ಪ್ರಜಾಪ್ರಭುತ್ವವನ್ನು ಮೀರಿದ ರಾಜನೀತಿ ಬೇರೆ ಇಲ್ಲ: ನ್ಯಾ. ಸಂತೋಷ್‌ ಹೆಗ್ಡೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

1-KIR_1886-copy

ಮಂಗಳೂರು, ಜ.11: ಪ್ರಜಾಪ್ರಭುತ್ವವನ್ನು ಮೀರಿದ ರಾಜನೀತಿ ಬೇರೆ ಇಲ್ಲವಾಗಿದೆ. ಆದರೆ ರಾಜಕಾರಣಿಗಳ ದುರಾಸೆಯಿಂದಾಗಿ ಪ್ರಜಾಪ್ರಭುತ್ವ ವೌಲ್ಯ ಕಳೆದು ಕೊಳ್ಳುತ್ತಿದ್ದು, ಅದನ್ನು ಉಳಿಸುವ ಜವಾಬ್ದಾರಿ ಯುವ ಜನಾಂಗದ್ದು ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದ ರಾಮಕೃಷ್ಣ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೆ ಜನ್ಮ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ ನಂತರದ ಆರಂಭಿಕ ವರ್ಷಗಳಲ್ಲಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿರಿಯ ರಾಜಕಾರಣಿಗಳು ಸಂಸತ್ತಿನಲ್ಲಿ ನಡೆಸುತ್ತಿದ್ದ ಗಂಭೀರವಾದ ಚರ್ಚೆಗಳಿಗೆ ಇಂದಿನ ಸಂಸತ್ತು, ವಿಧಾನಸಭೆಯಲ್ಲಿ ಅವಕಾಶವೇ ಇಲ್ಲವಾಗಿದೆ. ಬರೀ ಗದ್ದಲ, ಸಭಾತ್ಯಾಗ ಮಾತ್ರ ಇಂದು ಕಾಣಬಹುದು. ಸಂಪತ್ತು, ಅಕಾರವನ್ನು ಮಾತ್ರ ಪೂಜಿಸುವ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದು, ತಪ್ಪು ದಾರಿಯಿಂದ ಆಡಳಿತಕ್ಕೆ ಬಂದ ವ್ಯಕ್ತಿಗಳನ್ನು ಬಹಿಷ್ಕರಿಸುವಂತಹ ವ್ಯವಸ್ಥೆ ನಮ್ಮದಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

1950ರ ಕೇಂದ್ರ ಸರಕಾರದ ಜೀಪ್ ಹಗರಣ 52 ಲಕ್ಷ ರೂ.ಗಳಾಗಿದ್ದರೆ, 1986ರಲ್ಲಿನ ಬೋೆರ್ಸ್ ಹಗರಣ 64 ಕೋಟಿ ರೂ.ಗಳದ್ದಾಗಿತ್ತು. 2010ರಲ್ಲಿ ಕಾಮನ್‌ವೆಲ್ತ್ ಹಗರಣ 70,000 ಕೋಟಿ, 2ಜಿ ಹಗರಣ 1,76,000 ಕೋಟಿ ರೂ., 2012ರ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ 1,86,000 ಕೋಟಿ ರೂ.ಗಳನ್ನು ತಲುಪಿರುವುದು ನಮ್ಮ ರಾಜಕೀಯ ವ್ಯವಸ್ಥೆಯೊಳಗಿನ ಭ್ರಷ್ಟತೆಗೆ ಹಿಡಿದ ಕೈಗನ್ನಡಿ ಎಂದವರು ವಿಷಾದಿಸಿದರು.

ತಪ್ಪು ಮಾರ್ಗದಿಂದ ಸಂಪಾದಿಸಿದ ಸಂಪತ್ತು, ಅಕಾರ ಎಂದೂ ಶಾಶ್ವತ ಅಲ್ಲ, ಅದರಿಂದ ತೃಪ್ತಿಯೂ ಇರುವುದಿಲ್ಲ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಮನಗಾಣ ಬೇಕು ಎಂದು ಸಲಹೆ ನೀಡಿದ ನ್ಯಾ.ಸಂತೋಷ್ ಹೆಗ್ಡೆ, ದುರಾಸೆ ಎನ್ನುವುದು ಸಾಂಕ್ರಾಮಿಕ ರೋಗ ಎಂದು ವಿಶ್ಲೇಷಿಸಿದರು. ದಿಕ್ಸೂಚಿ ಭಾಷಣ ಮಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ, ದೇಶ ಮಾತ್ರವಲ್ಲದೆ, ವಿದೇಶ ರಾಷ್ಟ್ರಗಳನ್ನೂ ಸಂಚರಿಸಿ ಅಲ್ಲಿಯೂ ಭಾರತದ ಸಂಸ್ಕೃತಿಯ ಕಂಪನ್ನು ಬೀರಿದ ವಿವೇಕಾನಂದರ ಕೊಡುಗೆ, ವ್ಯಕ್ತಿತ್ವ ಅದ್ಭುತವಾದದ್ದು ಎಂದರು.

ವಿವೇಕಾನಂದರ 150ನೆ ಜನ್ಮ ದಿನಾಚರಣೆಯನ್ನು ಮಠದ ಆಶ್ರಯದಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಗುತ್ತಿದ್ದು, ಅವರ ಜೀವನ ಮತ್ತು ಸಂದೇಶವನ್ನು ಯುವಕರಿಗೆ ತಲುಪಿಸುವ ಉದ್ದೇಶ ಈ ಕಾರ್ಯಕ್ರಮದ್ದು ಎಂದವರು ಹೇಳಿದರು. ವೇದಿಕೆಯಲ್ಲಿ ಬೆಂಗಳೂರಿನ ಹ್ಯೂಮನ್ ನೆಟ್‌ವರ್ಕಿಂಗ್ ಅಕಾಡಮಿಯ ನಿರ್ದೇಶಕ ಪ್ರೊ.ಕೆ.ರಘೋತ್ತಮ ರಾವ್ ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (1) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ ವಾರ್ತಾ ವಿಭಾಗ ದುಬೈ, ಗಲ್ಫ್

ಗಲ್ಫ್ ಕನ್ನಡಿಗ ವಾರ್ತಾ ವಿಭಾಗ ದುಬೈ... ಹೆಚ್ಚಿನ ಮಾಹಿತಿಗೆ - Contact: uae@gulfkannadiga.com