ಪ್ರವಾಸದೊಂದಿಗೆ ವಿದೇಶಿಗರಿಗೆ ಗ್ರಾಮೀಣದ ಸೊಗಡನ್ನು ಪರಿಚಯಿಸುವ ಕ್ಯಾಂಪ್- 18 ವಿದೇಶಿಗರಿಂದ ಬೈಂದೂರು-ಕೊಲ್ಲೂರು-ಕಾಲ್ತೋಡು ಭೇಟಿ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (18) ಸಮ್ಮತ (0) ಅಸಮ್ಮತ (0) ಖಂಡನೆ (4) ಅಭಿಪ್ರಾಯವಿಲ್ಲ (0)

ಅಧ್ಯಯನ ಪ್ರವಾಸ ಹೊರಟ ತಂಡಕ್ಕೆ ಬಿ.ಜಿ. ಮೋಹನದಾಸ್ ಸಾರಥಿ…

ಗ್ರಾಮೀಣ ಸೊಗಡನ್ನು, ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ವಿದೇಶಿಗರು ಫುಲ್ ಖುಷ್

ರಮಣೀಯ ಬೀಚಿನ ಸೌಂದರ್ಯವನ್ನು ಕಂಡು ” ವರ್ಲ್ಡ್’ಸ್ ಬೆಸ್ಟ್  ಬೀಚ್ ‘ ಎಂದು ಕೊಂಡಾಡಿದ ಅಮೇರಿಕನ್ನರು.

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅದೇಷ್ಟೋ ಪ್ರೇಕ್ಷಣೀಯ ಸ್ಥಳಗಳಿದ್ದರೂ ಪ್ರವಾಸೋಧ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟೋ ಅಥವಾ ಅವ್ಯವಸ್ಥೆಯಿಂದ ಜರ್ಜರಿತವಾಗಿಯೋ ಪ್ರವಾಸಿಗರ ಕಣ್ಣಿನಿಂದ ದೂರಾಗುತ್ತಲಿದೆ. ಅದೆಷ್ಟೋ ಪ್ರೇಕ್ಷಣಿಯ ಸ್ಥಳಗಳು ಇದ್ದು ಇಲ್ಲದಂತಾಗುವ ಸ್ಥಿಯತ್ತ ತಲುಪುತ್ತಲಿದೆ. ಇಂತಹ ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿಗರಿಗೆ ತೋರಿಸುವ ಮೂಲಕ ಅವರಿಗೆ ಗ್ರಾಮೀಣ ಸೊಗಡು, ಪ್ರವಾಸಿ ಸ್ಥಳಗಳು ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರಗಳ ಬಗ್ಗೆ ಪರಿಚಯಿಸಬೇಕೆನ್ನುವ ನಿಟ್ಟಿನಲ್ಲಿ ಗಲ್ಫ್ ಕನ್ನಡಿಗ ನ್ಯೂಸ್ ವೆಬ್ ಸೈಟಿನ ಸ್ಥಾಪಕ ಸಂಪಾದಕ ಹಾಗೂ ದುಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬಿ.ಜಿ. ಮೋಹನದಾಸ್ 18 ವಿದೇಶಿಗರನ್ನೊಳಗೊಂಡ ತಂಡವನ್ನು ಒಗ್ಗೂಡಿಸಿ ಕಿರುಪ್ರವಾಸ ಏರ್ಪಡಿಸಿದ್ದರು.

forigner tourisam (14)

forigner tourisam (6)

forigner tourisam (11)

forigner tourisam (10)

forigner tourisam (9)” ದ ಅಲ್ಲಿಯನ್ಸ್ ಫಾರ್ ಗ್ಲೋಬಲ್ ಎಜ್ಯುಕೇಶನ್ ” ಹೆಸರಿನ ಈ ಸಂಸ್ಥೆಯ ಮಣಿಪಾಲ ಪ್ರೋಗ್ರಾಮ್ ಮುಖ್ಯಸ್ಥೆ ಕಾಟೀ ಜೋ ವಾಲ್ಟರ್ ಅವರ ನೇತ್ರತ್ವದಲ್ಲಿ 18 ವಿದೇಶಿ ವಿದ್ಯಾರ್ಥಿಗಳು ಈ ಪ್ರವಾಸಿಗದಲ್ಲಿ ಭಾಗವಹಿಸಿದ್ದರು.

