ಪತ್ರಕರ್ತರಲ್ಲಿ ಸಾಹಿತ್ಯಾಸಕ್ತಿ ಇದ್ದಾಗ ಜನರಲ್ಲಿ ಭಾಷಾಭಿಮಾನ ಮೂಡಲಿದೆ : ಎ.ಎಸ್.ಎನ್

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (1) ಖಂಡನೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ: ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ವಿವಿಧ ರೀತಿಯ ಬೆಳವಣಿಗೆಗಳ ಜೊತೆಯಲ್ಲಿ ವೃತ್ತಿ ಬದ್ದತೆ ಹಾಗೂ ತಮ್ಮತನವನ್ನು ಉಳಿಸಿಕೊಂಡು ಮುಂದುವರೆಯುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ, ಪತ್ರಕರ್ತರು ಸುದ್ದಿಯ ವಾಸನೆಯ ಜಾಡನ್ನು ಹಿಡಿಯುವ ಗ್ರಹಣ ಶಕ್ತಿಯನ್ನು ಹೊಂದಿರಬೇಕು ಹಾಗೂ ಅವರಲ್ಲಿ ಸಾಹಿತ್ಯಾಸಕ್ತಿ ಇರಬೇಕು, ಹಾಗಾದಾಗ ಮಾತ್ರವೇ ಜನರಲ್ಲಿ ಉತ್ತಮ ಭಾಷಾಭಿಮಾನ ಬೆಳಸಲು ಸಾಧ್ಯವಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಕುಂದಾಪುರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು.

kundapur press day (5)

kundapur press day (6)

kundapur press day (8)

kundapur press day (9)

kundapur press day (4)

kundapur press day (3)

kundapur press day (7)

kundapur press day (10)

kundapur press day (2)

kundapur press day

kundapur press day (1)

ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮಂಗಳವಾರ ಸಂಜೆ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅವರು ಪ್ರಧಾನ ಆಶಯ ಭಾಷಣ ಮಾಡಿದರು.

ಆಧುನೀಕತೆಯ ಬೆಳವಣಿಗೆಯೊಂದಿಗೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿರುವ ಮಾಧ್ಯಮ ಕ್ಷೇತ್ರಗಳಲ್ಲಿ ಇಂದು ಏನಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳುವುದೆ ಕಷ್ಟ ಸಾಧ್ಯವಾಗುತ್ತಿದೆ. ೭೦ ದಶಕದ ವೇಳೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಆಧುನೀಕತೆಯ ಸ್ಪರ್ಶವಿಲ್ಲದೆ ಇದ್ದರೂ, ವೃತ್ತಿ ಬದ್ದತೆಯನ್ನು ಹೊಂದಿದ್ದ ಪತ್ರಕರ್ತರಲ್ಲಿ ಸಂಪಾದನೆಗಿಂತಲೂ ವೃತ್ತಿಯ ಬಗ್ಗೆ ಆಸಕ್ತಿ ಹಾಗೂ ಗೌರವಗಳಿದ್ದವು. ದೇಶದ ಕಾನೂನು ಹಾಗೂ ಸಂವಿಧಾನದ ಆಂಶಗಳನ್ನೆ ಬದಲಾವಣೆ ಮಾಡಬಲ್ಲ ಅಸ್ತ್ರಗಳಂತೆ ಇದ್ದ ಮಾಧ್ಯಮ ಕ್ಷೇತ್ರಗಳಲ್ಲಿ ಮೊದಲಿದ್ದ ಬದ್ದತೆಗಳು ಬದಲಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ಪತ್ರಕರ್ತರು ದಿಟ್ಟತನ ಹಾಗೂ ನಿರ್ಭೀತಿಯಿಂದ ವರದಿ ಮಾಡಿದರೇ ಜನರು ಮೆಚುವ ಜೊತೆಗೆ ಸಮಾಜದ ಕೆಡುಕುಗಳನ್ನು ಹೋಗಲಾಡಿಸಲು ಸಾಧ್ಯವಿದೆ, ಪತ್ರಕರ್ತರಾಗಿ ಯಶಸ್ಸು ಸಾಧಿಸುವ ಮನೋಭಾವನೆ ಇದ್ದವರು ಸಾಹಿತ್ಯ, ಕ್ರೀಡಾ, ಶಿಕ್ಷಣ, ರಾಜಕೀಯ ಸೇರಿದಂತೆ ಸಮಾಜದ ಎಲ್ಲ ಆಗು ಹೋಗುಗಳ ಕುರಿತು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಧ್ಯಯನ ಹಾಗೂ ಅನುಭಗಳಿಂದ ಜ್ಞಾನವನ್ನು ವೃದ್ದಿಸಿಕೊಳ್ಳುವ ಮೂಲಕ ವೃತ್ತಿ ಗೌರವವನ್ನು ಹೆಚ್ಚಿಸಲು ಯುವ ಪತ್ರಕರ್ತರು ಮುಂದಾಗಬೇಕು ಎಂದು ಅವರು ಹೇಳಿದರು.

ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈ‌ಎಸ್‌ಪಿ ಸಿ.ಬಿ ಪಾಟೀಲ್ ಮಾತನಾಡುತ್ತಾ, ಆಧುನಿಕ ಪತ್ರಿಕಾ ರಂಗದಲ್ಲಿ ಸ್ಫರ್ಧೆಗಳು ಜಾಸ್ಥಿಯಿದ್ದು, ಪತ್ರಕರ್ತರು ಒಳಜಗಳವಿಲ್ಲದೇ ಆರೋಗ್ಯಕರ ಸ್ಪರ್ಧೆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕೊಡುಗೆಯನ್ನು ನೀಡಬೇಕು, ಪತ್ರಿಕಾ ರಂಗವೆನ್ನುವುದು ಪವಿತ್ರವಾದ ರಂಗವಾಗಿದ್ದು ಈ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರೂ ತಮ್ಮ ವೃತ್ತಿನಿಷ್ಟತೆಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಇದೆ ಸಂದರ್ಭದಲ್ಲಿ ಕುಂದಾಪುರದ ಹಿರಿಯ ಪತ್ರಿಕಾ ವಿತರಕರುಗಳಾದ ಶಂಕರಾಚಾರ್ಯ ಗಂಗೊಳ್ಳಿ ಹಾಗೂ ವಿಠ್ಠಲ್ ಪೈ ಅವರುಗಳನ್ನು ಸನ್ಮಾನಿಸಲಾಯಿತು.

ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಹಾಗೂ ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಕಾರ್‍ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ರಾಯಪ್ಪನಮಠ ಉಪಸ್ಥಿತರಿದ್ದರು.
ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ರಾಜೇಶ್ ಕೆ.ಸಿ. ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು.

ಕಾರ್ಯಕ್ರಮ ಸಂಘಟನಾ ಸಮಿತಿಯ ನಾಗರಾಜ್ ವಂಡ್ಸೆ ಹಾಗೂ ಲೋಕೇಶ್ ಆಚಾರ್ಯ ಸಹಕಾರ ನೀಡಿದ್ದರು. ಪತ್ರಕರ್ತರಾದ ರಾಘವೇಂದ್ರ ಪೈ ಗಂಗೊಳ್ಳಿ ಸ್ವಾಗತಿಸಿದರು, ಅರುಣ್ ಶಿರೂರು ನಿರೂಪಿಸಿದರು, ಚಂದ್ರಶೇಖರ ಬೀಜಾಡಿ ಸನ್ಮಾನಿತರ ವಿವರ ನೀಡಿದರು, ಕೆ.ಜಿ. ವೈದ್ಯ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (1) ಖಂಡನೆ (0) ಅಭಿಪ್ರಾಯವಿಲ್ಲ (0)
ಯೋಗೀಶ್ ಕುಂಭಾಶಿ

About ಯೋಗೀಶ್ ಕುಂಭಾಶಿ