ಬ್ಲಾಕ್‌ಬೆರ್ರಿಯ ಟ್ರಾಫಿಕ್: ಯಾರಿಗೆ ಎಷ್ಟು ದಂಡ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಮಂಗಳೂರು:  ರಾಜ್ಯದ ಎಲ್ಲ ಐದು ಮಹಾನಗರ ಪಾಲಿಕೆಗಳಲ್ಲಿ ಕಳೆದ ಜೂನ್ ನಿಂದ ಟ್ರಾಫಿಕ್ ಪೊಲೀಸರು ಬ್ಲಾಕ್‌ಬೆರ್ರಿ ಮೊಬೈಲ್ ಹಿಡಿದು ತಿರುಗಾಡುತ್ತಿದ್ದಾರೆ. ಮಾತ್ರವಲ್ಲ ರಶೀದಿ ಸಹಿತ ದಂಡ ವಸೂಲಿ ಮಾಡುತ್ತಿದ್ದಾರೆ. ರಶೀದಿ ಇಲ್ಲದ ದಂಡದ ಅಪವಾದವೂ ಇದೆ. ಆದರೆ ಬ್ಲ್ಲಾಕ್‌ಬೆರ್ರಿ ಬಂದ ಬಳಿಕ ಇದರ ಪ್ರಮಾಣ ಇಳಿಕೆಯಾಗಿದೆ ಎನ್ನಬಹುದು.

ಬೇಕಾಬಿಟ್ಟಿ ದಂಡ ವಸೂಲಿ ಮಾಡುವ ಕ್ರಮಕ್ಕೆ ಬ್ಲಾಕ್‌ಬೆರ್ರಿ ಕಡಿವಾಣ ಹಾಕಿದೆ. ಟ್ರಾಫಿಕ್‌ಗೆ ಬ್ಲಾಕ್‌ಬೆರ್ರಿ ವ್ಯವಸ್ಥೆ ಬಂದ ಬಳಿಕ ಯಾವುದಕ್ಕೆ ಎಷ್ಟು ದಂಡ ಎಂಬುದು ನಿರ್ಧರಿ ತವಾಗಿದ್ದು, ಬಟನ್ ಅದುಮುತ್ತಿದ್ದಂತೆಯೇ ರಶೀದಿ ಸಿದ್ಧವಾಗಿ ಬರುತ್ತದೆ. ಈ ವ್ಯವಸ್ಥೆಯಿಂದಾಗಿ ಪೊಲೀಸರಲ್ಲಿ ಮನವಿ ಮಾಡಿ ದಂಡ ಕಡಿಮೆ ಮಾಡಿಸಿಕೊಳ್ಳುವುದು ಅಸಾಧ್ಯ. ಪೊಲೀಸರೂ ಕೂಡ ಮನಸ್ಸಿಗೆ ಬಂದಂತೆ ದಂಡ ವಸೂಲಿ ಮಾಡುವಂತೆಯೂ ಇಲ್ಲ.

ವಾಹನ ಚಾಲನೆಯ ವೇಳೆ ಗಮನದಲ್ಲಿಡ ಬೇಕಾದ ಅಂಶಗಳಾವುವು ಎಂಬುದು ದಂಡ ಬಿದ್ದ ಬಳಿಕವಷ್ಟೇ ಚಾಲಕರ ಗಮನಕ್ಕೆ ಬರುತ್ತದೆ. ದಂಡ ಪಾವತಿಯ ಕನಿಷ್ಠ ಮೊತ್ತವೇ 100 ರೂ. ಒಂದೇ ಅಪರಾಧಕ್ಕೆ 1,000 ರೂ. ದಂಡ ಪಾವತಿಸುವ ಸಂದರ್ಭವೂ ಬರಬಹುದು. ವಿಶೇಷ ಎಂದರೆ ಒಂದೇ ಅಪರಾಧಕ್ಕೆ 200 ರೂ. ದಂಡ ಪಾವತಿಸುವ ಪ್ರಕರಣ ಟ್ರಾಫಿಕ್ ಪೊಲೀಸ್ ಖಾತೆಯಲ್ಲಿ ಇಲ್ಲ.

