ಲಕುಮಿ ತಂಡದ ಪ್ರಥಮ ಕಾಣಿಕೆ “ಎಕ್ಕಸಕ” ತುಳು ಚಲನಚಿತ್ರದ ಮಹೂರ್ಥ – ಈ ಚಿತ್ರ ಇತಿಹಾಸ ನಿರ್ಮಿಸಲಿ : ಸೀತಾರಾಮ್ ಕುಲಾಲ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (26) ಸಮ್ಮತ (1) ಅಸಮ್ಮತ (2) ಖಂಡನೆ (0) ಅಭಿಪ್ರಾಯವಿಲ್ಲ (0)

ವರದಿ / ಚಿತ್ರ : ಸತೀಶ್ ಕಾಪಿಕಾಡ್.

EkkaSakka_movei_mahurta_1

ಮಂಗಳೂರು : ಲಕುಮಿ ಸಿನಿ ಕ್ರಿಯೇಶನ್ಸ್ ಮಂಗಳೂರು, ಇವರ ಚೊಚ್ಚಲ ತುಳು ಚಲನಚಿತ್ರ “ಎಕ್ಕಸಕ” ದ ಮಹೂರ್ಥ ಸಮಾರಂಭವು ಬಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ಜರಗಿತು. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶಿರ್ವಚನ ನೀಡಿದರು.

 EkkaSakka_movei_mahurta_2

EkkaSakka_movei_mahurta_3

EkkaSakka_movei_mahurta_4

EkkaSakka_movei_mahurta_5

EkkaSakka_movei_mahurta_6

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದುಬಾಯಿ ಉದ್ಯಮಿ ಹಾಗೂ ಖ್ಯಾತ ಹಾಡುಗಾರ ಶ್ರೀ ಹರೀಶ್ ಸೇರಿಗಾರ್ ಅವರು ಕ್ಲಾಪ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಹೆಚ್ಚಿನ ತುಳು ಚಿತ್ರಗಳು ತನ್ನ ಮೂಲ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವುದರಿಂದ ಚಿತ್ರಪ್ರೇಮಿಗಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿದೆ. ಒಂದು ಉತ್ತಮ ಚಿತ್ರವಾಗಲು ಮೊದಲು ನಾಟಕದ ಛಾಪಿನಿಂದ ಹೊರಬರಬೇಕು. ಸಿನಿಮಾ, ಸಿನಿಮಾ ಶೈಲಿಯಲ್ಲಿ ನಿರ್ಮಾಣಗೊಂಡಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಎಕ್ಕಸಕ ಚಿತ್ರ ತಂಡವನ್ನು ನೋಡಿದಾಗ ಈ ಚಿತ್ರ ಉತ್ತಮವಾಗಿ ಮೂಡಿ ಬರುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಚಿತ್ರ ತನ್ನ ಅದ್ಭುತ ಯಶಸ್ಸಿನ ಮೂಲಕ ತುಳು ಚಿತ್ರರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಮಾತ್ರವಲ್ಲದೇ ಈ ಚಿತ್ರ ತಂಡಕ್ಕೆ ದುಬೈಯಲ್ಲಿ ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ತಾನು ನೀಡುವುದಾಗಿ ಹರೀಶ್ ಸೇರಿಗಾರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

 EkkaSakka_movei_mahurta_7

EkkaSakka_movei_mahurta_8

EkkaSakka_movei_mahurta_9

EkkaSakka_movei_mahurta_10

EkkaSakka_movei_mahurta_11

EkkaSakka_movei_mahurta_12

 ತುಳು ಸಾಹಿತ್ಯ ಆಕಾಡೆಮಿಯ ಮಾಜಿ ಅಧ್ಯಕ್ಷರಿಗಳಾದ ಶ್ರೀ ಸೀತಾರಾಮ್ ಕುಲಾಲ್, ಉಮಾನಾಥ ಕೋಟ್ಯಾನ್ ಹಾಗೂ ಉದ್ಯಮಿ ಶ್ರ್‍ಈ ಶೇಖರ್ ಶೆಟ್ಟಿ ತೇಂಜಮನೆ ಅತಿಥಿಗಳಾಗಿದ್ದರು.

ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಿ ತುಳುರಂಗಭೂಮಿಯಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಲಯನ್ ಕಿಶೋರ್ ಡಿ. ಶೆಟ್ಟಿಯವರ ನೇತ್ರತ್ವದಲ್ಲಿ ಹಾಗೂ ಅನುಭವಸ್ಥ ಕಲಾವಿದರ ಸಂಗಮದಲ್ಲಿ ಮೂಡಿಬರುತ್ತಿರುವ “ಎಕ್ಕ ಸಕ” ತುಳು ಚಲನಚಿತ್ರ 200 ದಿನಗಳ ವಿಶೇಷ ಪ್ರದರ್ಶನ ಕಾಣುವ ಮೂಲಕ ತುಳುಚಿತ್ರ ರಂಗದಲ್ಲಿ ಇತಿಹಾಸ ನಿರ್ಮಿಸಲಿ ಎಂದು ಸೀತಾರಾಮ್ ಕುಲಾಲ್ ಹಾರೈಸಿದರು.

 EkkaSakka_movei_mahurta_13

EkkaSakka_movei_mahurta_14

EkkaSakka_movei_mahurta_15

EkkaSakka_movei_mahurta_16

EkkaSakka_movei_mahurta_17

EkkaSakka_movei_mahurta_18

ಚಿತ್ರದ ನಿರ್ಮಾಕರಾದ ಲಯನ್ ಕಿಶೋರ್ ಡಿ.ಶೆಟ್ಟಿ ಮಾತನಾಡಿ, ಉತ್ತಮ ಕ್ವಾಲಿಟಿ ಹಾಗೂ ಚಿತ್ರರಸಿಕರ ಅಭಿರುಚಿಗೆ ತಕ್ಕಂತ ಚಿತ್ರವನ್ನು ನಿರ್ಮಿಸುವ ಉದ್ದೇಶವನ್ನಿಟ್ಟುಕೊಂಡು, ಒಂದು ಅನುಭವಿ ಕಲಾವಿದರ ತಂಡ ರಚಿಸಿ ಈ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ತಮ್ಮೇಲ್ಲರ ಸಂಪೂರ್ಣ ಸಹಕಾರ ಬೇಕು ಎಂದು ಹೇಳಿದರು.

 EkkaSakka_movei_mahurta_19

EkkaSakka_movei_mahurta_20

EkkaSakka_movei_mahurta_21

EkkaSakka_movei_mahurta_22

EkkaSakka_movei_mahurta_23

EkkaSakka_movei_mahurta_24

 ಚಿತ್ರದ ಸಹನಿರ್ಮಾಕರಾದ ಗಿರೀಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ ಹಾಗೂ ಚಿತ್ರದ ನಾಯಕ ಹಿತೇಶ್ ನಾಯ್ಕ್, ನಾಯಕಿ ಸೋನಾಲ್ ಪಡೀಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ಕೆ.ಸೂರಾಜ್, ಕಲಾವಿದರಾದ ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ, ಸತೀಶ್ ಬಂದಲೆ, ರವಿ ಸುರತ್‌ಕಲ್ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

 EkkaSakka_movei_mahurta_25

EkkaSakka_movei_mahurta_26

EkkaSakka_movei_mahurta_27

EkkaSakka_movei_mahurta_28

EkkaSakka_movei_mahurta_29

EkkaSakka_movei_mahurta_30

EkkaSakka_movei_mahurta_31

ತುಳು ರಂಗಭೂಮಿ ನಟ ಹಾಗೂ ಕನ್ನಡ ಧಾರವಾಹಿ ಭಲೇ ಭಸವ ಖ್ಯಾತಿಯ ಶೋಭಾರಾಜ್ ಪ್ರಸ್ತಾವನೆಗೈದರು. ನವೀನ್ ಶೆಟ್ಟಿ ಆಳಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

