ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರಿಂದ ದುಬಾಯಿ ಹಾಗೂ ಮಂಗಳೂರಿನ ಅಶ್ರಮಗಳಿಗೆ ಧೇಣಿಗೆ ವಿತರಣೆ – ಬಡ ಕುಟುಂಬಕ್ಕೆ ಮನೆ ನಿರ್ಮಾಣ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (54) ಸಮ್ಮತ (0) ಅಸಮ್ಮತ (0) ಖಂಡನೆ (4) ಅಭಿಪ್ರಾಯವಿಲ್ಲ (0)

Dhoom_dhamaka_donetion_1

ಮಂಗಳೂರು : ದುಬ್ಯಾಯಿ ಉದ್ಯಮಿ, ಖ್ಯಾತ ಸಂಗೀತಾಗಾರ, ಬಹುಮುಖ ಪ್ರತಿಭೆ ಶ್ರೀ ಹರೀಶ್ ಸೇರಿಗಾರ್ ಅವರ ನೇತ್ರತ್ವದಲ್ಲಿ, ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಪ್ರಾಯೋಜಕತ್ವದಲ್ಲಿ ಹಾಸ್ಯಲೋಕದ ದಿಗ್ಗಜರೆಂದೆ ಖ್ಯಾತರಾಗಿರುವ ಕೃಷ್ಣ – ಸುದೇಶ್ ( ಸೋನಿ ಟಿ.ವಿ ಕಾಮಿಡಿ ಸರ್ಕಸ್ ವಿಜೇತ ಬಾಲಿವುಡ್ ನಟರು) ಹಾಗೂ ಇತರ ಖ್ಯಾತ ಕಲಾವಿದರ ಸಂಗಮದಲ್ಲಿ ದಿನಾಂಕ 15ರಂದು ದುಬಾಯಿಯಲ್ಲಿ ನಡೆದಂತಹ “ಧೂಮ್ ಧಮಾಕ-2013″ ಹಾಸ್ಯ – ಸಂಗೀತಾ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಶ್ರೀ ಹರೀಶ್ ಸೇರಿಗಾರ್ ಅವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಇದೇ ಸಂದರ್ಭದಲ್ಲಿ “ಧೂಮ್ ಧಮಾಕ” ವತಿಯಿಂದ ದುಬಾಯಿಯ ರಷೀದ್ ಸೆಂಟರ್ (ರಶಿದ್ ಛೆನ್ತ್ರೆ ಫ಼ೊರ್ ಡಿಸಬ್ಲೆದ್) ಚಾರಿಟಿ ಸಂಸ್ಥೆ ಹಾಗೂ ಮಂಗಳೂರಿನ ತಲಪಾಡಿ ಬಳಿ ಕಾರ್ಯನಿರ್ವಹಿಸುತ್ತಿರುವ ನಿರ್ಗತಿಕರ ವಸತಿ ಕೇಂದ್ರ ಸ್ನೇಹಲಯಕ್ಕೆ ದೇಣಿಗೆಯನ್ನು ಸಮರ್ಪಿಸಿದ್ದಾರೆ. ಅಲ್ಲದೇ ಬೊಂದೇಲ್‌ನ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟಿದ್ದಾರೆ.

ದುಬೈನ ರಷೀದ್ ಸೆಂಟರ್‌ಗೆ ( ವಿಕಲಚೇತನ ಮಕ್ಕಳ ಕೇಂದ್ರ) ರೂ. 7ಲಕ್ಷ ದೇಣಿಗೆ :

Dhoom_dhamaka_donetion_1ಶ್ರೀಮಾನ್ ಹರೀಶ್ ಸೇರಿಗಾರ್ ಅವರು “ಧೂಮ್ ಧಮಾಕ” ಕಾರ್ಯಕ್ರಮದ ವತಿಯಿಂದ ರೂ.7 ಲಕ್ಷವನ್ನು ದುಬೈನ ಶೇಕ್ ಝಾಯೇದ್ ಬಿನ್ ಸುಲ್ತಾನ್ ಆಲ್ ನಯನ್ ಅವರ ನೇತ್ರತ್ವದ “ರಶೀದ್ ಸೆಂಟರ್” ಚಾರಿಟಿ ಸಂಸ್ಥೆಗೆ ಧೇಣಿಗೆ ನೀಡಿದ್ದಾರೆ.

ರಶೀದ್ ಸೆಂಟರ್ ನಿರ್ಗತಿಕ ಮಕ್ಕಳ ಚಿಕಿತ್ಸಾ ಕೇಂದ್ರವಾಗಿದ್ದು, ಇದು ಮಾನವೀಯತೆ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸೇವಾ ಸಂಸ್ಥೆಯಾಗಿದೆ. ಇಲ್ಲಿ ನಿರ್ಗತಿಕ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಈ ಸಂಸ್ಥೆ 1994 ರಲ್ಲಿ ಆರಂಭಗೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಣ ಮತ್ತು ಚಿಕಿತ್ಸೆಯನ್ನು ನೀಡುವ ಗುರಿಯನ್ನು ಹೊಂದಿದೆ.

