ಹೀನ ಕೃತ್ಯಕ್ಕೆ ಪೋಲಿ ಹುಡುಗರ ಬೆಂಬಲ; ಬೆತ್ತಲೆ ಚಿತ್ರದ ಕರಪತ್ರ ಹಂಚಿಕೆ!

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (9) ಸಮ್ಮತ (1) ಅಸಮ್ಮತ (3) ಖಂಡನೆ (40) ಅಭಿಪ್ರಾಯವಿಲ್ಲ (2)

bluefilm (2)

ಉಡುಪಿ: ಗೆಳತಿಯ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿದ ಆರೋಪಿ ಮಹಮ್ಮದ್‌ ಯಾಸೀರ್‌ನ ಕೃತ್ಯವನ್ನು ಬೆಂಬಲಿ­ಸುವಂತಹ ಹೇಳಿಕೆ ಮತ್ತು ಯುವತಿ ಹಾಗೂ ಯಾಸೀರ್‌ ಅಶ್ಲೀಲ ಭಂಗಿಯಲ್ಲಿರುವ ಛಾಯಾಚಿತ್ರಗಳಿರುವ ಕರಪತ್ರಗಳನ್ನು ದುಷ್ಕರ್ಮಿಗಳು ಉಡುಪಿ ಮತ್ತು ಮಣಿಪಾಲದ ಕೆಲವು ಕಾಲೇಜುಗಳಲ್ಲಿ ಹಂಚಿದ್ದಾರೆ.

‘ಮಹಮ್ಮದ್‌ ಯಾಸೀರ್‌ಗೆ ಶುಭಾಶ­ಯಗಳು… ಕಾಲೇಜಿನ ಯುವತಿಯನ್ನು (ಯುವತಿ ಮತ್ತು ಕಾಲೇಜಿನ ಹೆಸರು ಬರೆಯಲಾಗಿದೆ) ನಿನ್ನ ಕಾಮದಾಹಕ್ಕೆ ಬಳಸಿಕೊಂಡ ಹಾಗೆ ಎಲ್ಲಾ ಕಾಲೇಜಿ­ನಲ್ಲಿ ಇನ್ನೂ ಬೇಕಾ­ದಷ್ಟು ಹಿಂದೂ ಹುಡು­ಗಿಯರು ನಿನ್ನ ಜೊತೆ ಮಲಗಲು ತಯಾರಾಗಿ­ದ್ದಾರೆ. ಕೀಪ್‌ ಇಟ್‌ ಅಪ್‌, ವೆಲ್‌ಡನ್‌’ ಎಂಬ ಸಾಲು, ಯುವತಿಯ ಭಾವಚಿತ್ರ, ಎರಡು ಅಶ್ಲೀಲ ಭಂಗಿಯ ಚಿತ್ರಗಳು ಈ ಕರಪತ್ರದಲ್ಲಿವೆ.

ಅತ್ಯಾಚಾರ ಪ್ರಕರಣಕ್ಕೆ ಆಗ್ರಹ: ಆರೋಪಿ ಮಹಮ್ಮದ್‌ ಯಾಸೀರ್‌ ಮೇಲೆ ಕೇವಲ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿ­ರುವುದು ಸರಿಯಲ್ಲ. ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಬಜರಂಗದಳದ ಮಂಗಳೂರು ವಿಭಾಗದ ಸಂಚಾಲಕ ಶರಣ್‌ ಪಂಪ್‌ವೆಲ್‌ ಶನಿವಾರ ಆಗ್ರಹಿಸಿದರು.

ಮಂಗಳೂರು ಮತ್ತು ಉಡುಪಿ ಪ್ರದೇಶ­ದಲ್ಲಿ ಬಹುಸಂಖ್ಯಾತ ಕೋಮಿನ ಹುಡುಗಿಯರನ್ನು ಮರುಳು ಮಾಡಿ ಹಾರಿಸಿಕೊಂಡು ಹೋಗುವ ಪ್ರಕರಣ­ಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಯುವತಿಯ ಹೇಳಿಕೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್‌ ಬಗ್ಗೆ ಆಕೆ ದೂರಿನಲ್ಲಿ ತಿಳಿಸಿಲ್ಲ, ದುಬೈನ­ಲ್ಲಿರುವ ಯಾಸೀರ್‌ನ ಗೆಳತಿ ಛಾಯಾ­ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾಳೆ ಎಂದು ಆರೋಪಿ ತಿಳಿಸಿದ್ದಾನೆ. ಈ ಬಗ್ಗೆ ತನಿಖೆ ನಡೆ­ಸಲಾಗುತ್ತದೆ’ ಎಂದು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಎಂ.ಬಿ. ಬೋರಲಿಂಗಯ್ಯ ತಿಳಿಸಿದರು.
(ಪ್ರಜಾವಾಣಿ)

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (9) ಸಮ್ಮತ (1) ಅಸಮ್ಮತ (3) ಖಂಡನೆ (40) ಅಭಿಪ್ರಾಯವಿಲ್ಲ (2)

About ಗ.ಕ ವಾರ್ತಾ ವಿಭಾಗ ದುಬೈ, ಗಲ್ಫ್

ಗಲ್ಫ್ ಕನ್ನಡಿಗ ವಾರ್ತಾ ವಿಭಾಗ ದುಬೈ... ಹೆಚ್ಚಿನ ಮಾಹಿತಿಗೆ - Contact: uae@gulfkannadiga.com