ಸರಕಾರಿ ಮೈದಾನ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ; ಕೊಡಪಾನದೊಳಗಿದ್ದ ಮದ್ಯದ ಪ್ಯಾಕೇಟ್ ಸಹಿತ ಆರೋಫಿ ಬಂಧನ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (3) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ  ದೇವೇಂದ್ರ ಅವರು ಕೊಲ್ಲೂರು ಠಾಣಾ ಸರಹದ್ದಿನ ಜಡ್ಕಲ್ ಎಂಬಲ್ಲಿ ರವಿವಾರ ಸಂಜೆ ರೌಂಡ್ಸ್‌ನಲ್ಲಿರುವಾಗ ಮುದೂರು ಗ್ರಾಮದ ಹಿಂಡುಗಾನ ಸರ್ಕಾರಿ ಮೈದಾನದಲ್ಲಿ ಶಿವದಾಸ ಪೂಜಾರಿ (44) ಎನ್ನುವಾತ ಅಕ್ರಮವಾಗಿ  ಸಾರ್ವಜನಿಕರಿಗೆ ಮದ್ಯ ಮಾರಾಟ  ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಹೆಡ್‌ಕಾನ್‌ಸ್ಟೇಬಲ್‌ ಭೋಜ ಹಾಗೂ ಠಾಣಾ ಸಿಬ್ಬಂದಿ ಗೋಪಾಲ ಖಾರ್ವಿ ಮತ್ತು ಚಾಲಕ ಸುರೇಶ ಇವರ ಜೊತೆಗೆ ಇಲಾಖಾ ವಾಹನದಲ್ಲಿ ಪಂಚರೊಂದಿಗೆ ಮಾಹಿತಿ ಬಂದಂತಹ ಸ್ಥಳಕ್ಕೆ ಸಂಜೆ 5.30ಗಂಟೆಗೆ ದಾಳಿ ನಡೆಸಿದ್ದಾರೆ.

akrama madya
ಈ ವೇಳೆ ಹಿಂಡುಗಾನ ಸರ್ಕಾರಿ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಒಂದು ದೊಡ್ಡ ಅಲ್ಯೂಮಿನಿಯಂ ಕೊಡಪಾನದ ಒಳಗೆ  90 ಮಿಲೀ ಲೀಟರ್‌ನ ಒಟ್ಟು 60 ಮೈಸೂರು ಲ್ಯಾನ್ಸರ್ ವಿಸ್ಕಿಯ  ಪ್ಯಾಕೇಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಶಿವದಾಸ ಪೂಜಾರಿ  ಆ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದ ಮದ್ಯದ ಪ್ಯಾಕೇಟ್‌ಗಳನ್ನು ಕೊಡಪಾನ ಸಮೇತ ಹಾಗೂ ಮದ್ಯ ಮಾರಾಟ ಮಾಡಿದ್ದರಿಂದ ಬಂದ ನಗದು ಹಣ ರೂಪಾಯಿ 350/- ನ್ನು ವಶಡಿಸಿಕೊಳ್ಳಲಾಯಿತು. 90 ಮಿಲೀ ಲೀಟರ್‌ನ ಯ ಒಟ್ಟು 60 ಪ್ಯಾಕೇಟ್ ಮದ್ಯದ ಅಂದಾಜು ಮೌಲ್ಯ ರೂಪಾಯಿ 1560/- ಆಗಿದ್ದು, ಸ್ವಾಧೀನಪಡಿಸಲಾದ ಅಲ್ಯೂಮಿನಿಯಂ ಕೊಡಪಾನದ ಅಂದಾಜು ಬೆಲೆ ರೂಪಾಯಿ 90/- ಆಗಿರುತ್ತದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (3) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಯೋಗೀಶ್ ಕುಂಭಾಶಿ

About ಯೋಗೀಶ್ ಕುಂಭಾಶಿ