ನಿರ್ಗತಿಕರ ವಸತಿ ಕೇಂದ್ರ “ಸ್ನೇಹಾಲಯ”ಕ್ಕೆ ರೂ. 3ಲಕ್ಷ ಸಹಾಯಧನ :

Snehalaya_hs_donetion_2

ಕೇರಳದ ಗಡಿ ಪ್ರದೇಶ ತಲಪಾಡಿ ಬಳಿ ಕಾರ್ಯನಿರ್ವಹಿಸುತ್ತಿರುವ ವೃದ್ದರ, ನಿರ್ಗತಿಕರ, ಅಂಗವಿಕಲರ, ಮಾನಸಿಕ ಅಸ್ವಸ್ಥರ ಆಶ್ರಯ ತಾಣವಾಗಿರುವ ಸ್ನೇಹಾಲಯಕ್ಕೆ ದಿನಾಂಕ 29/11/2013, ಶುಕ್ರವಾರ ಬೇಟಿ ನೀಡಿದ ಹರೀಶ್ ಸೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಸೇರಿಗಾರ್ ದಂಪತಿಗಳು “ಧೂಮ್ ಧಮಾಕ್” ವತಿಯಿಂದ ಸ್ನೇಹಲಯಕ್ಕೆ ರೂ.3ಲಕ್ಷವನ್ನು ದೇಣಿಗೆಯಾಗಿ ನೀಡಿದರು. ಸ್ನೇಹಾಲಯದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತ ಅವರು ದೇಣಿಗೆಯನ್ನು ಸ್ವೀಕರಿಸಿದರು. ಮಾತ್ರವಲ್ಲದೇ ಅಂದಿನ ಒಂದು ದಿನದ ಅಶ್ರಮವಾಸಿಗಳ ಊಟದ ಖರ್ಚನ್ನು ಹರೀಶ್ ಸೇರಿಗಾರ್ ಅವರು ವಹಿಸಿಕೊಂಡರು.

Snehalaya_hs_donetion_4

Snehalaya_hs_donetion_5

Snehalaya_hs_donetion_6

Snehalaya_hs_donetion_7

Snehalaya_hs_donetion_8

Snehalaya_hs_donetion_10

Snehalaya_hs_donetion_11

ನಗರ ಖ್ಯಾತ ಆರ್ಕಿಟೆಕ್ಟ್ ಸನಾತ್ ಹೆಗ್ಡೆ, ವಿಶ್ವಾಸ್ ಬಾವ ಬಿಲ್ಡರ್‍ಸ್ ಮುಖ್ಯಸ್ಥ ಅಬ್ದುಲ್ ರವೂಫ್, ಧನಂಜಯ್ ನಾಯಕ್, ಸತೀಶ್ ಕಾಪಿಕಾಡ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಿರ್ಗತಿಕರಿಗೆ ಆಶ್ರಯ ನೀಡುವ ಉದ್ದೇಶವನ್ನಿಟ್ಟುಕೊಂಡು ಕೇರಳದ ಗಡಿ ಪ್ರದೇಶವಾದ ತಲಪಾಡಿ ಸಮೀಪ ಸ್ನೇಹಾಲಯ ಎಂಬ ಹೆಸರಿನ ಈ ಅಶ್ರಯಧಾಮವನ್ನು ಜೋಸೇಫ್ ಕ್ರಾಸ್ತ ಎಂಬವರು ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದಾರೆ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಅನಾಥಶ್ರಮದಲ್ಲಿ ಯುವಕರಿಂದ ಹಿಡಿದು ವೃದ್ದರವರೆಗೆ ನಿರ್ಗತಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಅಲ್ಪಸ್ವಲ್ಪ ಗುಣಮುಖ ಹೊಂದಿದ್ದರೂ, ಅವರಿಗೆ ಮನೆ ಮಠ ಇಲ್ಲದ ಕಾರಣ ಇಲ್ಲೆ ವಾಸ್ತವ್ಯ ಹೊಂದಿದ್ದಾರೆ.

Snehalaya_hs_donetion_12

ಈ ಸ್ನೇಹಾಲಯದಲ್ಲಿ ರೋಗಿಗಳು, ಬಡವರು, ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಅಂಗವಿಕರು ಜಾತಿ, ಮತ ಧರ್ಮ ಭೇದವಿಲ್ಲದೇ ಒಟ್ಟಿಗೆ ಜೀವಿಸುತ್ತಿದ್ದಾರೆ. ಕೇರಳ, ಬಿಹಾರ್, ಗುಜರಾತ್, ಆಂಧ್ರ ಪ್ರದೇಶ, ಅಸ್ಸಂ, ಜಾರ್ಖಂಡ್, ಬೆಂಗಾಲ್, ಒರಿಸ್ಸಾ, ತಮಿಳುನಾಡು, ಕರ್ನಾಟಕ, ಹಾಗೂ ಉತ್ತರ ಪ್ರದೇಶದ ಮುಂತಾದ ಸ್ಥಳಗಳ ನಿರ್ಗತಿಕರು ಈ ಸ್ನೇಹಾಲಯದಲ್ಲಿ ಆಶ್ರಯ ಪಡೆದಿದ್ದಾರೆ.

