲಾಖೆಯ ಜವಾಬ್ದಾರಿಯನ್ನು ಮರೆತ್ತಿದ್ದು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ಬಡ ಜನತೆಯ ಪಾಲಿಗೆ ದೊಡ್ಡ ಶಾಪವಾಗಿದೆ.
ರಾಜ್ಯದ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯ ಇಲಾಖೆಯನ್ನು ಹೊತ್ತುಕೊಂಡ ಸಚಿವ ಬಿ. ಶ್ರೀರಾಮುಲು ಗಣಿ ರಾಜಕೀಯದಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ತಲೆ ಬೋಳಿಸಿ ಕಪ್ಪು ಬಟ್ಟೆ ಧರಿಸಿಕೊಂಡು ದೇವಸ್ಥಾನಗಳಿಗೆ ಪಾದಯಾತ್ರೆ ಮಾಡುತ್ತಾ ಕಾಲ ಕಳೆಯುತ್ತಿರುವುದಕ್ಕೆ ನಗಬೇಕೋ ಅಥವಾ ಅಳಬೇಕೋ ಎಂದು ಸಾಂಕ್ರಾಮಿಕ ರೋಗ ಪೀಡಿತ ಜನತೆ ಹೇಳುತ್ತಿರುವುದನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೇಳಿಸಿಕೊಂಡರೆ ಉಲ್ಬಣಿಸುತ್ತಿರುವ ಸಾಂಕ್ರಾಮಿಕ ರೋಗಗಳಿಗೆ, ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿರುವ ರೋಗಿಗಳಿಗೆ ಚಿಕಿತ್ಸೆ ದೊರೆಯಲು ಸಾಧ್ಯವಾಗಬಹುದು.
ವರದಿಯ ವಿವರಗಳು |
 |
ಕೃಪೆ : ಅನಂತ.ಎಸ್.ಕಾರ್ಕಳ | ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30
|
|
|