ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಅಗ್ರಹ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (7) ಸಮ್ಮತ (1) ಅಸಮ್ಮತ (1) ಖಂಡನೆ (6) ಅಭಿಪ್ರಾಯವಿಲ್ಲ (0)

Congres_kodijal_press_1

ಮಂಗಳೂರು: ಗುರುಪುರದಲ್ಲಿ ನಡೆದಿರುವ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅನ್ಯ ಧರ್ಮಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಹಾಗೂ ಅವರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಈಗಾಗಲೇ ಆಗ್ರಹ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.

ಕಾಂಗ್ರೆಸ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಹಿಂದೂ ಧರ್ಮ ರಕ್ಷಕ ಎಂದು ಹೇಳಿಕೊಳ್ಳುತ್ತಾ ಹಿಂದೂ ಧರ್ಮದ ವೇದಗಳು ಹೇಳಿರುವುದಕ್ಕೆ ವಿರೋಧವಾಗಿ ಮಾತನಾಡುತ್ತಿದ್ದಾರೆ ಇದು ಖಂಡನೀಯವಾಗಿದೆ. ಹಿಂದೂ ಬಾಂಧವರು ಇಂತಹ ಯಾವುದೇ ಹೇಳಿಕೆಗಳನ್ನು ಕಿವಿಗೆ ಹಾಕಿಕೊಳ್ಳಬಾರದು ಎಂದು ಕಾಂಗ್ರೆಸ್ ವಿನಂತಿಸುತ್ತದೆ ಎಂದರು.

Congres_kodijal_press_2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಪ್ರಭಾಕರ್ ಭಟ್ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ತಡಬಡಾಯಿಸುತ್ತಾ ಉತ್ತರಿಸಿದ ಅವರು, ಸರ್ಕಾರವು ಕಾನೂನಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾನೂನು ಏನನ್ನು ಹೇಳುತ್ತದೋ ಅದನ್ನು ಮಾಡಲು ಸರ್ಕಾರವು ಹಿಂಜರಿಯುವುದಿಲ್ಲ. ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಹೇಳುವ ಬಗ್ಗೆ ಹಾಗೂ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಸರ್ಕಾರದ ಬಗ್ಗೆ ಮಾಡುವ ಅಪಪ್ರಚಾರದ ಬಗ್ಗೆ ತಿಳಿ ಹೇಳಲು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ಕಾಂಗ್ರೆಸ್ ನಡೆಸಲಿದೆ. ಜನವರಿ ತಿಂಗಳ 20ರಿಂದ 27ರವರೆಗೆ ಈ ಸಭೆಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ಕೆಪಿಸಿಸಿ ಸದಸ್ಯ ಸುರೇಶ್ ಬಲ್ಲಾಳ್, ಮಹಮ್ಮದ್ ಮಸೂದ್, ನಾಗೇಂದ್ರ, ಅಜೀಜ್ ಬಜಾಲ್, ಭಾರತಿ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (7) ಸಮ್ಮತ (1) ಅಸಮ್ಮತ (1) ಖಂಡನೆ (6) ಅಭಿಪ್ರಾಯವಿಲ್ಲ (0)
ಕಾಪಿಕಾಡ್ ಸತೀಶ್

About ಕಾಪಿಕಾಡ್ ಸತೀಶ್

ಗ.ಕ. ವಾರ್ತಾ ವಿಭಾಗ ಮಂಗಳೂರು ಉಸ್ತುವಾರಿಯನ್ನು ನಮ್ಮ ಮಂಗಳೂರು ವರದಿಗಾರರಾದ ಸತೀಶ್ ಕಾಪಿಕಾಡ್‌ರವರು ನಿರ್ವಹಿಸುತ್ತಿದ್ದು ನಿಮ್ಮ ಯಾವುದೇ ಕಾರ್ಯಕ್ರಮಗಳ ವರದಿಗಳನ್ನು ಈ ಕೆಳಗಿನ ಈಮೈಲ್‌ಗೆ ಕಳುಹಿಸಬುದು.ಅಥವಾ ಮೊಬೈಲ್ ಸಂಖ್ಯೆ: 9035089084 ನ್ನು ಸಂಪರ್ಕಿಸಬಹುದು. sathishkapikad@gmail.com