ಕೊಲೂರು ಭೇಟಿ: ಮೊದಲಿಗೆ ಈ ತಂದವು ಹೊರಟಿದ್ದು ಕುಂದಾಪುರ ತಾಲೂಕಿನ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ. ಅಲ್ಲಿ ದೇವರಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ ವಿದೇಶಿಯರು ಅರ್ಚಕ ಸುರೇಶ ಭಟ್ ಅವರ ಮಾರ್ಗರ್ಶನದಲ್ಲಿ ದೇವಸ್ಥಾನದ ಹಿನ್ನೆಲೆಯನ್ನು ತಿಳಿದುಕೊಂಡರು. ಶಂಕರಾಚಾರ್ಯ ಪೀಠ, ಯಾಗಮಂಟಪ, ವಿದ್ಯಾರಂಭ, ತುಲಾಭಾರ, ದೇವಿ ನೆಲೆಸಿದ ಹಿನ್ನೆಲೆಯನ್ನು ತಿಳಿದು ಪುಳಕಿತರಾದರು. ಬಳಿಕ ದೇವಸ್ಥಾನದಲ್ಲಿಯೇ ಮಹಾಪ್ರಸಾದ (ಭೋಜನ)ವನ್ನು ಸ್ವೀಕರಿಸಿ ಸಂತಸಪಟ್ಟರು.

forigner tourisam (12)

kollurvisit-americans6

kollurvisit-americans1

kollurvisit-americans5

kollurvisit-americans2

forigner tourisam (7)

forigner tourisam (6)

forigner tourisam (2)

forigner tourisam (1)

ಕಾಲ್ತೋಡು ಗ್ರಾಮ ಭೇಟಿ:

ಕೊಲ್ಲೂರಿನಿಂದ ಹಾಲ್ಕಲ್- ಕಂಬದಕೋಣೆ(ಬೈಂದೂರು) ಮಾರ್ಗವಾಗಿ ಬಿಜಿ ಮೋಹನದಾಸ್ ಸಾರ್ಥ್ಯದ ವಿದೇಶಿಗರ ತಂಡ ಹೊರಟಿದ್ದು ಬೈಂದೂರು ವ್ಯಾಪ್ತಿಯ ಕುಗ್ರಾಮ ಕಾತೋಡಿಗೆ. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇತಿ ನೀಡಿದ ಈ ತಂಡವನ್ನು ಗ್ರಾಮಸ್ಥರು ಹಾಗೂ ಗ್ರಾ.ಪಂ. ತಾ.ಪಂ. ಸದಸ್ಯರು, ಪುಟಾಣಿಗಳು ಆದರದಿಂದ ಬರಮಾಡಿಕೊಂಡರು. ಬಳಿಕ ಊರವರು ಹಾಗೂ ನೆರೆದ ಅತಿಥಿಗಳೊಂದಿಗೆ ವಿದೇಶಿ ವಿದ್ಯಾರ್ಥಿಗಳು ಪಂಚಾಯತ್ ರಾಜ್ ವ್ಯವಸ್ಥೆ, ಆರೋಗ್ಯದ ವಿಷಯ, ಶೈಕ್ಷಣಿಕ ವಿಷಯದ ಬಗ್ಗೆ ಮಾಹಿತಿ ಪಡೆದರು.

kollurvisit-americans3

forigner tourisam (14)

