ಅಂತರಿಕ್ಷದಲ್ಲಿಯೂ ರಾಷ್ಟ್ರಧ್ವಜಾರೋಹಣ…

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಹ್ಯೂಸ್ಟನ್: ಎರಡನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡಿರುವ ಭಾರತೀಯ ಸಂಜಾತೆ ಅಮೆರಿಕದ ಗಗನ ಯಾತ್ರಿ ಸುನೀತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ರಾಷ್ಟಧ್ವಜ ಹಾರಿಸಿ ಮಾತೃ ದೇಶದ ಅಭಿಮಾನ ಮೆರೆದರು.

ವೈವಿಧ್ಯತೆಗಳ ನೆಲೆವೀಡಾದ ಭಾರತ ಒಂದು ಅದ್ಭುತ ದೇಶ. ನನ್ನ ತಂದೆ ಗುಜರಾತಿ. ಅಲ್ಲಿನ ಸಂಸ್ಕೃತಿ ಹಾಗೂ ಪದ್ಧತಿಗಳ ಬಗ್ಗೆ ಹತ್ತಿರವಾಗಿದ್ದೇನೆ. ಹೀಗಾಗಿಯೇ ಏನೋ ಒಂದು ಬಗೆಯ ಸೆಳೆತ. ಭಾರತ 66ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಂತರಿಕ್ಷದಲ್ಲಿ ಆಚರಿಸಲು ಹೆಮ್ಮೆ ಎನಿಸುತ್ತದೆ’ ಎಂದು ಸುನೀತಾ ಸಂದೇಶ ರವಾನಿಸಿದ್ದಾರೆ.

ನಾಸಾದ ಗಗನಯಾತ್ರಿಯಾಗಿರುವ ಸುನೀತಾ, ಕಮಾಂಡರ್ ರಷ್ಯಾದ ಯೂರಿ ಮಾಲೆನ್‌ಚೆನ್‌ಕೊ ಮತ್ತು ಜಪಾನ್‌ನ ವಾಯುನೆಲೆ ಸಂಶೋಧನಾ ಸಂಸ್ಥೆಯ ಫ್ಲೈಟ್ ಎಂಜಿನಿಯರ್ ಅಕಿಹಿಕೊ ಹೋಶಿಡೆ ಜತೆ ರಷ್ಯಾದ ಸೂಯೆಜ್ ಟಿ‌ಎಂಎ-05ಎಂ ವಾಹಕದಲ್ಲಿ ಕಳೆದ ತಿಂಗಳು ಯಶಸ್ವಿಯಾಗಿ ಅಂತರಿಕ್ಷ ನಿಲ್ದಾಣ ತಲುಪಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ತಾಂತ್ರಿಕ ನಿರ್ವಾಹಕರು