ಬಡಕುಟುಂಬಕ್ಕೆ ಮನೆ ನಿರ್ಮಾಣ :

Bondel_house_donetion_3

Bondel_house_donetion_14

Bondel_house_donetion_15

Snehalaya_hs_donetion_9

Bondel_house_donetion_16

Bondel_house_donetion_17

Bondel_house_donetion_20

Bondel_house_donetion_21

Bondel_house_donetion_13

ಕರಾವಳಿಯಲಿ ಜಿಲ್ಲೆಯಲ್ಲಿ ತಮ್ಮ ವಿಸ್ತೃತ ಸೇವಾ ಮನೋಭಾವದಿಂದ ಎಲ್ಲಾ ವರ್ಗದ ಜನರ ಮೆಚ್ಚುಗೆ ಪಡೆದಿರುವ ಹರೀಶ್ ಶೇರಿಗಾರ್ ಅವರು ತಮ್ಮ ಸಮಾಜ ಭಾಂದವರಿಗೆ ವಿದ್ಯಾಭ್ಯಾಸ ಹಾಗೂ ಇನ್ನಿತರ ಬೇರೆ ಬೇರೆ ಚಟುವಟಿಕೆಗಳಿಗೆ ಅನೇಕ ರೀತಿಯಲ್ಲಿ ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ. ಇದೀಗ ಈ ಭಾರಿ ದುಬ್ಯಾಯಲ್ಲಿ ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಪ್ರಾಯೋಜಕತ್ವದಲ್ಲಿ ಹಾಸ್ಯಲೋಕದ ದಿಗ್ಗಜರೆಂದೆ ಖ್ಯಾತರಾಗಿರುವ ಕೃಷ್ಣ – ಸುದೇಶ್ ಹಾಗೂ ಇತರ ಖ್ಯಾತ ಕಲಾವಿದರ ಸಂಗಮದೊಂದಿಗೆ ಹರೀಶ್ ಸೇರಿಗಾರ್ ಅವರ ನೇತ್ರತ್ವದಲ್ಲಿ ನಡೆದಂತಹ “ಧೂಮ್ ಧಮಾಕ-2013″ ಹಾಸ್ಯ – ಸಂಗೀತಾ ಕಾರ್ಯಕ್ರಮದ ವತಿಯಿಂದ ಬೊಂದೇಲ್ – ಪಚ್ಚನಾಡಿ ಸಮೀಪ ಸಣ್ಣ ಗುಡಿಸಲೊಂದರಲ್ಲಿ ವಾಸಿಸುತ್ತಿದ್ದ ಬಡ ಕುಟುಂಬವೊಂದಕ್ಕೆ ಹರೀಶ್ ಶೇರಿಗಾರ್ ಅವರು ಸುಮಾರು 3ಲಕ್ಷ ವೆಚ್ಚದಲ್ಲಿ 700  ಚದರ ಅಡಿ ವಿಸ್ತೀರ್ಣದ ಅರ್.ಸಿ.ಸಿ ಮನೆ ನಿರ್ಮಿಸಿ ಕೊಟ್ಟಿದ್ದು, ನವೆಂಬರ್ 29ರ ಶುಕ್ರವಾರದಂದು ಶ್ರೀ ರುಕ್ಮಯ ದೇವಾಡಿಗ ಹಾಗೂ ಉಮಾವತಿ ದಂಪತಿಗಳಿಗೆ ಶ್ರೀ ಹರೀಶ್ ಸೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಸೇರಿಗಾರ್ ದಂಪತಿಗಳು ನೂತನ ಮನೆಯನ್ನು ಹಸ್ತಾಂತರಿಸಿದರು. ಮಾತ್ರವಲ್ಲದೇ ಇವರ 3 ಮಕ್ಕಳಲ್ಲಿ ಒರ್ವನಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಮನೆ ನಿರ್ಮಾಣ ಕಾರ್ಯವು ಶೇಖಡ 80ರಷ್ಟು ಪೂರ್ಣಗೊಂಡಿದ್ದು, ಡಿಸಂಬರ್ ಅಂತ್ಯದೊಳಗೆ ಮನೆ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ.

Bondel_house_donetion_19

Bondel_house_donetion_18

ದುಬೈಯಲ್ಲಿ ಅದ್ದೂರಿ ಪ್ರದರ್ಶನ ಕಂಡ ಧೂಮ್ ಧಮಾಕ-2013 : ಹಾಸ್ಯ, ಸಂಗೀತ, ನೃತ್ಯವನ್ನು ಒಂದೇ ಸೂರಿನಡಿ ಕಂಡು ಪುಳಕಿತರಾದ ಪ್ರೇಕ್ಷಕರು, ಕೃಷ್ಣ – ಸುದೇಶ್‌ರಿಂದ ಹಾಸ್ಯ ರಸದೌತಣ

Click Here > http://gulfkannadiga.com/news/uae/134666.html

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (54) ಸಮ್ಮತ (0) ಅಸಮ್ಮತ (0) ಖಂಡನೆ (4) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com