ವಾಹನ ಚಾಲನೆಯಲ್ಲಿ ಆಗುವ ಯಾವ ಅಪ ರಾಧಕ್ಕೆ ಎಷ್ಟು ದಂಡ ಎಂಬುದನ್ನಿಲ್ಲಿ ನೀಡಲಾಗಿದೆ.

100 ರೂ. ದಂಡ

ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲುಗಡೆ ಮಾಡಿದರೆ, ರಿಕ್ಷಾ ಮತ್ತು ಟ್ಯಾಕ್ಸಿಗಳ ಮೀಟರ್ ದೋಷ, ದೋಷಪೂರಿತ ಸೈಲೆನ್ಸರ್ ಹೊಂದಿರುವುದು, ಕರ್ಕಶ ಹಾರ್ನ್ ಹೊಂದು ವುದು, ಟ್ರಾಫಿಕ್ ಸಿಗ್ನಲ್ ಮುರಿಯುವುದು, ಟ್ರಾಫಿಕ್ ಸಿಗ್ನಲ್‌ನಲ್ಲಿ ತಪ್ಪು ನಿಲುಗಡೆ, ಟ್ರಾಫಿಕ್ ಸಿಗ್ನಲ್‌ನಲ್ಲಿ ಎಲ್ಲೋ ಲೈನ್ ಮೇಲೆ ಇಲ್ಲವೆ ಅದನ್ನು ದಾಟಿ ನಿಲ್ಲುವುದು (ಪಾದಚಾರಿಗಳಿಗೆ ಮೀಸಲು ಸ್ಥಳ), ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವುದು, ನೋ ಎಂಟ್ರಿಯಲ್ಲಿ ನುಗ್ಗುವುದು, ನಿಷೇಧಿತ ಪ್ರದೇಶದಲ್ಲಿ ಘನವಾಹನ ನುಗ್ಗುವುದು, ಚಾಲಕರು ಸಮವಸ್ತ್ರ ಧರಿಸದಿರು ವುದು, ಹೆಡ್ ಲೈಟ್ ಸರಿ ಇಲ್ಲದಿರುವುದು, ಟೇಲ್ ಲೈಟ್ ಇಲ್ಲದಿರುವುದು, ಬಸ್, ಜೀಪ್ ಮತ್ತಿತರ ವಾಹನಗಳ ಫುಟ್‌ಬೋರ್ಡ್ ಮೇಲೆ ನಿಂತು ಪ್ರಯಾಣಿಸುವುದು, ಮಹಿಳೆಯರಿಗೆ ಮೀಸಲಾದ ಸೀಟ್‌ಗಳಲ್ಲಿ ಪುರುಷರು ಕುಳಿತುಕೊಂಡಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸು ವವರಿಗೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಾಲನೆ ಮಾಡುವವರಿಗೆ, ದ್ವಿಚಕ್ರ ವಾಹನದಲ್ಲಿ ಮೂವರ ಸವಾರಿ, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ.

ಮೊದಲ ಸಲಕ್ಕೆ 100 ಬಳಿಕ 300 ರೂ.

ರಿಕ್ಷಾ, ಟ್ಯಾಕ್ಸಿ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುವುದು ಇಲ್ಲವೆ ಪ್ರಯಾಣಿಕರು ಕರೆದಲ್ಲಿಗೆ ಬಾರದಿರುವುದು ಕಂಡು ಬಂದಲ್ಲಿ ಮೊದಲ ಸಲದ ಅಪರಾಧಕ್ಕೆ 100 ರೂ. ಮತ್ತೆ ಇದೇ ತಪ್ಪು ಮರುಕಳಿಸಿದರೆ 300 ರೂ. ದಂಡ ಪಾವತಿಸಬೇಕಾಗುತ್ತದೆ. ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿ ಸುವ ಅಪರಾಧಕ್ಕೂ ಇದೆ ನಿಯಮ ಅನ್ವಯ. ಕಾರಿನ ಗ್ಲಾಸ್‌ಗೆ ದಟ್ಟ ಕಪ್ಪು ಫಿಲ್ಮ್ ಅಳವಡಿಸು ವುದು ಕೂಡ ಅಪರಾಧ. ಇದಕ್ಕೂ ಮೊದಲ ಸಲಕ್ಕೆ 100 ರೂ. ಮತ್ತೆ ಕಂಡು ಬಂದರೆ 300 ರೂ. ದಂಡ ವಿದಿಸಲಾಗುತ್ತದೆ.