ಸರಕಾರಿ ಆಯುರ್ವೇದಿಕ್ ವೈದ್ಯೆ ಡಾ|| ವೀಣಾ ಕಾಮತ್ ಹಾಗೂ ಬಿಜಿ. ಮೋಹನದಾಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ವಿಜಯಕುಮಾರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಚಂದು ಕುಲಾಲ್ತಿ, ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಕಾಲ್ತೋಡು ಸ.ಹಿ.ಪ್ರಾ. ಶಾಲೆಯ ಮುಖೋಪಧ್ಯಾಯ ನಾರಾಯಣ, ಗ್ರಾ.ಪಂ. ಸದಸ್ಯ ಸುರೇಶ ಪೂಜಾರಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಶೆಟ್ಟಿ, ಉದ್ಯಮಿ ಕಮಲೇಶ ಬಿಜೂರು, ಬೈಂದೂರಿನ ಕಂದಾಯ ಇಲಾಖೆಯ ನಿವ್ರತ್ತ ನಿರೀಕ್ಷಕ ಬಿ. ಮಂಜುನಾಥ(ಎಂ.ಡಿ. ಬಿಜೂರು) ಉಪಸ್ಥಿತರಿದ್ದರು.

forigner tourisam (15)

forigner tourisam (13)

ಒತ್ತಿನೆಣೆ ಪ್ರವಾಸಿ ಸ್ಥಳಕ್ಕೆ ಭೇಟಿ- ಮಸ್ತ್ ಮಜಾ

ಸಂಜೆಯ ಸುಮಾರಿಗೆ ಒತ್ತಿನೆಣೆ ಸಮುದ್ರ ತೀರಕ್ಕೆ ಭೇಟಿ ನೀಡಿದ ಈ ತಂಡ ಸಮುದ್ರ ತೀರದಲ್ಲಿ ಕೆಲಕಾಲ ಆಟವಾಡುವ ಮೂಲಕ ಮಜಾ ಉಡಾಯಿಸಿತ್ತು. ಸಮುದ್ರದ ನೀರಿನಲ್ಲಿ ಹೊರಳಾಡುತ್ತಾ, ಕ್ಯಾಮರಾಕ್ಕೆ ಫೋಸು ಕೊಡುತ್ತಾ, ಪ್ರಕ್ರತಿ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳುತ್ತಾ ಕತ್ತಲಾಗುವವರೆಗೂ ಅಲ್ಲಿ ಕಾಲ ಕಳೆದ ತಂಡ ಬಳಿಕ ಅಲ್ಲಿಂದ ಮಣಿಪಾಲದೆಡೆಗೆ ಪ್ರಯಾಣ ಬೆಳೆಸಿತ್ತು.

forigner tourisam (3)

forigner tourisam (4)

forigner tourisam (27)

forigner tourisam (5)

forigner tourisam

forigner tourisam (30)

forigner tourisam (29)

forigner tourisam (28)

forigner tourisam (24)

forigner tourisam (23)

forigner tourisam (22)

forigner tourisam (21)

forigner tourisam (20)

 

forigner tourisam (19)

forigner tourisam (18)

forigner tourisam (17)

forigner tourisam (16)

forigner tourisam (26)

forigner tourisam (25)

forigner tourisam (29)

kollurvisit-americans

ಬಿ.ಜಿ. ಮೋಹನದಾಸ್ ಅವರೊಂದಿಗೆ ಅಧ್ಯಯನ ಪ್ರವಾಸಕ್ಕೆ ಹೊರಟ ಈ ತಂಡಕ್ಕೆ ಬೈಂದೂರು ಉದ್ಯಮಿ ಕಮಲೇಶ್ ಹಾಗೂ ಕಂದಾಯ ಇಲಾಖೆಯ ನಿವ್ರತ್ತ ನಿರೀಕ್ಷಕ ಬಿ. ಮಂಜುನಾಥ(ಎಂ.ಡಿ. ಬಿಜೂರು) ಮಾರ್ಗದರ್ಶನ ನೀಡುವುದರೊಂದಿಗೆ ಸಂಪೂರ್ಣ ಸಹಕಾರವನ್ನು ನೀಡಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (18) ಸಮ್ಮತ (0) ಅಸಮ್ಮತ (0) ಖಂಡನೆ (4) ಅಭಿಪ್ರಾಯವಿಲ್ಲ (0)
ಯೋಗೀಶ್ ಕುಂಭಾಶಿ

About ಯೋಗೀಶ್ ಕುಂಭಾಶಿ