ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅರಬ್ ಮಹಿಳೆಯರು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮನಾಮ, ಆ.23: ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿರುವ 2012ನೆ ಸಾಲಿನ ವಿಶ್ವದ ನೂರು ಮಂದಿ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಮೂವರು ಅರಬ್ ಮಹಿಳೆಯರು ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನ್ಯಾಶನಲ್ ಬ್ಯಾಂಕ್ ಆಫ್ ಕುವೈತ್(ಎನ್‌ಬಿಕೆ)ನ ಸಿ‌ಇ‌ಒ ಶಾಯಿಖ ಅಲ್ ಬಹಾರ್, ಯು‌ಎ‌ಇ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಾಯಿಖ ಲುಬ್ನಾ ಅಲ್ ಖಾಸಿಮಿ ಹಾಗೂ ಕತಾರ್ ಮ್ಯೂಸಿಯಮ್ಸ್ ಅಥಾರಿಟಿಯ ಶಾಯಿಖ ಮಯಾಸ ಅಲ್‌ತಾನಿ ಅನುಕ್ರಮವಾಗಿ ಪಟ್ಟಿಯಲ್ಲಿ 85, 92 ಹಾಗೂ 100ನೆ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎನ್‌ಬಿಕೆ ಸಮೂಹವು ತನ್ನ ಒಟ್ಟು ಆಸ್ತಿಯ ವೌಲ್ಯವನ್ನು 51.1 ಶತಕೋಟಿ ಡಾಲರ್‌ಗೆ ಮುಟ್ಟಿಸುವಲ್ಲಿ ಶೈಖಾ ಅಲ್ ಬಹಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಫೋರ್ಬ್ಸ್ ಪ್ರಸ್ತಾಪಿಸಿದೆ.  ಲುಬ್ನಾ ಬಗ್ಗೆ ವಿವರ ನೀಡಿರುವ ಫೋರ್ಬ್ಸ್ 2004ರಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡಿರುವ ಅವರು ಯು‌ಎ‌ಇಯಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ಪಡೆದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದರು ಎಂದು ತಿಳಿಸಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