300 ರೂ. ದಂಡ

ದ್ವಿಚಕ್ರವ ವಾಹನದ ಅಪಾಯಕಾರಿ ಚಾಲನೆ, ಮಿತಿಗಿಂತ ವೇಗದ ಚಾಲನೆ (ಮಿತಿಯ ಉಲ್ಲಂಘನೆ), ಕಪ್ಪು ಹೊಗೆ ಬಿಡುವುದು, ಲೈಸೆನ್ಸ್ ರಹಿತ ದ್ವಿಚಕ್ರ ವಾಹನ ಚಾಲನೆ, ದ್ವಿಚಕ್ರ ವಾಹನದ ತಪ್ಪು ನಿಲುಗಡೆ ಇವು 300 ರೂ. ದಂಡಕ್ಕೆ ಕಾರಣವಾಗುವ ಅಪರಾಧಗಳೆನಿಸುತ್ತವೆ.

400 ರೂ. ದಂಡ

ಬಿಳಿ ನಂಬರ್ ಪ್ಲೇಟ್ ಹೊಂದಿರುವ ಸರಕು ಸಾಗಿಸದ ವಾಹನಗಳ ಅಪಾಯಕಾರಿ ಚಾಲನೆಗೆ, ಸರಕು ಸಾಗಿಸದ ವಾಹನದ ಲೈಸೆನ್ಸ್ ರಹಿತ ಚಾಲನೆ, ಕಾರ್‌ನ ತಪ್ಪು ನಿಲುಗಡೆಯ ಅಪರಾಧಕ್ಕೆ 400 ರೂ.ದಂಡ ತೆರಬೇಕಾಗುತ್ತದೆ.

500 ರೂ. ದಂಡ

ಸರಕು ಸಾಗಾಟ ವಾಹನದ ಅಪಾಯಕಾರಿ ಚಾಲನೆ, ಸರಕು ಸಾಗಾಟ ವಾಹನದ ಲೈಸೆನ್ಸ್ ರಹಿತ ಚಾಲನೆ,  ಅಪ್ರಾಪ್ತರು ವಾಹನ ಚಲಾಯಿ ಸಿದ್ದರೆ, ಘನ ವಾಹನದ ತಪ್ಪು ನಿಲುಗಡೆ, ಇನ್ಸೂ ರೆನ್ಸ್ ಸರ್ಟಿಫಿಕೆಟ್ ಹೊಂದಿಲ್ಲದೆ ಇರುವುದು 500 ರೂ. ದಂಡಕ್ಕೆ ಕಾರಣವಾಗುತ್ತದೆ.

ಹೆಚ್ಚು ಪ್ರಯಾಣಿಕರು

ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸ ಲಾಗಿದೆ. ಮಿತಿಗಿಂತ ಹೆಚ್ಚು ಪ್ರಯಾಣಿಕರನ್ನು ಹೊಂದುವುದು ಅಪರಾಧ. ಇಂತಹ ಅಪರಾಧಕ್ಕೆ ವಾಹನದಲ್ಲಿರುವ ಪ್ರತಿ ಹೆಚ್ಚುವರಿ ಪ್ರಯಾಣಿ ಕರಿಗೆ 100 ರೂ.ನಂತೆ ದಂಡ ವಿಧಿಸಲಾಗುತ್ತದೆ.

