ದ್ವೀಪದ ಹಿರಿಯ ಕನ್ನಡಿಗನಿಗೆ ರಾಮೀ ಸಮೂಹ ಸಂಸ್ಥೆಯಿಂದ ಹ್ರದಯಸ್ಪರ್ಶಿ ಬೀಳ್ಕೊಡುಗೆ:ಮೂರೂವರೆ ದಶಕಗಳ ಸುಧೀರ್ಘ ದ್ವೀಪ ವಾಸದ ನಂತರ ತಾಯ್ನಾಡಿನತ್ತ ವಿಟ್ಟಲ್ ಶೆಟ್ಟಿ ದಂಪತಿಗಳು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಬಹರೈನ್:ಉದ್ದಿಮೆಯನ್ನು ವಿಸ್ತರಿಸುವುದರ ಜೊತೆಜೊತೆಗೆ ಹ್ರದಯ ವೈಶಾಲ್ಯತೆಯನ್ನು ಮೆರೆದಿರುವ ಇಲ್ಲಿನ ರಾಮೀ ಸಮೂಹ ಸಂಸ್ಥೆಯು ಸುಮಾರು ಮೂರೂವರೆ ದಶಕಗಳ ಸುಧೀರ್ಘ ದ್ವೀಪವಾಸವನ್ನು ಮುಗಿಸಿ ತಾಯ್ನಾಡಿನತ್ತ ಹೊರತು ನಿಂತಿರುವ ಹಿರಿಯ ಕನ್ನಡಿಗ ವಿಟ್ಟಲ್ ಶೆಟ್ಟಿ ಹಾಗು ಅವರ ಧರ್ಮಪತ್ನಿ ಶ್ರೀಮತಿ ಯಶೋಧ ಶೆಟ್ಟಿ ಯವರಿಗೆ ಬೀಳ್ಕೊಡುಗಾ ಸಮಾರಂಭವನ್ನು ಏರ್ಪಡಿಸಿದ್ದು, ರಾಮೀ ಸಮೂಹ ಸಂಸ್ಥೆಗಳ ಸಮೂಹ ಪ್ರಭಂದಕರಾದ ಶ್ರೀ ಶಾಂತಾರಾಮ್ ಶೆಟ್ಟಿ ,ಅವರ ಧರ್ಮ ಪತ್ನಿ ಆಶಾಲತಾ ಶೆಟ್ಟಿ ಹಾಗು ದ್ವೀಪದ ಹಿರಿಯ ಕನ್ನಡಿಗರು,ಭಾರತೀಯ ಸಮುದಾಯದ ಗಣ್ಯರುಗಳು ಒಂದಾಗಿ ಹ್ರದಯಸ್ಪರ್ಶಿ ಬೀಳ್ಕೊಡುಗೆಯನ್ನು ನೀಡಿ ಶುಭ ಹಾರೈಸಿದರು.ಶಾಂತಾರಾಮ್ ಶೆಟ್ಟಿ ದಂಪತಿಗಳು ವಿಟ್ಟಲ್ ಶೆಟ್ಟಿ ಹಾಗು ಯಶೋದ ಶೆಟ್ಟಿ ಯವರನ್ನು ಪುಷ್ಪಗುಚ್ಛ ನೀಡಿ,ತಿಲಕ ಹಾಕಿ  ವೇದಿಕೆಗೆ ಬರಮಾಡಿಕೊಂಡು ಆಸನದಲ್ಲಿ ಕುಳ್ಳಿರಿಸಿ ಶಾಲು ಹೊದಿಸಿ,ಫಲಪುಷ್ಪಗಳನ್ನು ನೀಡಿದರು .ನಂತರ ಶಾಂತಾರಾಮ್ ಶೆಟ್ಟಿ ಯವರು ವಿಟ್ಟಲ್ ಶೆಟ್ಟಿ ಯವರಿಗೆ ಮೈಸೂರು ಪೇಟ ಧಾರಣೆ ಮಾಡಿದರು.ವಿಟ್ಟಲ್ ಶೆಟ್ಟಿ ದಂಪತಿಗಳು ನೆರೆದ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿದರು.ನೆರೆದವರನ್ನು ಉದ್ದೇಶಿಸಿ ಮಾತನಾಡಿದ ವಿಟ್ಟಲ್ ಶೆಟ್ಟಿ ಯವರು ತನ್ನ ಮೂರುವರೆ ದಶಕಗಳ ದ್ವೀಪ ವಾಸದಲ್ಲಿ ತನ್ನ ಜೀವನದ ಕಷ್ಟ ಸುಖಗಳಿಗೆ ಸ್ಪಂದಿಸಿದ ಎಲ್ಲಾ ಗೆಳೆಯರಿಗೂ ಕ್ರತಜ್ನತೆಗಳನ್ನೂ ಅರ್ಪಿಸಿ ತಮ್ಮ ಮೇಲೆ ಇಷ್ಟೊಂದು ಪ್ರೀತಿ,ಅಭಿಮಾನವನ್ನು ತೋರಿಸಿದ ಶಾಂತಾರಾಮ್ ಶೆಟ್ಟಿ ದಂಪತಿಗಳನ್ನು ತಾನು ಯಾವತ್ತೂ ಮರೆಯಲಾರೆ ಎಂದರು.ಶಾಂತಾರಾಮ್ ಶೆಟ್ಟಿ ಯವರು ಮಾತನಾಡಿ ಬೀಳ್ಕೊಡುಗಾ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲಾ ಸ್ನೇಹಿತರಿಗೂ ಕ್ರತ್ಜ್ನತೆಗಳನ್ನು ಅರ್ಪಿಸಿ,ವಿಟ್ಟಲ್ ಶೆಟ್ಟಿ ದಂಪತಿಗಳ ಮುಂದಿನ ಬಾಳು ಸಂತೋಷಮಯವಾಗಿರಲಿ ಎಂದು ಶುಭ ಹಾರೈಸಿದರು.

ಶ್ರೀಮತಿ ಪ್ರತಿಮಾ ಶೆಟ್ಟಿ ಯವರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರೆ,ಕುಮಾರಿ ದೀಪ್ತಾ ಶೆಟ್ಟಿ ತನ್ನ ಸುಂದರ ನ್ರತ್ಯದಿಂದ ಎಲ್ಲರ ಮನಸೂರೆಗೊಂದಳು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಲವಾರು ಕನ್ನಡಿಗರು ಈ ಸಂಧರ್ಭದಲ್ಲಿ ಮಾತನಾಡಿ ವಿಟ್ಟಲ್ ಶೆಟ್ಟಿ ದಂಪತಿಗಳಿಗೆ ಶುಭ ಹಾರೈಸಿದರು.


ವಿಟ್ಟಲ್ ಶೆಟ್ಟಿ ಯವರು ಮೂರುವರೆ ದಶಕಗಳ ಹಿಂದೆ ಉದ್ಯೋಗ ನಿಮಿತ್ತ ದ್ವೀಪವನ್ನು ಪ್ರವೇಶಿಸಿ ನಂತರದ ದಿನಗಳಲ್ಲಿ ಸ್ವಂತ ಉದ್ದಿಮೆಯನ್ನು ಆರಂಭಿಸಿ ದ್ವೀಪದ ಪ್ರಸಿದ್ಧ ಕನ್ನಡಿಗ ಹೋಟೆಲ್ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು.ಇದೀಗ ಮೂರುವರೆ ದಶಕಗಳ ಸುಧೀರ್ಘ  ದ್ವೀಪವಾಸದ ನಂತರ ತಮ್ಮ ನಿವ್ರತ್ತ ಜೀವನವನ್ನು ತಾಯ್ನಾಡಿನಲ್ಲಿ ಕಳೆಯಲು ತೆರಳುತ್ತಿರುವ ನಿಟ್ಟಿನಲ್ಲಿ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು