ಬಸ್ಸು ಟ್ಯಾಂಕರ್‌ಗೆ ಢಿಕ್ಕಿ: 50 ಸಾವು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಘಜನಿ: ಅಫ್ಘಾನಿಸ್ಥಾನದ ಘಜನಿ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್ಸು ತೈಲ ಟ್ಯಾಂಕರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಹಿತ 50 ಮಂದಿ ಸತ್ತಿದ್ದಾರೆ.

ಘಜನಿ ಪ್ರಾಂತ್ಯದ ಅಬ್‌ ಬ್ಯಾಂಡ್‌ ಜಿಲ್ಲೆಯಲ್ಲಿ ಕಾಬೂಲ್‌ನಿಂದ ಕಂದಹಾರ್‌ಗೆ ಹೋಗುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಫ್ಘಾನಿಸ್ಥಾನದ ಎರಡನೇ ದೊಡ್ಡ ಪ್ರಾಂತ್ಯವಾಗಿರುವ ಘಜನಿಗೆ ಅಬ್‌ ಬ್ಯಾಂಡ್‌ ರಾಜಧಾನಿ. ಕಾಬೂಲ್‌-ಕಂದಹಾರ್‌ ಹೆದ್ದಾರಿ ದೇಶದ ಅತಿ ಅಪಾಯಕಾರಿ ರಸ್ತೆ. ಉತ್ತರದಿಂದ ಬರುವ ನ್ಯಾಟೊ ಸರಕನ್ನು ದಕ್ಷಿಣಕ್ಕೆ ಸಾಗಿಸುವ ಪ್ರಮುಖ ಮಾರ್ಗ ಘಜನಿ ಮೂಲಕ ಹಾದು ಹೋಗುತ್ತದೆ.

ಶುಕ್ರವಾರ ಬೆಳಗ್ಗೆ ಸ್ಥಳೀಯ ಕಾಲಮಾನ 6.30ರ ಹೊತ್ತಿಗೆ ಅಬ್‌ ಬ್ಯಾಂಡ್‌ನ‌ ಸ್ಪಿನ್‌ ಬ್ಯಾಂಡ್‌ನ‌ಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಘಜನಿಯ ಗವರ್ನರ್‌ ಅಲಿ ಅಹ್ಮದಿ ತಿಳಿಸಿದ್ದಾರೆ.

ಅಪಘಾತದ ಪರಿಣಾಮವಾಗಿ ಬಸ್ಸು ಮತ್ತು ಟ್ಯಾಂಕರ್‌ಗೆ ಏಕಕಾಲದಲ್ಲಿ ಬೆಂಕಿ ಹತ್ತಿಕೊಂಡು ಬಸ್ಸಿನಲ್ಲಿದ್ದ 50 ಪ್ರಯಾಣಿಕರು ಜೀವಂತ ಸುಟ್ಟು ಕರಕಲಾದರು ಹಾಗೂ 5 ಮಂದಿ ಚಿಂತಾಜನಕವಾಗಿ ಗಾಯಗೊಂಡಿದ್ದಾರೆ.

ಅಫ್ಘಾನಿಸ್ಥಾನದ ರಸ್ತೆಗಳು ತೀರಾ ಹದಗೆಟ್ಟಿದ್ದು, ವಾಹನಗಳು ಕೂಡ ಹಳೆಯದಾಗಿರುವುದರಿಂದ ಇಲ್ಲಿ ಅಪಘಾತಗಳು ಸಾಮಾನ್ಯ. ಆದರೆ ಇಂತಹ ಭೀಕರ ಅಪಘಾತ ಸಂಭವಿಸಿರುವುದು ಇತ್ತೀಚೆಗಿನ ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಜಯಪ್ರಕಾಶ್ ಕಿಣಿ

About ಜಯಪ್ರಕಾಶ್ ಕಿಣಿ