ನ್ಯಾಯಾಲಯದ ವಿವೇಚನೆಗೆ

ಪೊಲೀಸರು ಪ್ರಕರಣ ದಾಖಲಿಸಲು ಸೀಮಿತರಾಗಿರುತ್ತಾರೆ. ಆರೋಪ ಅಪರಾಧವಾಗಿ ಸಾಬೀತಾದರೆ ದಂಡ ವಿಧಿಸುವ ಅಧಿಕಾರ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದ್ದಾಗಿರುತ್ತದೆ. ಇಂತಹ ಅಪರಾಧಗಳು ಟ್ರಾಫಿಕ್ ಪೊಲೀಸರ ಪಟ್ಟಿಯಲ್ಲಿವೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಪರವಾನಿಗೆ ರಹಿತ ಚಾಲನೆ ಮತ್ತು ಜಿಠಿಟ್ಠಠಿ ಊ.ಇ.ಗೆ ಸಂಬಂಧಿಸಿದ ಅಪರಾಧಗಳು ನ್ಯಾಯಾಲಯದಲ್ಲಿ ಇತ್ಯರ್ಥ ವಾಗಲಿದ್ದು, ದಂಡದ ಪ್ರಮಾಣವನ್ನು ನ್ಯಾಯಾಲಯವೇ ನಿಗದಿಪಡಿಸುತ್ತದೆ.

ಕಾರ್ಯಕ್ಷಮತೆ ಹೆಚ್ಚಿಸಿದ ಬ್ಲಾಕ್‌ಬೆರ್ರಿ ಟ್ರಾಫಿಕ್‌ನಲ್ಲಿ ಬ್ಲಾಕ್‌ಬೆರ್ರಿ ಬಳಕೆಯು ಬೆಂಗಳೂರು ಮಹಾನಗರದಲ್ಲಿ 2008ರಿಂದಲೇ ಚಾಲ್ತಿಯಲ್ಲಿದೆ. ಅಲ್ಲಿಂದ ಇಲ್ಲಿಗೆ ತಲಪಲು ನಾಲ್ಕು ವರ್ಷಗಳು ಬೇಕಾದವು. ಮಂಗಳೂರು ಮಹಾನಗರಕ್ಕೆ ಬ್ಲಾಕ್‌ಬೆರ್ರಿ ವ್ಯವಸ್ಥೆ ಜಾರಿಗೆ ಬಂದಿದ್ದು ಜೂನ್ 13ರ ಬಳಿಕ. ಆ ಬಳಿಕ ಆಗಸ್ಟ್ ಅಂತ್ಯದವರೆಗೆ ಈ ವರ್ಷ ದಾಖಲಾದ ಪ್ರಕರಣಗಳು 13,468. ಸಂಗ್ರಹಿಸಲಾದ ದಂಡದ ಪ್ರಮಾಣ 14,63,000 ರೂ. 2011ರ ಇದೇ ಅವಧಿ (ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ)ಯಲ್ಲಿ ದಾಖ ಲಿಸಿದ ಪ್ರಕರಣಗಳ ಸಂಖ್ಯೆ 18,126. ಆದರೆ ಸಂಗ್ರಹ ವಾದ ದಂಡದ ಪ್ರಮಾಣ 9,16,200 ರೂ. ಮಾತ್ರ. ದಾಖಲಾದ ಪ್ರಕರಣ ಗಳು ಮತ್ತು ಸಂಗ್ರಹಿಸಿದ ದಂಡದ ಹೋಲಿಕೆಯಲ್ಲಿ ಈ ವರ್ಷ ಕಡಿಮೆ ಪ್ರಕರಣಗಳು ದಾಖ ಲಾಗಿವೆ. ಆದರೆ ಹೆಚ್ಚು ದಂಡ ಸಂಗ್ರಹಿಸಲಾಗಿದೆ. ಈ ವ್ಯತ್ಯಾ ಸಕ್ಕೆ ಪೊಲೀಸರು ನೀಡುವ ಕಾರಣ ಬ್ಲಾಕ್‌ಬೆರ್ರಿಯ ಸೇವೆ ಇಲ್ಲ ದಿರುವಾಗ ಆಗಲೇ ದಂಡ ವಸೂಲಿ ಮಾಡದೆ ಅಪರಾಧ ಮಾಡ ದವರಿಗೆ ನೋಟಿಸ್ ನೀಡಲಾಗುತ್ತಿತ್ತು. ಅದರಿಂದ ದಂಡ ವಸೂ ಲಿಯ ಪ್ರಮಾಣ ಕಡಿಮೆ ಎಂಬುದಾಗಿದೆ. ಏನೇ ಆಗಲಿ ಬ್ಲಾಕ್ ಬೆರ್ರಿ ಮಂಗಳೂರು ನಗರ ಟ್ರಾಫಿಕ್ ಪೊಲೀಸರ ಕಾರ್ಯ ಕ್ಷಮತೆ ಯನ್ನು ಹೆಚ್ಚಿಸಿದೆ ಎಂಬುದು ಮೇಲಿನ ಅಂಕಿ ಅಂಶ ತಿಳಿಸುತ್ತದೆ.

ಪೊಲೀಸರೇ ದಂಡ ಹಾಕಿಕೊಂಡಿದ್ದು…!

ಬ್ಲಾಕ್‌ಬೆರ್ರಿ ಬಳಕೆಯ ಸರಿಯಾದ ಮಾಹಿತಿ ಇಲ್ಲದೆ ಪೊಲೀಸ್ ಅಧಿಕಾರಿಗಳು ತಮ್ಮ ಕೈಯಿಂದ ದಂಡ ಪಾವತಿಸಿದ್ದೂ ಇದೆ. ಜೂನ್ ತಿಂಗಳಲ್ಲಿ ಸಂಗ್ರಹವಾದ ರಾಜಧನದಲ್ಲಿ ಪೊಲೀಸರ ಕೈಯಿಂದ ಹೋದ ದಂಡದ ಪ್ರಮಾಣವೇ ಹೆಚ್ಚು ಎನ್ನಲಾಗುತ್ತಿದೆ. ಚಾಲಕನಿಂದ 100 ರೂ. ದಂಡದ ಅಪರಾಧವಾಗಿದ್ದರೆ, ಬ್ಲಾಕ್ ಬೆರಿಯ ಬಟನ್ ಅದಮುವಾಗ ಹೆಚ್ಚು ಕಡಿಮೆಯಾಗಿ ಇಲ್ಲವೆ ಮಾಹಿತಿ ಕೊರತೆಯಿಂದ ಆದ ಪ್ರಮಾದದಿಂದ ಪ್ರಕರಣದ ದಂಡ 500 ರೂ. ಆಗಿದ್ದೂ ಇದೆ. ಇಂತಹ ಸಂದರ್ಭ ದಲ್ಲಿ ಪೊಲೀಸರು ಚಾಲಕನಿಂದ ನೂರು ರೂ. ಮಾತ್ರವೇ ಪಡೆದು ಬಾಕಿ ದಂಡ ತಮ್ಮ ಕೈಯಿಂದಲೇ ಪಾವತಿಸಿದ್ದಿದೆ. ಬ್ಲಾಕ್‌ಬೆರ್ರಿಯಲ್ಲಿ ತಪ್ಪನ್ನು ತಿದ್ದುವ ಅವಕಾಶ ಇಲ್ಲ. ಬ್ಲಾಕ್‌ಬೆರ್ರಿಯಲ್ಲಿ ಸಂಗ್ರಹಿಸುವ ಮಾಹಿತಿಯಲ್ಲವೂ ಬೆಂಗಳೂರಿನಲ್ಲಿ ಸರ್ವರ್ ಕೇಂದ್ರೀಕೃತ ವ್ಯವಸ್ಥೆಗೆ ಆಗಿಂದಾಗಲೇ ರವಾನೆಯಾಗುತ್ತದೆ. ತಮ್ಮಿಂದಾದ ಆದರೆ ತನ್ನದಲ್ಲದ ತಪ್ಪಿಗೆ ಪೊಲೀಸರು ದಂಡ ಕಟ್ಟಲೇ ಬೇಕಾಗುತ್ತದೆ. ಈಗ ಬಹಳ ಜಾಗೃತೆಯಿಂದ ಬ್ಲಾಕ್‌ಬೆರ್ರಿ ಬಳಸುತ್ತಿದ್ದಾರೆ. ಅದೆಷ್ಟು ಜಾಗೃತೆ ಎಂದರೆ ಯಾವ ಅಪರಾಧಕ್ಕೆ ಎಷ್ಟು ದಂಡ ಎಂದು ನೋಡಲು ಕೋಡ ಹೋಗುವುದಿಲ್ಲ. ಕುತೂಹಲಕ್ಕೆ ನೋಡುವಾಗಲೂ ದಂಡ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಟ್ರಾಫಿಕ್ ಬ್ಲಾಕ್‌ಬೆರ್ರಿ ಬಳಸುವ ಪೊಲೀಸ್ ಅಧಿಕಾರಿಗಳು.