EkkaSakka_movei_mahurta_32

EkkaSakka_movei_mahurta_33

EkkaSakka_movei_mahurta_34 ಎಕ್ಕ ಸಕ – ಇಂಚನೆ… ಕಷ್ಟಸುಖ…

ತುಳು ರಂಗ ಭೂಮಿಯಲ್ಲಿ ತುಳು ಚಲನಚಿತ್ರವನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಬಹು ಜನರ ಪ್ರೀತಿಯ ಒತ್ತಡಕ್ಕೆ ಮಣಿದು ಈ ಚಿತ್ರ ನಿರ್ಮಾಣಕ್ಕೆ ಹೊರಟ್ಟಿದ್ದೇವೆ. ಚಿತ್ರಕ್ಕೆ ಒಂದು ಉತ್ತಮ ಕಥೆಯನ್ನು ಸಿದ್ದಪಡಿಸಲಾಗಿದ್ದು, ಚಿತ್ರದ ನಾಯಕ ಹಾಗೂ ನಾಯಕಿ ಪ್ರಥಮ ಬಾರಿ ಈ ಚಿತ್ರದ ಮೂಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಇವರಿಬ್ಬರೂ ಈ ಕಥೆಗೆ ಹೇಳಿ ಮಾಡಿಸಿದಂತಹ ಜೋಡಿ. ಇಬ್ಬರೂ ಉತ್ತಮ ನಟನಾ ಕೌಶಲ್ಯ ಹೊಂದಿದ್ದಾರೆ. ಉಳಿದಂತೆ ತುಳು ರಂಗಭೂಮಿಯ ಹೆಸರಾಂತ ಹಾಸ್ಯ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಈಗಾಗಲೇ ಕೆಲವು ತುಳು ಚಿತ್ರಗಳಲ್ಲಿ ನಟಿಸಿರುವ ಅನುಭವವನ್ನು ಹೊಂದಿದ್ದಾರೆ. ನಿರ್ದೇಶ ಸೂರಾಜ್ ಈಗಾಗಲೇ ಹಲವಾರು ಪ್ರಸಿದ್ದ ನಿರ್ದೇಶಕರ ಜೊತೆ ಅಸೋಸಿಯೆಟ್ ಆಗಿ ಕೆಲಸ ಮಾಡಿರುವ ಅನುಭವ ಪಡೆದಿದ್ದಾರೆ. ಸಂಗೀತಾ ನಿರ್ದೇಶಕ ರವಿ ಬಸ್ರೂರು, ಕ್ಯಾಮಾರ ಮ್ಯಾನ್ ನವೀನ್ ಕೇರಳ ಎಲ್ಲರೂ ಅನುಭವಸ್ಥರೇ ಅಗಿರುವುದಿರಂದ ಚಿತ್ರದ ಯಶಸ್ಸಿನ ಬಗ್ಗೆ ಯಾವೂದೇ ಅನುಮಾನವಿಲ್ಲ ಎಂದು ಚಿತ್ರದ ಬಗ್ಗೆ ಕಿಶೋರ್ ಶೆಟ್ಟಿ ವಿವರಿಸಿದ್ದಾರೆ.

EkkaSakka_movei_mahurta_35

EkkaSakka_movei_mahurta_36

EkkaSakka_movei_mahurta_37

ದುಬಾಯಿ ಉದ್ಯಮಿ ಹರೀಶ್ ಸೇರಿಗಾರ್ ಅವರು ಒರ್ವ ಉತ್ತಮ ಹಾಡುಗಾರರಾಗಿದ್ದು, ಈಗಾಗಲೇ ದುಬೈ ಹಾಗೂ ಮಂಗಳೂರಿನಲ್ಲಿ ತಮ್ಮ ಹಾಡಿನ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇವರು ಈ ಚಿತ್ರದಲ್ಲಿ ತಾವೇ ಒಂದು ಹಾಡನ್ನು ಹಾಡುವ ಮೂಲಕ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಚಿತ್ತರಂಜನ್ ಪೂಜಾರಿ ( ಚಿತ್ತ) ಕೂಡ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಅವರು ತಿಳಿಸಿದರು.

EkkaSakka_movei_mahurta_38

EkkaSakka_movei_mahurta_39

EkkaSakka_movei_mahurta_40

 ಚಿತ್ರ ತಂಡದ ವಿವರ : ನಿರ್ಮಾಪಕ : ಲಯನ್ ಕಿಶೋರ್ ಡಿ.ಶೆಟ್ಟಿ, ಸಹನಿರ್ಮಾಕರು : ಗಿರೀಶ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ಸಂಗೀತಾ : ರವಿ ಬಸ್ರೂರು, ಛಾಯಗ್ರಹಣ : ನವೀನ್ ಕೇರಳ, ನಾಯಕ : ಹಿತೇಶ್, ನಾಯಕಿ : ಸೋನಾಲ್ ಪಡೀಲ್, ಇತರ ಕಲಾವಿದರು : ನವೀನ್ ಪಡೀಲ್, ಶೋಭಾರಾಜ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ, ಸತೀಶ್ ಬಂದಲೆ, ರವಿ ಸುರತ್ಕಲ್, ಸುಂದರ್ ರೈ ಮಂದಾರ, ಧರ್ಮೆಂದ್ರ ಅಮಿನ್, ಚಂದ್ರಹಾಸ್ ಕದ್ರಿ, ಸಂದೀಪ್ ಶೆಟ್ಟಿ, ಉಮೇಶ್ ಮಿಜಾರ್.

ವರದಿ / ಚಿತ್ರ : ಸತೀಶ್ ಕಾಪಿಕಾಡ್.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (26) ಸಮ್ಮತ (1) ಅಸಮ್ಮತ (2) ಖಂಡನೆ (0) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com