ತಪ್ಪಿಸಿಕೊಳ್ಳುವಂತಿಲ್ಲ…

ರಾಜ್ಯದಲ್ಲಿ ಬ್ಲಾಕ್‌ಬೆರ್ರಿ ವ್ಯವಸ್ಥೆ ಇರುವ ಯಾವುದೇ ಪ್ರದೇಶದಲ್ಲಿ ಅಪರಾಧ ಮಾಡಿ ದಂಡ ಪಾವತಿಸಿದ್ದರೂ ಮುಂದಿನ ಬಾರಿ ಸಿಕ್ಕಿಬಿದ್ದಾಗ ಹಿಂದಿನ ಅಪರಾಧದ ಮಾಹಿತಿಯನ್ನೂ ಬ್ಲಾಕ್‌ಬೆರಿ ನೀಡುತ್ತದೆ. ಪದೆಪದೆ ತಪ್ಪು ಮಾಡುವವರು ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಈಗ ಹಣ ಇಲ್ಲ ಎಂದು ಸಬೂಬು ಹೇಳಿ ಹೋಗುವವರನ್ನು ಬ್ಲಾಕ್‌ಬೆರ್ರಿ ಪರಿಚಯಿಸುತ್ತದೆ. ಹಿಂದಿನ ದಂಡ ಪಾವತಿಸಿಲ್ಲ ಎಂಬುದು ಮುಂದಿನ ಬಾರಿ ಸಿಕ್ಕಿಬಿದ್ದಾಗ ತೋರಿಸುತ್ತದೆ. ದಂಡ ಪಾವತಿಸಿದ್ದರೂ ಬ್ಲಾಕ್‌ಬೆರ್ರಿಗೆ ಗೊತ್ತಾಗದಿರುವುದು ಮದ್ಯ ಸೇವಿಸಿ ಚಾಲನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ದಂಡ ವಿಧಿಸಿರುವ ಪ್ರಕರಣಗಳು ಮಾತ್ರ.

ದಾಖಲೆ ತೋರಿಸಲೇ ಬೇಕು

ವಾಹನ ಚಾಲಕ ಅಪರಾಧ ಮಾಡಿ ಸಿಕ್ಕಿಬಿದ್ದಾಗ ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರದ ಮಾಹಿತಿ ಬ್ಲಾಕ್‌ಬೆರ್ರಿಯಲ್ಲಿ ನಮೂದಿಸಲೇಬೇಕು. ಅದಿಲ್ಲದಿದ್ದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಲಾಕ್‌ಬೆರ್ರಿ ಸೂಚಿಸುತ್ತದೆ. ನಾಳೆ ತೋರಿಸುತ್ತೇನೆ. ಆಮೇಲೆ ತರುತ್ತೇನೆ ಎಂಬ ಸಬೂಬುಗಳಿಗೆ ಆಸ್ಪದವೇ ಇಲ್ಲ. ಅಪರಾಧ ನೋಡಿಯೂ ಜಾಣ ಕುರುಡು ಪ್ರದರ್ಶಿಸುವ ಅಧಿಕಾರಿಗಳ ಬಳಿ ಬ್ಲಾಕ್‌ಬೆರ್ರಿ ಇದ್ದರೂ ಪ್ರಯೋಜನ ಇಲ್ಲ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